ಕಾಡಿನಿಂದ ನಾಡಿಗೆ ಬಂದು ಬೀಡುಬಿಟ್ಟ ತಾಯಿ ಆನೆ ಮತ್ತು ಮರಿ ಆನೆ..

Promotion

ಮೈಸೂರು,ಅಕ್ಟೋಬರ್,31,2020(www.justikannada.in): ಎಚ್ ಡಿ ಕೋಟೆ ತಾಲೂಕಿನ ಮೊಳೆಯೂರು ವಲಯದಲ್ಲಿ ಕಾಡಿನಿಂದ ನಾಡಿಗೆ ಬಂದು ತಾಯಿ ಆನೆ ಮತ್ತು ಮರಿ ಆನೆ ಬೀಡು ಬಿಟ್ಟಿವೆ.

ಮೊಳೆಯೂರು ವಲಯದ ಕಂದಲಿಕೆ ಗ್ರಾಮದ ನುಗು ಹೊಳೆಯಂಚಲ್ಲಿ ತಾಯಿ ಆನೆ ಮತ್ತು ಮರಿ ಆನೆಗಳು ಬೀಡುಬಿಟ್ಟಿದ್ದು, ಈ ನಡುವೆ ಮರಿ ಆನೆ ತಾಯಿ ಆನೆಯಿಂದ ಬೇರ್ಪಟ್ಟು ಕೆಲಕಾಲ ಗಾಬರಿಗೊಂಡಿತು. ಬಳಿಕ ಅಲ್ಲಿದ್ದ ಗ್ರಾಮಸ್ಥರು ಮರಿಯಾನೆಯನ್ನ ಮತ್ತೆ ತಾಯಿ ಬಳಿ ಕಳುಹಿಸಲು ಯತ್ನಿಸಿದರು. ಈ ವೇಳೆ ಕೊನೆಗೂ ಮರಿಯಾನೆ ತನ್ನ ತಾಯಿ ಆನೆ ಮಡಿಲು ಸೇರಿತು.mysore- hd kote-mother elephant - baby elephant – forest

ಇನ್ನು ಗ್ರಾಮಸ್ಥರ ಕೂಗಾಟದಿಂದ ಎರಡು ಆನೆಗಳು ದಿಕ್ಕುತೋಚದೆ  ನಿತ್ರಾಣಗೊಂಡು ನುಗು ಹೊಳೆ ಮದ್ಯೆ ನಿಂತಿದ್ದು, ಬೆಳಗ್ಗೆಯಿಂದಲೂ ಇತ್ತಿಂದತ್ತ ಅತ್ತಿಂದಿತ್ತ ಓಡಾಡುತ್ತಿವೆ. ಈ ಮಧ್ಯೆ ಸ್ಥಳಕ್ಕೆ ಮೊಳೆಯೂರು ವಲಯದ ಅರಣ್ಯ ಸಿಬ್ಬಂದಿ ಭೇಟಿ ನೀಡಿದ್ದು, ಬೆಳಗ್ಗೆಯಿಂದ ಆನೆಗಳನ್ನು ಕಾಡಿಗಟ್ಟಲು ಅರಣ್ಯ ಇಲಾಖೆ ಕಾರ್ಯಾಚರಣೆ ಕೈಗೊಂಡಿಲ್ಲ ಎಂಬ ಆರೋಪ ಕೇಳಿ ಬಂದಿದೆ.

Key words: mysore- hd kote-mother elephant – baby elephant – forest