ತಮ್ಮನ ಆತ್ಮಹತ್ಯೆ ವಿಚಾರ ತಿಳಿದು ಅಣ್ಣನೂ ನೇಣಿಗೆ ಶರಣು….

Promotion

ಮೈಸೂರು,ಫೆಬ್ರವರಿ,26,2021(www.justkannada.in): ತಮ್ಮ ಆತ್ಮಹತ್ಯೆ ಮಾಡಿಕೊಂಡಿದ್ದ ವಿಷಯ ತಿಳಿದು ಅಣ್ಣನೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರು ಜಿಲ್ಲೆ ಹೆಚ್.ಡಿ ಕೋಟೆ ತಾಲ್ಲೂಕಿನಲ್ಲಿ  ನಡೆದಿದೆ.jk

ಎಚ್.ಡಿ.ಕೋಟೆ ತಾಲ್ಲೂಕಿನ ಎಲೆಗುಂಡಿ ಗ್ರಾಮದಲ್ಲಿ ಈ ಮನಕಲಕುವ ಘಟನೆ ನಡೆದಿದೆ. ವೆಂಕಟೇಶ್(28), ಹರೀಶ್(26) ಮೃತಪಟ್ಟ ಅಣ್ಣತಮ್ಮಂದಿರು.  ರೈತನಾಗಿದ್ದ ಹರೀಶ್​ ಟ್ರ್ಯಾಕ್ಟರ್ ಚಾಲಕನಾಗಿದ್ದ. ಈ ಮಧ್ಯೆ ಹರೀಶ್ ಟ್ರ್ಯಾಕ್ಟರ್ ರ್ಯಾಶ್ ಡ್ರೈವ್ ಮಾಡುತ್ತಿದ್ದನು. ಈ ಹಿನ್ನೆಲೆಯಲ್ಲಿ ಹರೀಶ್ ಗೆ ತಂದೆ ಚಿನ್ಮಯಿಗೌಡ ಹಾಗೂ ಅಣ್ಣ ವೆಂಕಟೇಶ್  ಬುದ್ಧಿವಾದ ಹೇಳಿದ್ದರು. ಮೈಸೂರಿನಲ್ಲಿ ಕೆಲಸ ಮಾಡಿಕೊಂಡಿದ್ದ ಅಣ್ಣ ವೆಂಕಟೇಶ್ ತಮ್ಮನಿಗೆ ಕರೆಮಾಡಿ ಬುದ್ದಿವಾದ ಹೇಳಿದ್ದನು.mysore- HD Kote- brothers-surrender -suicide.

ಆದರೆ ಆತ್ಮೀಯನಾಗಿದ್ದ ಅಣ್ಣ ಬೈದ ಹಿನ್ನೆಲೆಯಲ್ಲಿ ಹರೀಶ್ ನೇಣಿಗೆ ಶರಣಾಗಿದ್ದಾನೆ. ಈ ನಡುವೆ ತಮ್ಮ ನೇಣು ಬಿಗಿದುಕೊಂಡಿರುವ ದೃಶ್ಯಗಳನ್ನು ಸ್ನೇಹಿತರು ಅಣ್ಣ ವೆಂಕಟೇಶ್ ಮೊಬೈಲ್ ಫೋನ್ ​ಗೆ ಕಳುಹಿಸಿದ್ದರು. ವಿಡಿಯೋ ನೋಡಿದ ವೆಂಕಟೇಶ್,  ತಮ್ಮ ಹರೀಶ್ ಸಾವಿಗೆ ನಾನೇ ಕಾರಣವಾದೆ ಎಂದು ಭಾವಿಸಿ ಊರಿಗೆ ಬರುವ ಬದಲು ಸರಗೂರು ರಸ್ತೆ ಕಡೆ ಹೋಗಿ ತಾನೂ ನೇಣಿಗೆ ಶರಣಾಗಿದ್ದಾನೆ. ಈ ಕುರಿತು ಎಚ್.ಡಿ.ಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ENGLISH SUMMARY….

Brothers commit suicide in H.D.Kote Taluk
Mysuru, Feb. 26, 2021 (www.justkannada.in): In a tragic incident, brothers have committed suicide in H.D. Kote Taluk, Mysuru District.mysore- HD Kote- brothers-surrender -suicide.
The deceased are identified as Venkatesh (28) and Harish (26), residents of Yelehundi Village in H.D. Kote Taluk. Younger brother Harish was a tractor driver and he was said to be a rash driver. His father Chinmayigowda and elder brother had advised him not to drive rashly. Venkatesh who was working in Mysuru had called him over the phone and had advised him, following which Harish is said to have committed suicide by hanging himself. Harish’s friends had sent the suicide video to his elder brother Venkatesh on his mobile. Venkatesh who was dejected looking at the video also committed suicide. He also hanged himself at a place on Sarguru Road. A case has been registered at the H.D. Kote Police station.
Keywords: Brothers / suicide/ H.D. Kote taluk

Key words: mysore- HD Kote- brothers-surrender -suicide.