ಅತ್ತೆ, ಮೈದುನನ ಮೇಲೆ ಮಚ್ಚಿನಿಂದ ಹಲ್ಲೆ: ನಾಳೆ ಹಸಮಣೆ ಏರಬೇಕಿದ್ದ ವರ ಸಾವು ಬದುಕಿನ ನಡುವೆ ನರಳಾಟ…

Promotion

ಮೈಸೂರು,ಜ,29,2020(www.justkannada.in): ವ್ಯಕ್ತಿಯೋರ್ವ ತನ್ನ ಅತ್ತೆ ಮತ್ತು ಬಾಮೈದನ ಮೇಲೆ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ.

ಮೈಸೂರು ಜಿಲ್ಲೆ ಹೆಚ್.ಡಿ ಕೋಟೆ ತಾಲ್ಲೂಕಿನ ಯರಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಕೆಂಡಗಣ್ಣ ಎಂಬಾತನೇ ಈ ಕೃತ್ಯವೆಸಗಿರುವುದು. ಕೌಟುಂಬಿಕ ಕಲಹ ಹಿನ್ನೆಲೆ ನಿನ್ನೆ ರಾತ್ರಿ ಮಲಗಿದ್ದ ವೇಳೆ ಅತ್ತೆ ಹೇಮಾವತಿ ಮತ್ತು ಬಾಮೈದ ಮನು ಎಂಬುವವರ ಮೇಲೆ ಕೆಂಡಗಣ್ಣ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ.

ಗಾಯಗೊಂಡ ಮನು ಮತ್ತು ಹೇಮಾವತಿ ಅವರನ್ನ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.  ಇನ್ನುಬಾಮೈದ ಮನುವಿನ ವಿವಾಹ ನಾಳೆ ಇತ್ತು. ನಾಳೆ ಮನು ಹಸಮಣೆ ಏರಬೇಕಿತ್ತು. ಇಂದು ಹಲ್ಲೆಗೊಳಗಾಗಿ ಮನು ಸಾವು ಬದುಕಿನೊಡನೆ ಸೆಣಸಾಡುತ್ತಿದ್ದು ವಿವಾಹ ಸಮಾರಂಭ ಸ್ಥಗಿತಗೊಂಡಿದೆ.

ಈ ಕುರಿತು ಎಚ್.ಡಿ.ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: mysore-hd kote-assult- tomorrow-marriage