ಕೇಂದ್ರದ ಮಾರ್ಗಸೂಚಿ ಪ್ರಕಾರ ಆ. 5ರಿಂದ ಮೈಸೂರಿನ ಎಲ್ಲಾ ಜಿಮ್ ಮತ್ತು ಫಿಟ್ನೆಸ್ ಸೆಂಟರ್‌ಗಳು ಪುನಾರಂಭ…

Promotion

ಮೈಸೂರು,ಆ,4,2020(www.justkannada.in): ಮೈಸೂರಿನ ಎಲ್ಲಾ ಜಿಮ್ ಮತ್ತು ಫಿಟ್ನೆಸ್ ಸೆಂಟರ್‌ಗಳು ಆಗಸ್ಟ್ 5 ರಿಂದ ಪುನರಾರಂಭಗೊಳ್ಳುತ್ತದೆ ಎಂದು ಮೈಸೂರು ಜಿಮ್ ಮತ್ತು ಫಿಟ್ನೆಸ್ ಮಾಲೀಕರ ಸಂಘದ ಪದಾಧಿಕಾರಿಗಳು ಮಾಹಿತಿ ನೀಡಿದರು.jk-logo-justkannada-logo

ಮೈಸೂರು ಜಿಮ್ ಮತ್ತು ಫಿಟ್ನೆಸ್ ಮಾಲೀಕರ ಸಂಘದ ವತಿಯಿಂದ ನಗರದ ಕಾಳಿದಾಸ ರಸ್ತೆಯಲ್ಲಿರುವ ಅರ್ನಾಲ್ಡ್ ಜಿಮ್ ಸೆಂಟರ್ ನಲ್ಲಿ ಸುದ್ದಿಗೋಷ್ಟಿ ನಡೆಸಲಾಯಿತು. ಈ ವೇಳೆ ಮಾತನಾಡಿದ ಮೈಸೂರು ಜಿಮ್ ಮತ್ತು ಫಿಟ್ನೆಸ್ ಮಾಲೀಕರ ಸಂಘದ ಪದಾಧಿಕಾರಿಗಳು, ಮೈಸೂರಿನ ಎಲ್ಲಾ ಜಿಮ್ ಮತ್ತು ಫಿಟ್ನೆಸ್ ಸೆಂಟರ್‌ಗಳು ಆಗಸ್ಟ್ 5 ರಿಂದ ಪುನಾರಂಭಗೊಳ್ಳುತ್ತಿದೆ. ಎಲ್ಲಾ ಕೇಂದ್ರ ಸರ್ಕಾರದ ಮಾರ್ಗಸೂಚಿ ಅನುಸಾರವಾಗಿ ಅಂದರೆ ಸಾಮಾಜಿಕ ಅಂತರ , ಸ್ಯಾನಿಟೈಸೇಷನ್ ,Thermal scanning ಮತ್ತು ಇನ್ನು ಹಲವು ಷರತ್ತುಗಳನ್ನು ಪಾಲಿಸುತ್ತಾ ಸಾರ್ವಜನಿಕರ ಮತ್ತು ಸದಸ್ಯರ ಆರೋಗ್ಯದ ಹಿತದೃಷ್ಟಿ ಕಾಪಾಡುವುದು ನಮ್ಮ ಎಲ್ಲಾ ಜಿಮ್ ಮಾಲೀಕರ ಕರ್ತವ್ಯವಾಗಿದೆ  ಎಂದು ತಿಳಿಸಿದರು.

ಮೈಸೂರಿನ ಜನರಲ್ಲಿ ಮತ್ತೊಮ್ಮೆ ಕೇಳಿಕೊಳ್ಳುವುದೇನೆಂದರೆ , ಯಾವುದೇ ಆತಂಕ , ಭಯ ಬೇಡ ತಮ್ಮ ಮನೆಯ ಹತ್ತಿರದ ಜಿಮ್ ಮತ್ತು ಪಿಟ್‌ನೆಸ್‌ ಸೆಂಟರ್‌ಗಳಿಗೆ ಹೋಗಿ ತಮ್ಮ ಆರೋಗ್ಯ ಕಾಪಾಡಿಕೊಳ್ಳಿ ಕೊರೋನಾ ವಿರುದ್ಧ ಹೋರಾಡಬೇಕು ಎಂದು ಮನವಿ ಮಾಡಿದರು.mysore-gym-fitness-centers-mysore-reopen-aug-5

ಸುದ್ದಿಗೋಷ್ಟಿಯಲ್ಲಿ ಹರ್ಷ ಎಂ ಎಸ್ , ಸಯದ್ ಸಲ್ಮಾನ್ , ಸುರೇಶ್ ಚಂದ್ರ , ಆಕಾಶ್ ದೀಪ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Key words: mysore-gym –fitness- centers – Mysore –reopen- aug 5