ಮೈಸೂರು, ಏ.21, 2020 : (www.justkannada.in news) ನರಸಿಂಹರಾಜ ಪೊಲೀಸ್ ಠಾಣಾ ವ್ಯಾಪ್ತಿಯ ಆಲೀಂ ನಗರದಲ್ಲಿ ಕೆಲ ದುಷ್ಕರ್ಮಿಗಳು ಆಶಾ ಕಾರ್ಯಕರ್ತೆಗೆ ಧಮ್ಕಿ ಹಾಕಿದ ಘಟನೆ ನಡೆದಿದೆ.
ಬನ್ನಿಮಂಟಪ ಸರ್ಕಾರಿ ಆಸ್ಪತ್ರೆಯ ಆಶಾ ಕಾರ್ಯಕರ್ತೆ ಸುಮಯಾ ಪಿರ್ದೋಶ್ ಗೆ ಬೆದರಿಕೆ ಹಾಕಲಾಗಿದೆ. ಬೆಂಗಳೂರಿನ ಸಾದಿಕ್ ನಗರದಲ್ಲಿ ಆಶಾ ಕಾರ್ಯಕರ್ತೆಗೆ ಪುಂಡರು ಗುಂಪು ಹಲ್ಲೆ ಮಾಡಿದ್ದ ಘಟನೆ ಮಾಸುವ ಮುನ್ನವೇ ಮೈಸೂರಿನಲ್ಲೂ ಈ ಘಟನೆ ನಡೆದಿದೆ.

ಕರೋನಾ ಲಕ್ಷಣಗಳ ಬಗ್ಗೆ ಸರ್ವೆ ಮಾಡುವ ವೇಳೆ ಮೂವರು ಪುಂಡರಿಂದ ಈ ದೌರ್ಜನ್ಯ ನಡೆದಿದೆ. ಮಾಸ್ಕ್ ಹಾಕಿ, ಸಾಮಾಜಿಕ ಅಂತರ ಕಾಯ್ದಿಕೊಳ್ಳಿ ಎಂದಿದ್ದಕ್ಕೆ ಗಲಾಟೆ ಮಾಡಿದ ಪುಂಡರು.ಮೆಹಬೂಬ್, ಖಲೀಲಾ,ಜೀಸನ್ ಎಂಬುವರಿಂದ ಗಲಾಟೆ.
ಅವಾಚ್ಯ ಶಬ್ದಗಳಿಂದ ನಿಂದಿಸಿ ಆಶಾ ಕಾರ್ಯಕರ್ತೆ ಮೇಲೆ ಮುಗಿಬಿದ್ದ ಪುಂಡರು.
ಎನ್ ಆರ್ ಠಾಣೆಗೆ ದೂರು ನೀಡಿದ ಆಶಾ ಕಾರ್ಯಕರ್ತೆ. ಮೂವರ ಮೇಲೆ ಕಾನೂನು ಕ್ರಮಕ್ಕೆ ಮುಂದಾದ ಪೋಲಿಸರು.ಮೂವರನ್ನ ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದ್ದಾರೆ.
key words : mysore-goodas-attack-asha-worker-police
 
            