PNG ಸಹವಾಸ, ಮೂರು ಹೊತ್ತು ಉಪವಾಸ : ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್..!

 

ಮೈಸೂರು, ಜ.31, 2022 : (www.justkannada.in news): ನಗರದಲ್ಲಿ ಗ್ಯಾಸ್ ಪೈಪ್ ಲೈನ ಅಳವಡಿಕೆ ವಿಚಾರದಲ್ಲಿ ಗೊಂದಲಗಳಿವೆ. ಕೇಂದ್ರ ಸರ್ಕಾರ ಖಾಸಗಿಯ 17 ಕಂಪನಿಗೆ ಟೆಂಡರ್ ಕೊಟ್ಟಿದೆ. ಇದು ಖಾಗೀಕರಣ ಮಾಡುವ ಹುನ್ನಾರ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಆರೋಪಿಸಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಹೇಳಿದಿಷ್ಟು…

ಕಾಂಗ್ರೆಸ್ ಸರ್ಕಾರ ಇದ್ದಾಗ ಗ್ಯಾಸ್ ಸಿಲಿಂಡರ್ ಗೆ ಸಬ್ಸಿಡಿ ಕೊಡಲಾಗುತ್ತಿತ್ತು. ಈಗ ಬಿಜೆಪಿ ಇದನ್ನು ಸ್ಥಗಿತ ಗೊಳಿಸಿದೆ. ಗ್ಯಾಸ್ ಬೆಲೆ 340 ಇದ್ದಿದ್ದು ಈಗ 1000 ರೂ ಆಗಿದೆ. ಮುಂದೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೂ ಸಬ್ಸಿಡಿ‌ ಕೊಡಲು ಆಗಬಾರು ಎಂಬುದು ಬಿಜೆಪಿಯವರ ಇನ್ನರ್ ಅಜೆಂಡಾ.

ಈಗ ಪೈಪ್ ಲೈನ್ ಮೂಲಕ 500 ರೂ ಗ್ಯಾಸ್ ನೀಡುತ್ತೇವೆ ಎಂಬುದು ಶುದ್ಧ ಸುಳ್ಳು. ಪ್ರತಿ ಮನೆಗೆ ಪ್ರಾರಂಭದಲ್ಲಿ 7154 ರೂ. ಕಟ್ಟಬೇಕು. ಇದನ್ನು ಪ್ರತಾಪ್ ಸಿಂಹ ಮರೆಮಾಚಿದ್ದಾರೆ. ಜತೆಗೆ ಗ್ಯಾಸ್ ಬಿಲ್ ಕಟ್ಟದಿದ್ದರೆ ತಾತ್ಕಾಲಿಕ ತಡೆಗೆ ಹಣ ಕಟ್ಟಬೇಕು. ಮತ್ತೆ ಕನೆಕ್ಷನ್ ಬೇಕಿದ್ದರೆ ಆದಕ್ಕೂ ಹಣ ಕಟ್ಟಬೇಕು. ತಿಂಗಳ‌‌ ಮಿನಿಮಮ್ ಬಿಲ್‌ಕೊಡಲು 50 ರೂ. ಚಾರ್ಜ್ ಮಾಡಲಾಗುತ್ತೆ. ಒತ್ತಡದಿಂದ ಕನೆಕ್ಷನ್ ಕಟ್ ಮಾಡಿದರೆ ಅದಕ್ಕೂ ಹಣ ಕಟ್ಟಬೇಕು. ಹೀಗೆ ಇನ್ನೂ ಅನೇಕ ರೀತಿಯಲ್ಲಿ ಹಣ ಸುಲಿಗೆ ಮಾಡಲಾಗುವುದು. ಪ್ರತಾಪ್ ಸಿಂಹ ಇದನ್ನ ಯಾಕೆ ಹೇಳುತ್ತಿಲ್ಲ.

ಇದು ಮೋದಿಯವರ ಕನಸಿನ ಪ್ರಾಜೆಕ್ಟ್ ಅಂತೀರಿ, ಇದು ಮೋದಿ ಕನಸಿನ ಪ್ರಾಜೆಕ್ಟ್ ಅಲ್ಲ. ಖಾಸಗಿಯವರ ಕಮಿಷನ್ ಪೆಟ್ ಪ್ರಾಜೆಕ್ಟ್. ಬರಿ ಸುಳ್ಳು ಹೇಳಬೇಡಿ.

liquor-store-middle-class-state-government-completely-inactive-kpcc-spokesperson-m-laxman

ಪ್ರತಾಪ್ ಸಿಂಹಗೆ ಖಾಸಗೀಯವರ ವಿಚಾರವಾಗಿ ಹೆಚ್ಚಿನ ಕಾಳಜಿ ಯಾಕೆ..?

ಹಿಂದೆ ಕೋವಿಡ್ ಕೇರ್ ಸೆಂಟರ್ ಖಾಸಗೀಯವರಿಗೆ ನೀಡಿ ಹಣ ಮಾಡಿದ್ರಿ. ಆಗಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿಯವ್ರೆ ಹೇಳಿದ್ರು. ಈಗ ಗ್ಯಾಸ್ ವಿಚಾರದಲ್ಲಿ ಖಾಸಗಿ ಬಗ್ಗೆ ಒಲವು ಯಾಕೆ.? ಖಾಸಗಿಯವರು ಬಡ ಬಗ್ಗರನ್ನು ಸುಲಿಗೆ ಮಾಡಿಬಿಡುತ್ತಾರೆ. ನಿಮ್ಮ ಪಕ್ಷದ ಪಾಲಿಕೆ ಸದಸ್ಯರು ಮೀಟಿಗ್ ಗೆ ಬರಲಿಲ್ಲ. ಹಾಗಿದ್ರೆ ಇದರಲ್ಲಿ ಏನೊ ವಿಚಾರ ಇರಬೇಕು ಅಲ್ವಾ. ನಿಮ್ಮ ಪಕ್ಷದ ಶಾಸಕರು ಕಮಿಷನ್ ದುಡ್ ಕೇಳುತ್ತಿದ್ದಾರೆ ಎಂಬ ರೀತಿ ನೀವೇ ಮಾತನಾಡಿದ್ದೀರಿ. ಕಮಿಷನ್ ವಿಚಾರ ಅಲ್ಲ ಅಂತ ಶಾಸಕ ನಾಗೇಂದ್ರ ಚಾಮುಂಡೇಶ್ವರಿ ಮೇಲೆ ಆಣೆ ಮಾಡ್ತಾರೆ. ಏನು ಇದರ ಅರ್ಥ. ಈ ಯೋಜನೆ ಬಗ್ಗೆ ಸಂಪೂರ್ಣ ಮಾಹಿತಿ ನೀಡಬೇಕು. ಸೇಪ್ಟಿ ಬಗ್ಗೆ ಮಾಹಿತಿ ನೀಡಬೇಕು.

ಒಂದು ವಿಚಾರದಲ್ಲಿ ಸಂಸದ ಪ್ರತಾಪ್ ಸಿಂಹಾಗೆ ಕಾಂಗ್ರೆಸ್ ಥ್ಯಾಕ್ಸ್ ಹೇಳಲೇಬೇಕು. ಈಗಲಾದರೂ ಸತ್ಯ ಒಪ್ಪಿಕೊಂಡ್ರಿ. ಸತ್ಯ ಯಾವತ್ತಿದ್ದರೂ ಬರಲೇ ಬೇಕು. ನಾಲ್ಕು ವರ್ಷದ ಮೈಸೂರಿಗೆ ತಂದಿದ್ದು ಕೇವಲ 50 ಕೋಟಿ ಎಂದು ಸತ್ಯ ಹೇಳಿದ್ದಾರೆ. ಇದಕ್ಕೆ ಕಾಂಗ್ರೆಸ್ ಪಕ್ಷ ಧನ್ಯವಾದ ಹೇಳಲೇಬೇಕು. ಈಗಲಾದರು ಒಪ್ಪಿಕೊಂಡಿರಲ್ಲ‌ ಹಾಗೆ ಬೆಂಗಳೂರು ಮೈಸೂರು ಹೈವೆ ವಿಚಾರದಲ್ಲೂ ಸತ್ಯ ಒಪ್ಪಿಕೊಳ್ಳಿ. ಸುದ್ದಿಗೋಷ್ಠಿಯಲ್ಲಿ ಲಕ್ಷ್ಮಣ್ ಹೇಳಿಕೆ.

ಮೈಸೂರು ಕೊಡಗಿಗೆ ಸಂಸದ ಪ್ರತಾಪ್ ಸಿಂಹ‌ ಅವರ ಕೊಡುಗೆ ಶೂನ್ಯ. ಕಾಂಗ್ರೆಸ್ ಸರ್ಕಾರದ ಅವಧಿಯ ಯೋಜನೆಗಳನ್ನು ಮಾತ್ರ ಇವರು ಪೂರ್ಣಗೊಳಿಸುತ್ತಿದ್ದಾರೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ನೂತನ ಯೋಜನೆಗಳನ್ನು ಜಾರಿಗೊಳಿಸಿಲ್ಲ. ಬೆಂಗಳೂರು-ಮೈಸೂರು ಹೈ ವೇ ಕಾಮಗಾರಿಯ ಫಲಶೃತಿ ಸಿದ್ದರಾಮಯ್ಯ ಮತ್ತು ಆಸ್ಕರ್ ಫರ್ನಾಂಡೀಸ್ ಅವರಿಗೆ ಸಲ್ಲಬೇಕು.

ಆರು ತಿಂಗಳ ಆಡಳಿತದ ಬಗ್ಗೆ ಪಟ್ಟಿ ಬಿಡುಗಡೆ ವಿಚಾರ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ವಾಗ್ದಾಳಿ. ಜಿಲ್ಲಾ ಉಸ್ತುವಾರಿ ಸಚಿವರನ್ನು ಬದಲಾಯಿಸಿದ್ದೇ ಇವರ ಸಾಧನೆ. ಭ್ರಷ್ಟಾಚಾರವನ್ನು ತುಟ್ಟತುದಿಗೆ ತೆಗದುಕೊಂಡು ಹೋಗಿರುವುದು ನಿಮ್ಮ ಸಾಧನೆಯಾಗಿದೆ. ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ತರುವಲ್ಲಿ ವಿಫಲರಾಗಿದ್ದಾರೆ. ಕೊರೊನಾ ಹೆಸರಿನಲ್ಲಿ ಲೂಟಿ ಮಾಡುತ್ತಿದ್ದಾರೆ. ಬಿಜೆಪಿಯ ಜನಪ್ರತಿನಿಧಿಗಳು ಹಾದಿ ಬೀದಿಯಲ್ಲಿ ಆರೋಪ ಪ್ರತ್ಯಾರೋಪಗಳಲ್ಲಿ ತೊಡಗಿದ್ದಾರೆ. ಇದು ಬಸವರಾಜ ಬೊಮ್ಮಾಯಿಯವರ ಸರ್ಕಾರದ ಸಾಧನೆಯಾಗಿದೆ. ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ವಾಗ್ದಾಳಿ.

key words : mysore-gas-pipe-connection-congress