ಗ್ಯಾಂಗ್ ರೇಪ್ ಪ್ರಕರಣ ಗಂಭೀರವಾಗಿ ಪರಿಗಣಿಸಿಲ್ಲ: ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸರ್ಕಾರ, ಪೊಲೀಸರು ವಿಫಲ -ಮಾಜಿ ಸಿಎಂ ಸಿದ್ಧರಾಮಯ್ಯ ವಾಗ್ದಾಳಿ.

ಮೈಸೂರು,ಸೆಪ್ಟಂಬರ್ ,1,2021(www.justkannada.in):  ಮೈಸೂರಿನಲ್ಲಿ ನಡೆದ ಗ್ಯಾಂಗ್ ರೇಪ್ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿಲ್ಲ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸರ್ಕಾರ ಮತ್ತು ಪೊಲೀಸರು ವಿಫಲರಾಗಿದ್ದಾರೆ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಆರೋಪಿಸಿದರು.

ಮೈಸೂರಿನಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಸಿಎಂ ಸಿದ್ಧರಾಮಯ್ಯ, ಆಗಸ್ಟ್ 21 ರಿಂದ ಜಿಂದಾಲ್  ಪ್ರಕೃತಿ ಚಿಕಿತ್ಸಾ ಕೇಂದ್ರದಲ್ಲಿ ಟ್ರೀಟಮೆಂಟ್ ಗೆ ಹೋಗಿದ್ದೆ.  ಆದ್ದರಿಂದ ಮೈಸೂರಿಗೆ ಬರಲು ಆಗಿರಲಿಲ್ಲ. ಮೈಸೂರು ನಗರದಲ್ಲಿ ಹಿಂದೆಂದೂ ನಡೆಯದ ಘಟನೆ ನಡೆದು ಹೋಗಿದೆ.ಇದೊಂದು ಅಮಾನುಷ ಘಟನೆ. ಈ ಘಟನೆ ನಡೆದ ತಕ್ಷಣ ನಾನು ಬರಲು ಆಗಲಿಲ್ಲ. ನಾನು ಅಲ್ಲಿಂದಲೆ ಟ್ವೀಟ್ ಮಾಡಿದ್ದೆ. ಮೈಸೂರು ಒಂದು ಸಾಂಸ್ಕೃತಿಕ ಪಾರಂಪರಿಕ ನಗರ. ಇದು ಟೂರಿಸ್ಟ್ ಸೆಂಟರ್ ಹಾಗೂ ಶಿಕ್ಷಣ ಕೇಂದ್ರ ಕೂಡ. ದೇಶ ವಿದೇಶಗಳಿಂದ ಹೊರರಾಜ್ಯದಿಂದ ಬಹಳ ಜನ ಪ್ರವಾಸಿಗರು ಬರ್ತಾರೆ. ಇಂತಹ ನಗರದಲ್ಲಿ ಸರ್ಕಾರ ಮತ್ತು ಪೊಲೀಸ್ ಬಹಳ ಜಾಗರೂಕತೆಯಿಂದ ಇರಬೇಕು ಎಂದು ಹೇಳಿದರು.

ದೆಹಲಿಯಲ್ಲಿ ನಿರ್ಭಯ ಕೇಸ್ ಆದ ಮೇಲೆ ಮೈಸೂರು ನಗರದಲ್ಲಿ ನಡೆದ ಗ್ಯಾಂಗ್ ರೇಪ ಹೇಯಕೃತ್ಯ. ನಾಗರೀಕ ಸಮಾಜ ತಲೆ ತಗ್ಗಿಸುವಂತ ಕೃತ್ಯ. ಇತ್ತೀಚೆಗೆ ಮೈಸೂರಿನಲ್ಲಿ ಕೊಲೆ ಸುಲಿಗೆ ದರೋಡೆ ಅತ್ಯಾಚಾರ, ಕಳ್ಳತನ ದಂತಹ ಕ್ರಿಮಿನಲ್ ಪ್ರಕರಣ ಹೆಚ್ಚಾಗಿವೆ. ಇದರ ಅರ್ಥ ಮೈಸೂರು ನಗರದಲ್ಲಿ ಕಾನೂನು ಸುವ್ಯವಸ್ಥೆ ಮುರಿದು ಬಿದ್ದಿದೆ. ಕಾನೂನು ವ್ಯವಸ್ಥೆ ಸರಿಮಾಡಲು ಸರ್ಕಾರವಾಗಲಿ ಮೈಸೂರು ಪೊಲೀಸರಾಗಲಿ ಯಾವ ಪ್ರಾಮಾಣಿಕ ಪ್ರಯತ್ನ ಮಾಡಿಲ್ಲ ಎಂದು ಸಿದ್ಧರಾಮಯ್ಯ ಕಿಡಿಕಾರಿದರು.

ಈ ಕೃತ್ಯ ನಡೆದ ಸ್ಥಳ ಆಲನಹಳ್ಳಿ  ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುತ್ತೆ‌. ರಿಂಗ್ ರೋಡ್ ಕೂಡ ಕೂಗಳತೆ ದೂರದಲ್ಲಿ ಇದೆ. ಪೊಲೀಸರ ಹೇಳಿಕೆ ಪ್ರಕಾರ ಸಂಜೆ ವೇಳೆ ಜನರು ಬರುತ್ತಾ ಇರ್ತಾರೆ. ಅದರೆ ಹೆಚ್ಚು ಸಾರ್ವಜನಿಕರು ಓಡಾಟ ಇಲ್ಲ. ಪೊಲೀಸರು ಹತ್ತಿರ ಗರುಡ ವಾಹನ ಇದೆ. ಆ ಜಾಗ ಪೊಲೀಸರಿಗೆ ಗೊತ್ತಿಲ್ಲ. ಅದು ಮೂಡಾಗೆ ಸೇರಿದ್ದಾ ,ಅರಣ್ಯ ಇಲಾಖೆ ಸೇರಿದ್ದ ಗೊತ್ತಿಲ್ಲ. ಘಟನೆ ನಡೆದು ಈಗ ಎಂಟು ದಿನ ಆದ್ರೂ ಪೊಲೀಸರಿಗೆ ಈ ಬಗ್ಗೆ ಉತ್ತರ ಸಿಕ್ಕಿಲ್ಲ‌. ಮೂಡಾದವರೂ ಸಹ ಉತ್ತರ  ಕೊಟ್ಟಿಲ್ಲ‌. ಇದು ಕ್ಲಿಷ್ಟಕರ ವಿಚಾರವಾ.? ಆ ಜಾಗದಿಂದ ರಿಂಗ್ ರೋಡ್ ಗೆ ಎಷ್ಟು ದೂರ ಇದೆ ಅಂತ ಅಳತೆ ಕೂಡ ಮಾಡಿಲ್ಲ. ಯಾಕೆ ಮಾಡಿಲ್ಲ ಅಂದ್ರೆ ಉತ್ತರ ಇಲ್ಲ ಎಂದು ಸಿದ್ಧರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದರು.

ಸಂತ್ರಸ್ತೆ ಜತೆ ಇದ್ದ ಹುಡುಗ ಸ್ಟೇಟ್ ಮೆಂಟ್ ಕೊಟ್ಟಿದ್ದಾರೆ. ಅರೋಪಿಗಳು ಹ್ಯಾಬ್ಯಚಲ್ ಅಪೆಂಡರ್ಸ್. ಕಾನೂನು ಬಾಹಿರ ಕೃತ ‌ಮಾಡಿಕೊಂಡಿದ್ದವರು. ಆ ಹುಡುಗನಿಗೆ ಕಲ್ಲಿನಲ್ಲಿ ಹೊಡೆದಿದ್ದಾರೆ ಅಂತ ಹುಡುಗ ಸ್ಟೇಟ್ ಮೆಂಟ್ ಕೊಟ್ಟಿದ್ದಾನೆ. ಹಲ್ಲೆ ಮಾಡಿದ್ದಾರೆ ಆ ಹುಡುಗಿ ಮೇಲೆ ರೇಪ್ ಮಾಡಿದ್ದಾರೆ ಅಂತನೂ ಹೇಳಿದ್ದಾನೆ. ಬಹಳ ಅನುಮಾನಕ್ಕೆ ಎಡೆ ಮಾಡುವುದು ಏನು ಅಂದ್ರೆ. ಪೊಲೀಸರಿಗೆ ರಾತ್ರಿ 9.10 ಗಂಟೆಗೆ ಸುದ್ದಿ ಗೊತ್ತಿದ್ದರೂ ನಾಳೆ ಬೆಳಗ್ಗೆ ಮದ್ಯಾಹ್ನ 12 ಗಂಟೆ ನಂತರ ಅಂದರೆ 15 ಗಂಟೆ ಲೇಟಾಗಿ ಎಫ್ ಐ ಆರ್ ಮಾಡಿದ್ದಾರೆ. ಇದಕ್ಕೆ ಅವರ ಬಳಿ ಜಿನಿಯನ್ ರೀಜನ್ ಇಲ್ಲ. ಆಗಸ್ಟ್ 24, 25 ಆದ ಮೇಲೆ  ಸಂತ್ರಸ್ತ ಯುವತಿ ಡಿಸ್ಚಾರ್ಜ್ ಆಗಿದ್ದಾರೆ. ಮೂರು ದಿನದಲ್ಲಿ ಆಗಿದೆ. ಆದ್ರೆ ಹುಡುಗಿ ಸ್ಟೇಟ್ಮೆಂಟ್ ತೆಗೆದುಕೊಂಡಿಲ್ಲ. ಪೊಲೀಸರ ಮುಂದೆ, ಮ್ಯಾಜಿಸ್ಟ್ರೇಟ್ ಮುಂದೆ ಸ್ಟೇಟ್ಮೆಂಟ್ ತೆಗೆದುಕೊಳ್ಳಬೇಕಿತ್ತು. ಆ ಹುಡುಗಿ ಶಾಕ್ ನಲ್ಲಿದ್ದಾಳೆ ಸ್ಟೇಟ್ಮೆಟ್ ಕೊಡಲ್ಲ ಎಂದು ಹೇಳುತ್ತಿದ್ದಾರೆ ಎಂದು ಹೇಳ್ತಾರೆ. ಆದರೆ ಅಲ್ಲಿ ಪೊಲೀಸರು ಇರಬೇಕಿತ್ತು. ಅವಳು ಹೇಳಿಕೆ ಕೊಡಲ್ಲ ಅಂದ್ರೆ ನೀವೇನು ಮಾಡ್ತಾ ಇದ್ರಿ. ಅವಳ ಮೇಲೆ ಕೇಸ್ ಆಗಬೇಕಿತ್ತು. ಇದು ಅನುಮಾನಕ್ಕೆ ಎಡೆಮಾಡಿಕೊಡುತ್ತೆ. ಅವರು ನಿರಾಕರಣೆ ಮಾಡಿದ್ರು ಎಂದ್ರೆ ಸುಮ್ಮನೆ ಇರಲು ಸಾಧ್ಯ ಇಲ್ಲ‌. ಮನವೊಲಿಸಿ ಸ್ಟೇಟ್ಮೆಂಟ್ ತಗೋ ಬೇಕಿತ್ತು, ಮ್ಯಾಜಿಸ್ಟ್ರೇಟ್ ಹತ್ರ ಆದ್ರೂ ತಗೋಬಹುದಿತ್ತು ಎಂದು ಸಿದ್ಧರಾಮಯ್ಯ ಹೇಳಿದರು.

ಗೃಹ ಸಚಿವರು ಕೂಡಲೇ ರಾಜೀನಾಮೆ ನೀಡಲಿ.

ಸರ್ಕಾರ ಬೇಜವಾಬ್ದಾರಿ ಪ್ರದರ್ಶನ ಮಾಡಿದೆ. ಘಟನೆ ಬೆಳಕಿಗೆ ಬಂದ ಬಳಿಕ ಹೋಮ್ ಮಿನಿಸ್ಟರ್ ಮೈಸೂರಿಗೆ ಬಂದು ಆರಾಮಾಗಿ ಚಾಮುಂಡಿ ಬೆಟ್ಟಕ್ಕೆ ಹೋಗಿ, ಎಲ್ಲಾ ಕಡೆ ಹೋಗಿ ಆ ನಂತರ ಸ್ಥಳಕ್ಕೆ ಹೊಗ್ತಾರೆ. ಎಷ್ಟು ಸೀರಿಯಸ್ ಇದಾರೆ ನೋಡಿ. ಚೈಲ್ಡಿಸ್ಟ್ ಮತ್ತು ಬೇಜವಾಬ್ದಾರಿ ಹೇಳಿಕೆ ಕೊಡ್ತಾರೆ. ಇಷ್ಡೊತ್ತಲ್ಲಿ ಯಾಕೆ ಬರಬೇಕಿತ್ತು ಅಂತ ಹೇಳ್ತಾರೆ. ಅವರು ಈ ರಾಜ್ಯದ ಹೋಂ ಮಿನಿಸ್ಟರ್ ಆಗಲಿಕ್ಕೆ ಅರ್ಹರಾ..? ಅವರು ಅವರ ಸ್ಥಾನಕ್ಕೆ ಕೂಡಲೇ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.

ಗ್ಯಾಂಗ್ ರೇಪ್ ತಡೆದಿದ್ದರೆ ಸಹಬಾಶ್ ಹೇಳಬೇಕಿತ್ತು

ಚುನಾಯಿತ ಜನಪ್ರತಿನಿಧಿಗಳ ಜೊತೆ ಒಂದು ಮೀಟಿಂಗ್ ಕೂಡ ಮಾಡಿಲ್ಲ‌. ಸರ್ಕಾರ ಇದನ್ನ ಬಹಳ ಲಘುವಾಗಿ ತೆಗೆದುಕೊಂಡಿದೆ. ನಿರ್ಭಯ ಕೇಸ್ ಆದ್ರೂ ಇವರಿಗೆ ಭಯ ಇಲ್ಲ, ಜವಾಬ್ದಾರಿ ಇಲ್ಲ, ಹೆಣ್ಣುಮಕ್ಕಳಿಗೆ ರಕ್ಷಣೆ‌ ಇಲ್ಲ. ಪೊಲೀಸರು ಗಸ್ತು ತಿರುಗುತ್ತಿಲ್ಲ‌‌. ಗರುಡ ಇರೋದು ಪೂಜೆ ಮಾಡಲಿಕ್ಕಾ ಎಂದು ಪ್ರಶ್ನಿಸಿದ ಸಿದ್ಧರಾಮಯ್ಯ,ಐದು ಜನ ಹಿಡಿದಿದ್ದೇವೆ ಅಂತ ಅವರನ್ನು ಹೊಗಳಿದ್ದೆ ಹೊಗಳಿದ್ದು. ಇದು ಅವರ ಡ್ಯೂಟಿ. ಅವರು ಗ್ಯಾಂಗ್ ರೇಪ್ ತಡೆದಿದ್ದರೆ ಸಹಭಾಶ್ ಹೇಳಬೇಕಿತ್ತು. ಇದೂ ಫೂಲೀಶ್ ಗೌರ್ನಮೆಂಟ್. ಇಂತಹ ಅಪರಾಧಗಳು ತಡೆದರೇ ಮಾತ್ರ ಸಹಬ್ಬಾಷ್ ಗಿರಿ ನೀಡಬೇಕು. ಇಂದು ಪೊಲೀಸರ, ಸರ್ಕಾರದ ವೈಪ್ಯಲ್ಯ ಅಲ್ವ…? ಕಾನೂನು ಸುವ್ಯವಸ್ಥಿತ ಕಾಪಾಡುವಲ್ಲಿ ಸರ್ಕಾರ, ಪೊಲೀಸರು ವಿಫಲವಾಗಿದ್ದಾರೆ. ಮೈಸೂರು ಪೊಲೀಸರು ಸಂಪೂರ್ಣ ವಿಫಲರಾಗಿದ್ದಾರೆ ಎಂದು ಆರೋಪಿಸಿದರು.

ಸರ್ಕಾರ ಇದನ್ನ ಮುಚ್ಚುಹಾಕಲು ಪ್ರಯತ್ನ ಮಾಡ್ತಿದೆ ಎಂದು ಅನಿಸುತ್ತಿದೆ.

ಸರ್ಕಾರ ಇದನ್ನ ಮುಚ್ಚುಹಾಕಲು ಪ್ರಯತ್ನ ಮಾಡ್ತಿದೆ ಎಂದು ಅನಿಸುತ್ತಿದೆ. ಜವಾಬ್ದಾರಿಯುತ ಸರ್ಕಾರ ಮಾಡುವ ಕ್ರಮ ಅಲ್ಲ. ತಪ್ಪು ಮಾಡಿದವರಿಗೆ ಕಾನೂನು ರೀತಿ ಶಿಕ್ಷೆ ಆಗಬೇಕು. ಪ್ರಾಪರ್ ಇನ್ವೆಸ್ಟಿಗೇಷನ್ ಆಗಬೇಕು‌. ಆ ಹುಡುಗ ಸ್ಟೇಟ್ಮೆಂಟ್ ತಗೋಬೇಡಿ ಅಂತ ಪೊಲಿಟಿಕಲ್ ಪ್ರೆಜರ್  ಇದೆ ಅಂತ ಜನ ಹೇಳ್ತಾರೆ. ಅದು ನನಗೆ ಗೊತ್ತಿಲ್ಲ‌. ಇಲ್ಲಿಯವರೆಗೆ ಏನೇನು ಆಗಿದೆ ಎಂಬುದನ್ನ ಹೇಳಿದ್ದೇನೆ. ಬಿಜೆಪಿಯವರ ನಂದಿತಾ ಕೇಸ್ ನಲ್ಲಿ ಹೇಗೆ ನಡೆದುಕೊಂಡ್ರೂ ಅಂತ ಗೊತ್ತಿದೆ. ಡೆವಲಪ್ಮೆಂಟ್ ನೋಡಿಕೊಂಡು ಅಸೆಂಬ್ಲಿಯಲ್ಲಿ ರೈಜ್ ಮಾಡ್ತೇನೆ ಎಂದು ಸಿದ್ಧರಾಮಯ್ಯ ಹೇಳಿದರು.

ದುಡ್ಡು ಕೊಟ್ಟು ಪೊಲೀಸರು ಟ್ರಾನ್ಫರ್ ಮಾಡಿಸಿಕೊಂಡು ಬರ್ತಾರೆ‌. ಈ ಸರಕಾರದಲ್ಲಿ ಪೊಲೀಸ್ ವರ್ಗಾವಣೆಗಳು ದುಡ್ಡಿನಿಂದ ಆಗಿವೆ. ಎಷ್ಟೇಷ್ಟು ದುಡ್ಡು ಕೊಟ್ಟು ಬಂದಿದ್ದಾರೆ ಎಂದು ವೀಡಿಯೋ ಮಾಡಿ ತೋರಿಸಲಾ ? ಪೊಲೀಸರು ಉದ್ದೇಶ ಪೂರ್ವಕವಾಗಿ ಸಂತ್ರಸ್ತೆ ಹೇಳಿಕೆ ಪಡೆದಿಲ್ಲ ಎಂದೆನಿಸುತ್ತಿದೆ. ಪೊಲೀಸರಿಗೆ ತನಿಖೆಯ ಸ್ವಾತಂತ್ರ್ಯ ಇಲ್ಲ ಎಂದು ಕಿಡಿಕಾರಿದರು.

Key words: mysore- gang rape- case – not taken seriously-Former CM -Siddaramaiah