ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ಭೇಟಿ ನೀಡಿ ಶಾಸಕ ತನ್ವೀರ್ ಸೇಠ್ ಆರೋಗ್ಯ ವಿಚಾರಿಸಿದ ಮಾಜಿ ಸ್ಪೀಕರ್ ರಮೇಶ್ ಕುಮಾರ್….

Promotion

ಮೈಸೂರು,ನ,19,2019(www.justkannada.in):  ಮಾಜಿ ಸ್ಪೀಕರ್ ರಮೇಶ್ ಕುಮಾರ್ ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ಭೇಟಿ ನೀಡಿ  ಚಿಕಿತ್ಸೆ ಪಡೆಯುತ್ತಿರುವ ಶಾಸಕ ತನ್ವೀರ್ ಸೇಠ್ ಅವರ ಆರೋಗ್ಯ ವಿಚಾರಿಸಿದರು.

ಬೆಂಬಲಿಗರೊಂದಿಗೆ ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ತೆರಳಿದ ರಮೇಶ್ ಕುಮಾರ್  ತನ್ವೀರ್ ಸೇಠ್ ಆರೋಗ್ಯ ವಿಚಾರಿಸಿ ತನ್ವೀರ್ ಕುಟುಂಬದ ಸದಸ್ಯರಿಗೆ ಧೈರ್ಯ ತುಂಬಿದರು. ಬಳಿಕ ಮಾತನಾಡಿದ ಮಾಜಿ ಸ್ಪೀಕರ್ ರಮೇಶ್ ಕುಮಾರ್, ತನ್ವೀರ್ ಸೇಠ್ ಇನ್ನೂ ಕೃತಕ‌ ಉಸಿರಾಟದಲ್ಲಿದ್ದಾರೆ. ಅವರು ಸ್ವತಂತ್ರವಾಗಿ ಉಸಿರಾಡುವ ತನಕ ಯಾರು ಒಳಗೆ ಹೋಗುವುದು ಬೇಡ. ನಾನು ಒಳಗೆ ಹೋದಾಗ ನಾನು ತಪ್ಪು ಮಾಡಿದ ಎಂಬ ಭಾವನೆ ನನಗೆ ಬಂತು. ಈ ರೀತಿ ಯಾರು ಮಾಡುವುದು ಬೇಡ. ತನ್ವೀರ್ ಸೇಠ್ ನನ್ನನ್ನೂ ನೋಡಿ ಮಾತನಾಡಲು ಯತ್ನಿಸಿದರು. ನಾನೇ ಮಾತನಾಡುವುದು ಬೇಡ ಎಂದೇ ಎಂದು ಭಾವುಕರಾಗಿ ಮಾತನಾಡಿದರು.

ಅಜೀತ್ ಸೇಠ್ ಕುಟುಂಬಕ್ಕೂ ನನಗೂ 49 ವರ್ಷಗಳ ಒಡನಾಟವಿದೆ. ಅಜೀತ್ ಸೇಠ್ ಗೆ ನಾನು ಮೊದಲ‌ ಮಗ, ನಂತರ ತನ್ವೀರ್ ಸೇಠ್. ಅದಕ್ಕಾಗಿ ನಾನು ಮೊದಲು ಓಡೋಡಿ ಬಂದೆ ಎಂದು ರಮೇಶ್ ಕುಮಾರ್ ತಿಳಿಸಿದರು.

ಈ ಘಟನೆಯಿಂದ ಪಿಎಫ್ ಐ ಸಂಘಟನೆಯೆ ಇದೆ ಎಂಬ ಸಿಎಂ ಹೇಳಿಕೆ ವಿಚಾರ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ ರಮೇಶ್ ಕುಮಾರ್, ನಾನು ಸಿಎಂ ಹೇಳಿಕೆಗೆ ಪ್ರತಿಕ್ರಿಯೆ ನೀಡುವುದಿಲ್ಲ. ನಾನು ತನ್ವೀರ್ ಸೇಠ್ ಆರೋಗ್ಯ ವಿಚಾರಿಸಲು ಬಂದಿದ್ದೇನೆ ಅಷ್ಟೇ ಎಂದರು.

Key words: mysore- former speaker – Ramesh Kumar- MLA- Tanveer Seth- health