ಸರ್ಕಾರದ ಮಾರ್ಗಸೂಚಿ ಪಾಲಿಸದಿದ್ರೆ ಕಾನೂನು ಕ್ರಮ- ಮೈಸೂರು ನಗರ ಉಪಪೋಲೀಸ್ ಅಯುಕ್ತರಿಂದ ಕಟ್ಟುನಿಟ್ಟಿನ ಆದೇಶ…

Promotion

ಮೈಸೂರು,ಜೂ,23,2020(www.justkannada.in):  ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕೊರೋನಾ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನೆಲೆ ಕೋವಿಡ್  ನಿಯಂತ್ರಣದ ನಿಯಮಗಳನ್ನ ಪಾಲಿಸದಿದ್ದರೇ ಕಾನೂನು ಕ್ರಮ ಕೈಗೊಳ್ಳುವುದಾಗಿ ಮೈಸೂರು ನಗರ ಉಪಪೋಲೀಸ್ ಅಯುಕ್ತ ಪ್ರಕಾಶ್ ಗೌಡ ಕಟ್ಟುನಿಟ್ಟಿನ  ಆದೇಶ ಹೊರಡಿಸಿದ್ದಾರೆ.

ಕೊರೋನಾ ನಿಯಂತ್ರಿಸಲು ಸರ್ಕಾರದ ಹೊರಡಿಸಿರುವ ಮಾರ್ಗಸೂಚಿ ಅನುಸರಿದಿದ್ರೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು  ಸಾರ್ವಜನಿಕರಿಗೆ ಮೈಸೂರು ನಗರ ಉಪಪೋಲೀಸ್ ಅಯುಕ್ತ ಪ್ರಕಾಶ್ ಗೌಡ ಎಚ್ಚರಿಕೆಯ ಸಂದೇಶ ರವಾನೆ ಮಾಡಿದ್ದಾರೆ. ಹಾಗೆಯೇ ಆಯಾ ಠಾಣಾ ವ್ಯಾಪ್ತಿಯಲ್ಲಿ ನಿಯಮ ಉಲ್ಲಂಘನೆ ಆಗದಂತೆ ನೋಡಿಕೊಳ್ಳಲು ಠಾಣಾಧಿಕಾರಿಗಳಿಗೆ ಸೂಚನೆ ಅವರು,ವಾಣಿಜ್ಯ ವಹಿವಾಟು, ಸಭೆ ಸಮಾರಂಭಗಳಲ್ಲಿ ಹೆಚ್ಚು ಜನ ಸೇರದಂತೆ ಕಟ್ಟೆಚ್ಚರ ವಹಿಸಬೇಕು. ಮದುವೆ ಮುಂತಾದ ಸಮಾರಂಭಗಳಿಗೆ ಪೊಲೀಸ್ ಅನುಮತಿ ಕಡ್ಡಾಯ.! ಅನುಮತಿ ಪಡೆದು 50 ಕ್ಕಿಂತ ಹೆಚ್ಚುಜನ ಕಾರ್ಯಕ್ರಮಕ್ಕೆ ಆಗಮಿಸದರೆ ಕೇಸ್ ಗ್ಯಾರಂಟಿ ಎಂದು ಎಚ್ಚರಿಕೆ ನೀಡಿದ್ದಾರೆ.

ವಾಣಿಜ್ಯ ಚಟುವಟಿಕೆ ನಡೆಯುವ ಸ್ಥಳಗಳಲ್ಲಿ ಸಾಮಾಜಿಕ ಅಂತರ , ಮಾಸ್ಕ್ ಧರಿಸುವುದು ಕಡ್ಡಾಯ. ಮಾಸ್ಕ್ ಹಾಕಿಕೊಳ್ಳದವರೊಂದಿಗೆ ವ್ಯಾಪರ ವಹಿವಾಟು ನಡೆಸಬಾರದು ಎಂದು ಸೂಚನೆ ನೀಡಿದ್ದಾರೆ. ಹಾಗೆಯೇ ಮೈಸೂರಿನಲ್ಲಿ ಕೊರೋನಾ ಸೋಕು ಸಮುದಾಯಕ್ಕೆ ಹರಡುವ ಮುನ್ಸೂಚನೆ ಹಿನ್ನೆಲೆ ಉಪಪೋಲೀಸ್ ಅಯುಕ್ತ ಪ್ರಕಾಶ್ ಗೌಡ ಅವರು ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ.

Key words: mysore- following- government –guidelines-Strict Orders -Mysore Police