ಮೈಸೂರು: ಕಾಡಾನೆ ದಾಳಿಗೆ ರೈತ ಬಲಿ..

Promotion

ಮೈಸೂರು,ಆಗಸ್ಟ್,12,2022(www.justkannada.in): ರಾಜ್ಯದಲ್ಲಿ ಕಾಡಾನೆ ಉಪಟಳ ಹೆಚ್ಚುತ್ತಿದ್ದು, ಇದೀಗ ಕಾಡಾನೆ ದಾಳಿಗೆ ರೈತ ಬಲಿಯಾಗಿರುವ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ.

ಜಿಲ್ಲೆಯ ಸರಗೂರು ತಾಲ್ಲೂಕಿನ ಎತ್ತಿಗೆ ಗ್ರಾಮದಲ್ಲಿ ನಡೆದಿದೆ.  ಕೇರಳ ಮೂಲದ ಬಾಲನ್ (51) ಮೃತಪಟ್ಟ ರೈತ.  ಜಮೀನು ಗುತ್ತಿಗೆಗೆ ಪಡೆದು ಶುಂಠಿ ಬೆಳೆದಿದ್ದ ಬಾಲನ್, ಬೆಳಗಿನ ಜಾವ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಕಾಡಾನೆ ದಾಳಿ ನಡೆಸಿದ್ದು,   ರೈತ ಬಾಲನ್ ಸಾವನ್ನಪ್ಪಿದ್ದಾರೆ.

ನುಗು ಅರಣ್ಯ ಪ್ರದೇಶದಿಂದ ಕಾಡಾನೆ ಬಂದಿರುವ ಶಂಕೆ ವ್ಯಕ್ತವಾಗಿದ್ದು, ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Key words: Mysore-Farmer –death-elephant-attack