ಸಾಲಬಾಧೆ ತಾಳಲಾರದೆ ರೈತ ಆತ್ಮಹತ್ಯೆಗೆ ಶರಣು…

Promotion

ಮೈಸೂರು,ಡಿಸೆಂಬರ್,30,2020(www.justkannada.in): ಸಾಲಬಾಧೆ ತಾಳಲಾರದೆ ರೈತ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ.

ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ಬಿ ಆರ್ ಕಾವಲ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾಮದ ಅಪ್ಪಾಜಿಗೌಡ (67) ಮೃತಪಟ್ಟ ರೈತ. ರೈತ ಅಪ್ಪಾಜಿಗೌಡ 6 ಎಕರೆ ಜಮೀನಿನಲ್ಲಿ ತಂಬಾಕು, ಮುಸುಕಿನ ಜೋಳ ರಾಗಿ ಬೆಳೆದಿದ್ದರು.ಈ ನಡುವೆ ಬ್ಯಾಂಕ್‌ ನಲ್ಲಿ 9 ಲಕ್ಷ ಸಾಲ ಮಾಡಿದ್ದರು ಎನ್ನಲಾಗಿದೆ.mysore-farmer-commits-suicide-debt

ಅಪ್ಪಾಜಿಗೌಡ ಅನಾರೋಗ್ಯದಿಂದ ಬಳಲುತ್ತಿದ್ದು, ಸಾಲ ತೀರಿಸಲಾಗದೇ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಕುರಿತು ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: mysore- farmer –commits- suicide –debt