ಜಮೀನಿಗೆ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ: ರೈತನಿಗೆ ತೀವ್ರ ಗಾಯ…

Promotion

ಮೈಸೂರು,ನ,28,2019(www.justkannada.in):  ಜಮೀನಿಗೆ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ ನಡೆಸಿದ ಪರಿಣಾಮ ರೈತ ಗಾಯಗೊಂಡಿರುವ ಘಟನೆ ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನಲ್ಲಿ ನಡೆದಿದೆ.

ಹುಣಸೂರು ತಾ. ಮಾಜಿ ಗುರುಪುರದಲ್ಲಿ ಈ ಘಟನೆ ನಡೆದಿದೆ. ಒಂಟಿ ಸಲಗ ದಾಳಿಗೆ ಗ್ರಾಮದ ರೈತ ರಾಘವೇಂದ್ರಗೆ ತೀವ್ರ ಗಾಯಗಳಾಗಿದ್ದು ಮೈಸೂರಿನ ಅಪೋಲೋ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇಂದು ಬೆಳಿಗ್ಗೆ  ರೈತ ರಾಘವೇಂದ್ರ ಜಮೀನಿಗೆ ತೆರಳುತ್ತಿದ್ದ ವೇಳೆ ಬಾಳೆ ತೋಟದಲ್ಲಿದ್ದ ಸಲಗ ಏಕಾಎಕಿ ದಾಳಿ ನಡೆಸಿದೆ.

ಕಾಡಾನೆಗಳ ಹಾವಳಿಯಿಂದ ಆಕ್ರೋಶಿತರಾದ ರೈತರು, ಗ್ರಾಮಸ್ಥರು ಹುಣಸೂರು-ಎಚ್.ಡಿ.ಕೋಟೆ ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Key words: mysore- elephant-attacked – forest-farmer-injury