ಇ-ಶ್ರಮ್ ಅಸಂಘಟಿತ ಕಾರ್ಮಿಕರ ಗುರುತಿನ ಚೀಟಿ ಉಚಿತ ನೋಂದಣಿ ಅಭಿಯಾನಕ್ಕೆ ಚಾಲನೆ

ಮೈಸೂರು,ಆಗಸ್ಟ್,30,2021(www.justkannada.in): ಕೇಂದ್ರ ಸರ್ಕಾರ ನೂತವಾಗಿ ಜಾರಿಗೊಳಿಸಿರುವ ಇ-ಶ್ರಮ್ ಅಸಂಘಟಿತ ಕಾರ್ಮಿಕರ ಗುರುತಿನ ಚೀಟಿಯ 10 ದಿನಗಳ ಉಚಿತ ನೋಂದಣಿ ಅಭಿಯಾನಕ್ಕೆ ಇಂದು ಬಿಜೆಪಿ ಯುವಮೋರ್ಚಾ ಉಪಾಧ್ಯಕ್ಷ ಕೆ.ಎಂ. ನಿಶಾಂತ್ ರವರ ನೇತೃತ್ವದಲ್ಲಿ ಚಾಲನೆ ನೀಡಲಾಯಿತು.

ಅಭಿಯಾನದ ಮೊದಲ ದಿನವಾದ ಇಂದು ನೂರಾರು ಫಲಾನುಭವಿಗಳು ಇ-ಶ್ರಮ್ ಯು.ಎ.ಎನ್ ಸ್ಮಾರ್ಟ್ ಕಾರ್ಡ್ ಪಡೆಯುವ ಮೂಲಕ ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಯಿತು. ನಂತರ ಮಾತನಾಡಿದ ಕೆ.ಎಂ. ನಿಶಾಂತ್, ಕೇಂದ್ರ ಸರ್ಕಾರ ರಾಷ್ಟ್ರೀಯ ಅಸಂಘಟಿತ ಕಾರ್ಮಿಕರ ಅಂಕಿ-ಅಂಶ ಕಾರ್ಯಕ್ರಮದ ಅಡಿಯಲ್ಲಿ ಇ-ಶ್ರಮ್ ಗುರುತಿನ ಚೀಟಿ ಯೋಜನೆಯನ್ನು ಪ್ರಾರಂಭಿಸಿದೆ. ಸ್ವತಂತ್ರ ಬಂದ ನಂತರ ಅಂಘಟಿತಕಾರ್ಮಿಕರನ್ನು ಗುರುತಿಸುವ ಕೆಲಸ ಮೊದಲ ಬಾರಿಗೆ ಕೇಂದ್ರ ಸರ್ಕಾರದಿಂದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆಯುತ್ತಿದೆ. ದೇಶದ 45 ಕೋಟಿಗೂ ಅಧಿಕ ಅಸಂಘಟಿತ ಕಾರ್ಮಿಕರನ್ನು ಇ-ಶ್ರಮ್ ಸ್ಮಾರ್ಟ್ ಕಾರ್ಡ್ ಗೆ ನೊಂದಾಯಿಸಿ ಅದರ ಅಂಕಿ ಅಂಶಕ್ಕೆ ಅನುಗುಣವಾಗಿ ಸಾಮಾಜಿ ಭಧ್ರತಾ ಕಾರ್ಯಕ್ರಮಗಳನ್ನು ಜಾರಿಗೆತರುವ ಮಹತ್ವಾಕಾಂಕ್ಷಿ ಯೋಜನೆ ಇದಾಗಿದೆ ಎಂದರು.

ಈ ಯೋಜನೆಗೆ ನೋಂದಣಿಯಾಗಲು ಉತ್ತೇಜನೆ ನೀಡುವ ಸಲುವಾಗಿ ಮೈಸೂರಿನ ರಾಮಾನುಜಾ ರಸ್ತೆಯಲ್ಲಿರುವ ನಮ್ಮ ಜನ ಸೇವಾ ಕೇಂದ್ರದಲ್ಲಿ ಉಚಿತ ನೋಂದಣಿ ಅಭಿಯಾನ ಮತ್ತು ಮಾಹಿತಿ ಕೇಂದ್ರವನ್ನು ಪ್ರಾರಂಭಿಸಿದ್ದೇವೆ.  ಮುಂದಿನ 10 ದಿನಗಳಲ್ಲಿ 2000ಕ್ಕೂ ಹೆಚ್ಚು ಜನರಿಗೆ ಇ-ಶ್ರಮ್ ಗುರುತಿನ ಚೀಟಿಯನ್ನು ವಿತರಿಸುವ ಗುರಿಯನ್ನು ಹೊಂದಿದ್ದು ಸಾರ್ವಜನಿಕರು ಹೆಚ್ಚಿನ ಮಾಹಿತಿಗಾಗಿ 9902527185 ಮೊಬೈಲ್ ಸಂಖ್ಯೆಗೆ ಕರೆಮಾಡಬಹುದಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಅರ್ಚಕರ ಸಂಘದ ಸುಮಂತ್ ಅಯ್ಯಂಗಾರ್, ವಾಚ್ ರಿಪೇರಿ ತರಬೇತುದಾರ ಸತೀಶ್, ಸೈಕಲ್ ವ್ಯಾಪಾರಿ ಜಗದೀಶ್, ಸೈನ್ ಬೋರ್ಡ್ ಕಲಾವಿದ ಸುಬ್ರಹ್ಮಣ್ಯ, ಶಿಕ್ಷಕಿ ವೇದಾಮಣಿ, ಚಾಲಕರ ಸಂಘದ ರವಿ, ರಸ್ತೆಬದಿ ವ್ಯಾಪರಿ ಶಣ್ಮುಗಂ ಹಾಗು ಹತ್ತಾರು ಫಲಾನುಭವಿಗಳು ಉಪಸ್ಥಿತರಿದ್ದರು.

Key words: mysore- e-Shram -Unorganized -Worker -Identity Card -Free Registration -Campaign.