ಇಂದಿನಿಂದ ಮಾಜಿ ಸಿಎಂ ಸಿದ್ದರಾಮಯ್ಯರಿಂದ ಜಿಲ್ಲಾ ಪ್ರವಾಸ..

Promotion

ಮೈಸೂರು,ನವೆಂಬರ್,26,2021(www.justkannada.in): ವಿಧಾನ ಪರಿಷತ್ ಚುನಾವಣೆ ಕಣ ರಂಗೇರಿದ್ದು ಈ ನಡುವೆ ಇಂದಿನಿಂದ ಮಾಜಿ ಸಿಎಂ ಸಿದ್ದರಾಮಯ್ಯ ಹಲವು ಜಿಲ್ಲೆಗಳಿಗೆ  ಜಿಲ್ಲಾ ಪ್ರವಾಸ ಕೈಗೊಂಡಿದ್ದು, ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ.

ಇಂದು ಮಧ್ಯಾಹ್ನ 12 ಗಂಟೆಗೆ ಮೈಸೂರಿಗೆ ಆಗಮಿಸಲಿರುವ ಸಿದ್ಧರಾಮಯ್ಯ ಜಂತಗಳ್ಳಿಯ ಲಕ್ಷ್ಮೀ, ಬಸವೇಶ್ವರ ಹಾಗೂ ಸಿದ್ದಪ್ಪಾಜಿ ದೇವಾಲಯ ಉದ್ಘಾಟನೆ ಮಾಡಲಿದ್ದಾರೆ. ನಂತರ ಮಧ್ಯಾಹ್ನ 2 ಗಂಟೆಗೆ ಆಯರಹಳ್ಳಿಯ ಮಾರಮ್ಮ ದೇವಾಲಯ ಉದ್ಘಾಟಿಸಿ, ಸಂಜೆ 4 ಗಂಟೆಗೆ ಮೈಸೂರಿನ ನಿವಾಸದಲ್ಲಿ ಎಚ್.ಡಿ.ಕೋಟೆಯ ಕುರುಬ ಸಮುದಾಯದ ಮುಖಂಡರ ಜತೆ ಸಭೆ ನಡೆಸಲಿದ್ದಾರೆ.

ಇದಾದ ಬಳಿಕ ಸಂಜೆ 7 ಗಂಟೆಗೆ ಹೋಟೆಲ್ ಜೆಪಿ ಫಾರ್ಚೂನ್‌ ಹೋಟೆಲ್‌ ನಲ್ಲಿ  ಪರಿಷತ್ ಚುನಾವಣೆ ಸಂಬಂಧ ಕಾರ್ಯಕರ್ತರ ಸಭೆಯಲ್ಲಿ ಭಾಗಿಯಾಗಲಿದ್ದಾರೆ.

ನವೆಂಬರ್ 27ರ ಬೆಳಿಗ್ಗೆ 11.30ಕ್ಕೆ ಮಾನಸ ಗಂಗೋತ್ರಿಯ ಸೆನೆಟ್ ಭವನದಲ್ಲಿ ಕೃತಿ ಬಿಡುಗಡೆ ಸಮಾರಂಭದಲ್ಲಿ  ಪಾಲ್ಗೊಳ್ಳಲಿರುವ ಸಿದ್ಧರಾಮಯ್ಯ, ಮಧ್ಯಾಹ್ನ 2.30ಕ್ಕೆ ಗಾಯತ್ರಿಪುರಂನ ಬಾಬೂ ಜಗಜೀವನರಾಂ ಸಾಂಸ್ಕೃತಿಕ ಮತ್ತು ಸಮುದಾಯ ಭವನ ಉದ್ಘಾಟಿಸಲಿದ್ದಾರೆ.

ನಂತರ ನವೆಂಬರ್ 28ರ ಬೆಳಿಗ್ಗೆ 10ಗಂಟೆಗೆ ಮೈಸೂರು ವಿಮಾನ ನಿಲ್ದಾಣದಿಂದ ಚಿತ್ರದುರ್ಗಕ್ಕೆ ತೆರಳಿ, ಸಂಜೆ 4ಕ್ಕೆ ಹೆಲಿಕಾಪ್ಟರ್ ಮೂಲಕ ಮೈಸೂರಿಗೆ ವಾಪಸ್ಸಾಗಿ ಇಲ್ಲೇ ವಾಸ್ತವ್ಯ ಹೂಡಲಿದ್ದಾರೆ. ನವೆಂಬರ್ 29ರ ಬೆಳಿಗ್ಗೆ 10ಕ್ಕೆ ಚಾಮರಾಜನಗರಕ್ಕೆ ತೆರಳಿ 11.30ಕ್ಕೆ ನಿಗದಿಯಾಗಿರುವ ಕಾಂಗ್ರೆಸ್ ಜನಜಾಗೃತಿ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಸಂಜೆ 4.30ಕ್ಕೆ ಮೈಸೂರಿಗೆ ಆಗಮಿಸಿ ಸ್ಥಳೀಯ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ  ರಾತ್ರಿ 8.30ಕ್ಕೆ ರಸ್ತೆ ಮೂಲಕ  ಸಿದ್ಧರಾಮಯ್ಯ ಬೆಂಗಳೂರಿಗೆ ತೆರಳುವರು.

Key words: mysore- District tour – former CM- Siddaramaiah – today.