ಮೈಸೂರು ಜಿಲ್ಲೆಯಲ್ಲಿ ಶೀಘ್ರವೇ ಪಾಸಿಟಿವಿಟಿ ರೇಟ್ ಕಡಿಮೆ ಮಾಡ್ತೇವೆ- ಸಂಸದ ಪ್ರತಾಪ್ ಸಿಂಹ ವಿಶ್ವಾಸ.

Promotion

ಮೈಸೂರು,ಜೂನ್,21,2021(www.justkannada.in):  ಮೈಸೂರು ಜಿಲ್ಲೆಯಲ್ಲಿ ಕೊರೋನಾ ನಿಯಂತ್ರಣಕ್ಕೆ ಬರುವ ಸಮಯದಲ್ಲಿ ಅಧಿಕಾರಿಗಳನ್ನ ವರ್ಗಾವಣೆ ಮಾಡಿದ್ದು ತಪ್ಪು ಎಂಬ ಅಭಿಪ್ರಾಯ ಜನರಲ್ಲಿ ಮೂಡಿದೆ ಎನ್ನಲಾಗಿದೆ,  ಈ ಮಧ್ಯೆ ರಾಜ್ಯಾದ್ಯಂತ  ಅನ್ ಲಾಕ್ ಆದರೂ ಮೈಸೂರು ಜಿಲ್ಲೆಯಲ್ಲಿ ಕೊರೊನಾ ಕಂಟ್ರೋಲ್ ಆಗದ ಹಿನ್ನೆಲೆಯಲ್ಲಿ ಲಾಕ್ ಡೌನ್ ಮುಂದುವರೆದಿದೆ.jk

ಈ ಬಗ್ಗೆ ಪ್ರತಿಕ್ರಿಯಿಸಿರುವ ಸಂಸದ ಪ್ರತಾಪ್ ಸಿಂಹ, ಮೈಸೂರಿನಲ್ಲಿ ಲಾಕ್ ಡೌನ್ ಮುಂದುವರೆದಿದೆ. ಶೀಘ್ರವೇ ಪಾಸಿಟಿವಿಟಿ ರೇಟ್ ಕಡಿಮೆ ಮಾಡುತ್ತೇವೆ. ಮೈಸೂರು ಜಿಲ್ಲೆ ಅನ್ ಲಾಕ್ ಆಗುವಂತೆ ಕೆಲಸ ಮಾಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮೇನಲ್ಲಿ ಶೇ.28ರಷ್ಟು ಪಾಸಿಟಿವಿಟಿ ರೇಟ್ ಇತ್ತು. ಸಾವಿರಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರು.  ಸರಿಯಾದ ಯೋಜನೆ ಇಲ್ಲದ್ದಕ್ಕೆ ಈ ರೀತಿಯಾಗಿತ್ತು. ಡಿಸಿ ಬಗಾದಿ ಗೌತಮ್ ಗೆ ಇದೆಲ್ಲದರ ಬಗ್ಗೆ ಅರಿವಿದೆ. ಈ ನಡುವೆ ಶೀಘ್ರವೇ ಪಾಸಿಟಿವಿಟಿ ರೇಟ್ ಇಳಿಕೆಯಾಗುವಂತೆ ಕೆಲಸ ಮಾಡುತ್ತೇವೆ ಎಂದಿದ್ದಾರೆ.

Key words: Mysore- district -soon – low-covid- positivity rate-MP Pratap simha