ಖಾಸಗಿ ವಾಹಿನಿ ಕ್ಯಾಮರಾಮನ್ ನಿಧನಕ್ಕೆ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದಿಂದ ಸಂತಾಪ…

Promotion

ಮೈಸೂರು,ಫೆಬ್ರವರಿ,27,2021(www.justkannada.in): ರಸ್ತೆ ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಖಾಸಗಿ ವಾಹಿನಿಯ ಕ್ಯಾಮರಾಮನ್ ಸೆಲ್ವರಾಜ್  ಮೃತಪಟ್ಟಿದ್ದು  ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ಸಂತಾಪ ಸೂಚಿಸಿದೆ.jk

ಚಾಮರಾಜನಗರ ಯಳಂದೂರು ತಾಲ್ಲೂಕು ಮಾಂಬಳ್ಳಿ ಗ್ರಾಮದವರಾದ ಸೆಲ್ವರಾಜ್ ಬೆಂಗಳೂರಿನಲ್ಲಿ ಖಾಸಗಿ ಸುದ್ದಿ ವಾಹಿನಿಯಲ್ಲಿ ಕ್ಯಾಮರಾಮನ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಈ ನಡುವೆ ಕಳೆದ ಮೂರು ದಿನಗಳ ಹಿಂದೆ ಬೆಂಗಳೂರಿನಲ್ಲಿ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಸೆಲ್ವರಾಜ್ ಕೋಮಾದಲ್ಲಿದ್ದರು.mysore-district-journalists-association-condolences-death-private-channel-cameraman

ಆದರೆ ಸೆಲ್ವರಾಜ್ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದು, ಸೆಲ್ವರಾಜ್ ಮೃತದೇಹ ಇಂದು ಸ್ವಗ್ರಾಮ ಮಾಂಬಳ್ಳಿಗೆ ಬರಲಿದೆ. ಇನ್ನು ಮೃತ ಕ್ಯಾಮರಾಮೆನ್ ಸೆಲ್ವರಾಜ್ ನಿಧನಕ್ಕೆ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಪಿ.ರವಿಕುಮಾರ್, ಕಾರ್ಯಕಾರಿ ಸಮಿತಿ ಸದಸ್ಯ ಧನಂಜಯ ಸೇರಿದಂತೆ ಸಂಘದ ಪದಾಧಿಕಾರಗಳು ಸಂತಾಪ ಸೂಚಿಸಿದ್ದಾರೆ.

Key words: Mysore- District –Journalists- Association – Condolences-  Death – Private channel-Cameraman