ಚಾಮರಾಜನಗರ ಡಿಸಿ ಆರೋಪಕ್ಕೆ ತಿರುಗೇಟು: ಆಕ್ಸಿಜನ್ ಸರಬರಾಜು ಕುರಿತು ಸ್ಪಷ್ಟನೆ ನೀಡಿದ ಮೈಸೂರು ಡಿಸಿ ರೋಹಿಣಿ ಸಿಂಧೂರಿ…

Promotion

ಮೈಸೂರು,ಮೇ,5,2021(www.justkannada.in): ಚಾಮರಾಜನಗರದಲ್ಲಿ ಆಕ್ಸಿಜನ್ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾಮರಾಜನಗರ ಡಿಸಿ ಎಂ.ಆರ್ ರವಿ ಅವರ ಮಾಡಿರುವ  ಆರೋಪಕ್ಕೆ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಪತ್ರಿಕಾ ಹೇಳಿಕೆ ಮೂಲಕ ತಿರುಗೇಟು ನೀಡಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಮೈಸೂರು ಡಿಸಿ ರೋಹಿಣಿ ಸಿಂಧೂರಿ, ಆಕ್ಸಿಜನ್ ಸಪ್ಲೈ ವಿಚಾರದಲ್ಲಿ ಚಾಮರಾಜನಗರ ಡಿಸಿ ಸುಳ್ಳು ಆರೋಪ ಮಾಡಿದ್ದಾರೆ. ಪ್ರಕರಣ ತನಿಖಾ ಹಂತದಲ್ಲಿರುವಾಗಲೇ ಮಾಧ್ಯಮಗಳಿಗೆ ಹೇಳಿಕೆ ನೀಡಿ ಆರೋಪ ಮಾಡಿದ್ದಾರೆ. ಮೈಸೂರು ಡಿಸಿಯಾಗಿರುವ ನಾನು ಚಾಮರಾಜನಗರಕ್ಕಾಗಲಿ ಅಥವ ಇನ್ಯಾವುದೆ ಜಿಲ್ಲೆಗೆ ಆಕ್ಸಿಜನ್ ಸರಬರಾಜು ತಡೆದಿಲ್ಲ. ಯಾವುದೇ ಜಿಲ್ಲೆಗೆ ಆಕ್ಸಿಜನ್ ಸರಬರಾಜು ಅಲ್ಲಿನ ಸರಬರಾಜುದಾರರು ಹಾಗೂ ಜಿಲ್ಲಾಡಳಿತ ನಡುವಿನ ಸಂವಹನ ಇರುತ್ತೆ.

ಈಗ ಮೈಸೂರಿಗೆ ಬಳ್ಳಾರಿಯಿಂದ ಕಡಿಮೆ ಆಕ್ಸಿಜನ್ ಸಪ್ಲೈ ಆದರೆ ನಾನು ಬಳ್ಳಾರಿ ಡಿಸಿಯನ್ನ ದೂಷಿಸಲು ಸಾಧ್ಯವಿಲ್ಲ. ತಮ್ಮ ಜಿಲ್ಲೆಗೆ ಬೇಕಾದ ವ್ಯವಸ್ಥೆ ಮಾಡಿಕೊಳ್ಳೋದು ಅವರದ್ದೇ ಜವಬ್ದಾರಿ. ಅದು ಆಗದಿದ್ದರೆ ಮೇಲಾಧಿಕಾರಿಗಳಿಗೆ ಹೇಳಬೇಕು. ಅದರಲ್ಲಿ ವಿಫಲವಾಗಿರುವ ಚಾಮರಾಜನಗರದವರು ಈಗ ಮೈಸೂರಿನ ಮೇಲೆ ದೂಷಿಸುತ್ತಿದ್ದಾರೆ. ರಾಜ್ಯ ಸರ್ಕಾರ ಆದೇಶಿಸಿರುವ ವಿಚಾರಣೆಯಲ್ಲಿ ಇದೇಲ್ಲವು ಸಾಬೀತಾಗಲಿದೆ ಎಂದು ಚಾಮರಾಜನಗರ ಡಿಸಿ ಎಂ.ಆರ್.ರವಿ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.Mysore DC -Rohini Sindhuri w-press statement -Chamarajanagar DC- allegation-oxigen-death

4 ಅಂಶಗಳನ್ನ ಉಲ್ಲೇಖಿಸಿ ಡಿಸಿ ರೋಹಿಣಿ ಸಿಂಧೂರಿ ಅವರುಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು, ಈ ಜೊತೆಗೆ ಮೇ 2 ಮತ್ತು 3 ರಂದು ಚಾಮರಾಜನಗರಕ್ಕೆ ಕಳುಹಿಸಿದ ಆಕ್ಸಿಜನ್ ದಾಖಲೆ, ಸಮಯ ಹಾಗೂ ಬಿಲ್ ಸಂಖ್ಯೆಯ ಜೊತೆಗೆ ಮಾಹಿತಿ ಬಹಿರಂಗ ಪಡಿಸಿ ಸ್ಪಷ್ಟನೆ ನೀಡಿದ್ದಾರೆ.

ENGLISH SUMMARY…

Mysuru DC Rohini Sindhuri clarifies for the allegations made by Chamarajanagara DC over oxygen supply
Mysuru, May 5, 2021 (www.justkannada.in): Deputy Commissioner of Mysuru District Rohini Sindhuri has responded to the Chamarajanagara Deputy Commissioner M.R. Ravi’s allegations regarding the oxygen supply to Chamarajanagara District Hospital.Mysore DC -Rohini Sindhuri w-press statement -Chamarajanagar DC- allegation-oxigen-death
In a press statement, the Mysuru Deputy Commissioner Rohini Sindhuri has clarified that the Deputy Commissioner of Chamarajanagara District M.R. Ravi is making false allegations. He has made the allegations before the media even when the case is still in the investigation stage. As the DC of Mysuru District, I have not stopped supplying oxygen to either Chamarajanagara or any other District. The communication regarding the supply of oxygen to any district will be between the supplier and the District administration of that particular district.
If there is a lesser oxygen supply to Mysuru from Ballari, I cannot blame the Deputy Commissioner of Ballari. It is his responsibility to make arrangements required for his district. If it can’t be done he/she should inform the higher authorities. The office of the Deputy Commissioner of Chamarajanagara District has failed in doing so and now we are being blamed. The State Government inquiry will reveal all these facts,” her press statement read.
In the press statement, the DC Rohini Sindhuri has also revealed the details regarding the oxygen cylinders sent to Chamarajanagara on May 2 and 3, along with the time and bill number.
Keywords: Mysuru DC Rohini Sindhuri/ Chamarajanagara DC/ Oxygen supply/ incident

Key words: Mysore DC -Rohini Sindhuri w-press statement -Chamarajanagar DC- allegation-oxigen-death