ಛತ್ತೀಸ್ಗಢ ಜಿಲ್ಲಾಧಿಕಾರಿಯ ‘ನೆಗೆಟಿವ್’ ಸುದ್ದಿ ಬೆನ್ನಲ್ಲೇ ನೆಟ್ಟಿಗರ ಗಮನ ಸೆಳೆದ ಮೈಸೂರು ಡಿಸಿಯ’ ಪಾಸಿಟಿವ್ ‘ ಸುದ್ಧಿ..!

Promotion

ಮೈಸೂರು, ಮೇ24, 2021 : (www.justkannada.in news) : ಮೊನ್ನೆಯಷ್ಟೆ ಛತ್ತೀಸ್ಗಢ ಜಿಲ್ಲಾಧಿಕಾರಿ ರಣಬೀರ್ ಶರ್ಮ ಅವರ ನಡೆಯೊಂದು ವ್ಯಾಪಕ ಟೀಕೆಗೆ ಗುರಿಯಾಗಿತ್ತು. ಆ ಮೂಲಕ ಡಿಸಿಯಾದವರು ಹೇಗಿರಬಾರದು ಎಂಬುದಕ್ಕೆ ನಿದರ್ಶನವಾದರು.ಈಗ ಇದಕ್ಕೆ ಅಪವಾದ ಎಂಬಂತೆ ಮೈಸೂರು ಜಿಲ್ಲಾಧಿಕಾರಿ ಪಾಸಿಟಿವ್ ನಡೆ ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ.symptoms - black fungus- hospital –treatment-Mysore DC- Rohini Sindhuri
ಛತ್ತೀಸ್ಗಢ ಡಿಸಿ ರಣಬೀರ್ ಶರ್ಮಾ, ಮೆಡಿಕಲ್ ಶಾಪ್ ಗೆ ತೆರಳುತ್ತಿದ್ದ ಯುವಕನೊಬ್ಬನನ್ನು ಹಿಂದೆ ಮುಂದೆ ವಿಚಾರಿಸದೆ ಚೆನ್ನಾಗಿ ಥಳಿಸಿದ್ದರು. ಆತನ ಮೊಬೈಲ್ ಕಸಿದುಕೊಂಡು ನೆಲಕ್ಕಪ್ಪಳಿಸಿ ಹೊಡೆದು ಹಾಕಿದ್ದರು. ಈ ವೀಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಾಕಷ್ಟು ಪ್ರಚಾರ ಪಡೆದು, ಡಿಸಿ ವರ್ತನೆಗೆ ವ್ಯಾಪಕ ಅಕ್ರೋಶ ವ್ಯಕ್ತವಾಗಿ ಜಿಲ್ಲಾಧಿಕಾರಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದರು.
ಇದೀಗ ಮೈಸೂರು ಡಿಸಿ ರೋಹಿಣಿ ಸಿಂಧೂರಿ, ಖುದ್ದು ಪಿಪಿಇ ಕಿಟ್ ಧರಿಸಿ ಬ್ಲಾಕ್ ಫಂಗಸ್ ರೋಗಿಗಳನ್ನು ಭೇಟಿ ಮಾಡಿ ಯೋಗಕ್ಷೇಮ ವಿಚಾರಿಸಿದ್ದು, ಆಸ್ಪತ್ರೆಗೆ ಹೊರಗಡೆ ರೋಗಿಗಳ ಕುಟುಂಬ ವರ್ಗದವರ ಅಹವಾಲು ಆಲಿಸಿ ಸಮಸ್ಯೆಗೆ ಸ್ಥಳದಲ್ಲೇ ಪರಿಹಾರ ಸೂಚಿಸಿ ನಿಮ್ಮೊಟ್ಟಿಗೆ ನಾವಿದ್ದೇವೆ ಎಂಬ ಆಶ್ವಾಸನೆ ತುಂಬಿದ್ದು ಮೆಚ್ಚುಗೆಗೆ ಪಾತ್ರವಾಗಿದೆ.
ಒಟ್ಟಾರೆ ಮೈಸೂರಲ್ಲಿ ಇಂದು ನಡೆದಿದ್ದು ಇಷ್ಟು…
ಮೈಸೂರಿನಲ್ಲೂ ಬ್ಲಾಕ್ ಫಂಗಸ್ ಪ್ರಕರಣಗಳು ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಸೋಮವಾರ ಕೆ. ಆರ್ ಆಸ್ಪತ್ರೆಗೆ ಭೇಟಿ ನೀಡಿ, ಬ್ಲಾಕ್ ಫಂಗಸ್ ರೋಗಿಗಳ ವಿಭಾಗವನ್ನು ಪರಿಶೀಲಿಸಿದರು.Mysore-DC- Plan - Corona Control - Community 
ಪಿಪಿಇ ಕಿಟ್ ಧರಿಸಿಕೊಂಡು ಆಸ್ಪತ್ರೆಗೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳ ಕುರಿತು ಆಸ್ಪತ್ರೆಯಲ್ಲಿರುವ ರೋಗಿಗಳು ಹಾಗೂ ಅವರ ಸಂಬಂಧಿಕರು ಮೆಚ್ಚುಗೆ ವ್ಯಕ್ತಪಡಿಸುವುದರ ಜತೆಗೆ, ದೂರುಗಳ ಪಟ್ಟಿಯನ್ನೇ ಮುಂದಿಟ್ಟರು.
ವೈದ್ಯರು, ದಾದಿಯರು ಕೂಡ ವಿಪರೀತ ಒತ್ತಡದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳುತ್ತಲೇ, ಕೊರತೆಗಳನ್ನು ಬಗೆಹರಿಸುವುದಾಗಿ ಭರವಸೆ ನೀಡಿದರು. ಆಸ್ಪತ್ರೆಯ ವೈದ್ಯಾಧಿಕಾರಿಗಳ ಜೊತೆ ಮಾತುಕತೆ ನಡೆಸಿದರು.
ದೂರುಗಳ ಪಟ್ಟಿ
ಆಸ್ಪತ್ರೆಯಿಂದ ಡಿಸಿ ಹೊರ ಬರುತ್ತಿದ್ದಂತೆ ಸುತ್ತುವರೆದ ರೋಗಿಗಳ ಸಂಬಂಧಿಕರು. ಸಮಸ್ಯೆ ಹೇಳಿಕೊಳ್ಳಲು ಮುಗಿಬಿದ್ದರು.
“ನರ್ಸ್ ಗಳು, ವಾರ್ಡ್ ಬಾಯ್ ಗಳು ನಮ್ಮನ್ನ ಬೈಯುತ್ತಿದ್ದಾರೆ. ಲ್ಯಾಬ್ ಟೆಸ್ಟ್ ಇಲ್ಲಿ ಮಾಡುತ್ತಿಲ್ಲ. ಎಲ್ಲಾ ಔಷದಿಗಳನ್ನು ಹೊರಗೆ ಬರೆಯುತ್ತಿದ್ದಾರೆ,’’ ಎಂದು ರೋಗಿಗಳ ಸಂಬಂಧಿಕರು ದೂರಿದರು. ಇಂಥ ಸಮಸ್ಯೆ ಬಗೆಹರಿಸಲು ಹೆಲ್ಪ್ ಡೆಸ್ಕ್ ಮಾಡುವುದಾಗಿ ರೋಹಿಣಿ ಸಿಂಧೂರಿ ಭರವಸೆ ನೀಡಿದರು. ಸಮಸ್ಯೆ ಹೇಳಲು ಓಡೋಡಿ ಬಂದ ರೋಗಿಗಳ ಸಂಬಂಧಿಕರನ್ನು ಸಮಾದಾನ ಪಡಿಸಿದರು. ಆಸ್ಪತ್ರೆ ಒಳಗೆ ನಮ್ಮನ್ನು ಬಿಡುವುದಿಲ್ಲ ಎಂಬುದು ಕೆಲವರ ಆಕ್ಷೇಪವಾಗಿತ್ತು.symptoms - black fungus- hospital –treatment-Mysore DC- Rohini Sindhuri
“ಆಸ್ಪತ್ರೆಯ ಒಳಗೆ ಯಾರನ್ನೂ ಬಿಡುವುದಿಲ್ಲ. ಆಸ್ಪತ್ರೆಯ ಸಿಬ್ಬಂದಿಯನ್ನು ಅರ್ಥ ಮಾಡಿಕೊಳ್ಳಿ. ನಮ್ಮಮನೆಯಲ್ಲೂ ಪಾಸಿಟಿವ್ ಪೇಷೆಂಟ್ ಇದ್ದಾರೆ. ಆದರೂ ನಾವು ನಿಮಗೆ ಕೆಲಸ ಮಾಡ್ತಾ ಇರೋದು,’’ ಎಂದು ಮಮವರಿಕೆ ಮಾಡಿಕೊಟ್ಟರು.
ಪ್ರತಿ ಒಳರೋಗಿ ಹೆಸರಲ್ಲಿ ರಿಜಿಸ್ಟ್ರಾರ್
ರೋಗಿಗಳ ಕಡೆಯವರ ದೂರು ಆಲಿಸಿದ ಬಳಿಕ ಸ್ಥಳದಲ್ಲಿಯೇ ಇದ್ದ ವೈದಾಧಿಕಾರಿಗಳಿಗೆ, ಪ್ರತಿ ರೋಗಿಯ ಹೆಸರಿನಲ್ಲಿ ರಿಜಿಸ್ಟಾರ್ ತೆರೆಯಲು ಸೂಚಿಸಿದರು. “ನಿಮ್ಮ ಸಮಸ್ಯೆ ಏನಿದೆ ಎಂಬುದನ್ನು ಹೆಲ್ಪ್ ಡೆಸ್ಕ್ ನಲ್ಲಿ ರಿಜಿಸ್ಟರ್ ಮಾಡಿ. ನಾನೇ ನಿಯಮಿತವಾಗಿ ಬಂದು ಪರಿಶೀಲಿಸುವೆ,’’ ಎಂದು ರೋಗಿಗಳ ಸಂಬಂಧಿಕರಿಗೆ ತಿಳಿಸಿದರು.mysore-dc-rohini-sindhoori-visits-black-fungus-ward-hospital

ಡಿಸಿ ಮೇಡಂ ಗ್ರೇಟ್
ನೀವೂ ಒಂದು ಹೆಣ್ಣಾಗಿ ಇಷ್ಟೊಂದು ಸೇವೆ ಮಾಡ್ತಿದ್ದೀರಾ.ನಿಮಗೆ ನಮ್ಮ ಧನ್ಯವಾದಗಳು, ಆದರೆ ಈ ಸಮಸ್ಯೆ ಬಗೆಹರಿಸಿ.
ನಮಗೆ ನರ್ಸ್, ಕರೆ ಮಾಡಿ ಕೆಟ್ಟದಾಗಿ ಬೈತಾರೆ.. ಎಂದು ಡಿಸಿ ಬಳಿ ಕಣ್ಣೀರು ಹಾಕಿದರು.
ಈ ವೇಳೆ ಮಹಿಳೆಗೆ ಸಾಂತ್ವನ ಹೇಳಿ ಅಧಿಕಾರಿಗೆ ಸಮಸ್ಯೆ ಬಗೆಹರಿಸುವಂತೆ ಸೂಚನೆ ನೀಡಿದ ಜಿಲ್ಲಾಧಿಕಾರಿ

key words : mysore-DC-rohini.sindhoori-visits-black.fungus-ward-hospital