ಮೈಸೂರಲ್ಲಿ ಪ್ರಭಾವಿಗಳ ಭೂ ಮಾಫಿಯ ಆರೋಪ : ಜಿಲ್ಲಾಧಿಕಾರಿ ಗೌತಮ್ ಬಗಾದಿ ನೇತೃತ್ವದಲ್ಲಿ ಅಧಿಕಾರಿಗಳ ಸ್ಥಳ ಪರಿಶೀಲನೆ

Mysore-DC-MUDA-land-mafia-allegation-spot-inspection

kannada t-shirts

 

ಮೈಸೂರು, ಜ.07, 2022 : (www.justkannada.in news ): ಮೈಸೂರು ಸುತ್ತಮುತ್ತಲಿನ ಪ್ರಭಾವಿಗಳ ಭೂ ಅಕ್ರಮ ಆರೋಪದ ಹಿನ್ನೆಲೆಯಲ್ಲಿ ಇಂದು ಜಿಲ್ಲಾಧಿಕಾರಿ ಗೌತಮ್ ಬಗಾದಿ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಜಾಗ ವೀಕ್ಷಿಸಿ ಪರಿಶೀಲನೆ ನಡೆಸಿತು.

ಮೈಸೂರು ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ (Rohini Sindhuri ) ಅವರು ಆರ್.ಟಿ.ಐ ಕಾರ್ಯಕರ್ತರ ದೂರಿನ ಹಿನ್ನೆಲೆಯಲ್ಲಿ, ಬರೆದ ಪತ್ರದ ಮೇರೆಗೆ ಭೂ ಅಕ್ರಮ ಪ್ರಕರಣದ ತನಿಖೆ ನಡೆಸುವಂತೆ ಹಾಲಿ ಜಿಲ್ಲಾಧಿಕಾರಿ ಗೌತಮ್ ಬಗಾದಿ ಅವರಿಗೆ ಕಳೆದ ಸೆಪ್ಟೆಂಬರ್ ನಲ್ಲಿ ಆದೇಶಿಸಲಾಗಿತ್ತು. ಆದರೆ ಕಳೆದ ಅಕ್ಟೋಬರ್ ನಲ್ಲಿ ನಾಲ್ಕು ತಿಂಗಳು ಕಾಲಾವಕಾಶ ಕೇಳಿ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಸರಕಾರಕ್ಕೆ ಪತ್ರ ಬರೆದಿದ್ದರು.

ಭೂ ಒತ್ತುವರಿ ಸಂಬಂಧ ಸಮಗ್ರ ತನಿಖೆ ನಡೆಯಬೇಕಿದೆ. ಸಂಬಂಧಪಟ್ಟವರಿಗೆ ತಿಳಿವಳಿಕೆ ನೋಟಿಸ್ ನೀಡಬೇಕು. ಜಂಟಿ ಸರ್ವೇ ಮೂಲಕ ಭೂಮಿ ಅಳತೆ ಮಾಡಬೇಕು. ಪ್ರತಿ ಹಂತದಲ್ಲೂ ಕಂದಾಯ ಇಲಾಖೆ, ನಗರಾಭಿವೃದ್ಧಿ ಪ್ರಾಧಿಕಾರ, ಭೂ ಮಾಪನ ಇಲಾಖೆ ಸಮನ್ವಯ ಅಗತ್ಯ. ಆದರೆ ಈಗ ದಸರಾ ಹಾಗೂ ಕೋವಿಡ್ ತುರ್ತು ಕಾರ್ಯಗಳು ಇರುವುದರಿಂದ ಕಾಲಮಿತಿ ವಿಸ್ತರಿಸಲು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಡಿಸಿ ಮನವಿ ಮಾಡಿದ್ದರು.

April 10-20 Mysore-tourist-destinations-visit-Corona-Negative-Reporting-Mandatory-DC-Rohini Sindhuri

ಇದೀಗ ಜಿಲ್ಲಾಧಿಕಾರಿ ಕೇಳಿದ್ದ ಕಾಲಾವಕಾಶ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಇಂದು ಅಧಿಕಾರಿಗಳ ತಂಡದ ಜತೆ ಮೈಸೂರು ತಾಲೂಕಿನ ಕೇರ್ಗಳ್ಳಿ, ದಟ್ಟಗಳ್ಳಿ, ಯಡಹಳ್ಳಿ, ಲಿಂಗಾಂಬುದಿಪಾಳ್ಯದಲ್ಲಿ ನಡೆದಿದೆ ಎನ್ನಲಾದ ಭೂ ಅಕ್ರಮಗಳ ಪರಿಶೀಲನೆ ನಡೆಸಿದರು.

 

key words : Mysore-DC-MUDA-land-mafia-allegation-spot-inspection

ENGLISH SUMMARY…

Land mafia allegations against influential people in Mysuru: Inspection by officials concerned in the leadership of DC Bagadi Gowtham
Mysuru, January 7, 2022 (www.justkannada.in): Following land mafia allegations by influential persons in Mysuru, a team of officials led by Deputy Commissioner Bagadi Gowtham today visited several places and inspected them.
The government had issued orders to the present Deputy Commissioner Bagadi Gowtham in September 2021, to conduct an investigation based on a letter written by the former Mysuru DC Rohini Sindhuri alleging land mafia, following an application submitted by an RTI activist. However, in October 2021, Dr. Bagadi Gowtham had written to the government appealing to provide him four months time to conduct the inspection.
The DC had appealed to the Principal Secretary, Revenue Department requesting to provide him time as the process includes a lot of activities like investigation on the land encroachments, issuing notices to the persons concerned, joint survey to measure the land, coordination in all the levels from the Revenue Department, Urban Development Authority, etc.
As the time that the DC had requested is nearing, a team of officials visited several sites located at Kergalli in Mysuru Taluk, Dattagalli, Yadahalli, Lingambudipalya and inspected.
Keywords: Land mafia/ allegations/ influential people/ Mysuru/ inspection/ DC

website developers in mysore