ಮೈಸೂರು ಡಿಸಿ ಮತ್ತು ಕೆಲ ಶಾಸಕರ ನಡುವೆ ವೈ ಮನಸ್ಸಿನ ವಿಚಾರ – ಶಾಸಕ ಯತೀಂದ್ರ ಸಿದ್ಧರಾಮಯ್ಯ ಪ್ರತಿಕ್ರಿಯಿಸಿದ್ದು ಹೀಗೆ…

Promotion

ಮೈಸೂರು,ಡಿಸೆಂಬರ್,3,2020(www.justkannada.in): ಮೈಸೂರು ಡಿಸಿ ರೋಹಿಣಿ ಸಿಂಧೂರಿ ಮತ್ತು ಕೆಲ ಶಾಸಕರ ನಡುವೆ ವೈ ಮನಸ್ಸಿನ ವಿಚಾರ ಕುರಿತು ಪ್ರತಿಕ್ರಿಯಿಸಿರುವ ಶಾಸಕ ಯತೀಂದ್ರ ಸಿದ್ಧರಾಮಯ್ಯ, ಎಂಎಲ್ ಎ ಗಳನ್ನು ಬಿಟ್ಟು ಕಾರ್ಯಕ್ರಮ ಮಾಡಿದ್ರೆ ಪ್ರೋಟೋಕಾಲ್ ವೈಲೆಟ್ ಆಗುತ್ತೆ. ಅಧಿಕಾರಿಗಳೇ ಕಾರ್ಯಕ್ರಮ ಮಾಡಬೇಕಾದಲ್ಲಿ ಶಾಸಕರಿಗೆ ತಿಳಿಸಬೇಕು ಎಂದು ಹೇಳಿದ್ದಾರೆ.logo-justkannada-mysore

ಮೈಸೂರಿನಲ್ಲಿ ಇಂದು ಮಾತನಾಡಿದ ಶಾಸಕ ಯತೀಂದ್ರ ಸಿದ್ಧರಾಮಯ್ಯ, ಜನಸ್ಪಂದನಾ ಕಾರ್ಯಕ್ರಮ ಮಾಡಬೇಕಿರೋದು ಎಂಎಲ್ ಎ ಗಳು. ಕೆಲಸಗಳಾಗಿಲ್ಲ ಅಂದ್ರೆ ಜನ ನಮ್ಮನ್ನ ಕೇಳ್ತಾರೆ. ಕೆಲಸಗಳಾಗಿಲ್ಲ ಅಂದ್ರೆ ನಾವು ಅಧಿಕಾರಿಗಳನ್ನ ಕೇಳೋದು. ಅದನ್ನ ಬಿಟ್ಟು ಎಂಎಲ್ ಎ ಗಳನ್ನು ಬಿಟ್ಟು ಕಾರ್ಯಕ್ರಮ ಮಾಡಿದ್ರೆ ಪ್ರೋಟೋಕಾಲ್ ವೈಲೆಟ್ ಆಗುತ್ತೆ. ಅಧಿಕಾರಿಗಳೇ ಕಾರ್ಯಕ್ರಮ  ಮಾಡಬೇಕಾದಲ್ಲಿ ಶಾಸಕರಿಗೆ ತಿಳಿಸಬೇಕು. ಅವರಿಗೆ ತಿಳಿಸದೇ ಕಾರ್ಯಕ್ರಮಗಳನ್ನ ಮಾಡಿದ್ರೆ ಶಾಸಕರ ಬೇರೆ ಕಾರ್ಯಕ್ರಮಗಳಿಗೆ ಕ್ಲ್ಯಾಶ್ ಆಗಲಿದೆ. ಇದರಿಂದ ಜನಪ್ರತಿನಿಧಿಗಳ ಜೊತೆ ಸಮನ್ವಯ ಕಾಪಾಡಿಕೊಂಡು ಹೋಗಬೇಕು ಇಲ್ಲವಾದಲ್ಲಿ ಇದು ತಪ್ಪಾಗಲಿದೆ ಎಂದು ಹೇಳಿದರು.mysore-dc-mla-talk-war-mla-yatindra-siddaramaiah-reaction

ಇತ್ತೀಚೆಗೆ ಮೈಸೂರು ಜಿಲ್ಲಾ ಪಂಚಾಯತ್ ನಲ್ಲಿ ನಡೆದ ಕೆಡಿಪಿ ಸಭೆ ಬಳಿಕ ಮೈಸೂರು ಡಿಸಿ ವಿರುದ್ಧ ಹುಣಸೂರು ಶಾಸಕ ಹೆಚ್.ಪಿ ಮಂಜುನಾಥ್ ಆಕ್ರೋಶ ಹೊರ ಹಾಕಿದ್ದರು. ನಂತರ ಎಂಎಲ್ ಸಿ ರಘು ಆಚಾರ್, ಜೆಡಿಎಸ್ ಶಾಸಕ ಸಾ.ರಾ ಮಹೇಶ್ ಸಹ ಡಿಸಿ ರೋಹಿಣಿ ಸಿಂಧೂರಿ ಅವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು.

Key words: mysore DC-mla-talk war-  MLA -Yatindra Siddaramaiah -reaction