ಮೈಸೂರು ಜಿಲ್ಲೆಯ ಕೋವಿಡ್ ಸ್ಥಿತಿಗತಿ ಮತ್ತು ಚಿಕಿತ್ಸೆಗೆ ಸಕಲ ಸಿದ್ಧತೆಯ ಬಗ್ಗೆ ವಿವರ ನೀಡಿದ ಜಿಲ್ಲಾಧಿಕಾರಿ ಬಗಾದಿ ಗೌತಮ್.

kannada t-shirts

ಮೈಸೂರು,ಜನವರಿ,10,2022(www.justkannada.in):  ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ದಿನೇ ದಿನೇ ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದು 3ನೇ ಅಲೆ ಭೀತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ  ನೈಟ್ ಕರ್ಫ್ಯೂ ವೀಕೆಂಡ್ ಕರ್ಫ್ಯೂ  ಜಾರಿ ಮಾಡಲಾಗಿದ್ದು ಈ ಮಧ್ಯೆ ಮೈಸೂರು ಜಿಲ್ಲೆಯಲ್ಲಿನ ಕೋವಿಡ್ ಸ್ಥಿತಿಗತಿ ಬಗ್ಗೆ ಜಿಲ್ಲಾಧಿಕಾರಿ ಬಗಾದಿ ಗೌತಮ್ ಮಾಹಿತಿ ನೀಡಿದ್ದಾರೆ.

ಇಂದು ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಡಿಸಿ ಬಗಾದಿ ಗೌತಮ್, ಜಿಲ್ಲೆಯಲ್ಲಿ ಇಂದಿನವರೆಗೆ ವರದಿಯಾಗಿರುವ ಕೊರೊನಾ ಪ್ರಕರಣಗಳ ಪೈಕಿ 125 ಮಂದಿ ಮಾತ್ರ ಆಸ್ಪತ್ರೆಗೆ ದಾಖಲಾಗಿದ್ದಾರೆ. ಉಳಿದವರು ಹೋಂ ಐಸೋಲೇಷನ್ ನಲ್ಲಿದ್ದಾರೆ. ನಿನ್ನೆಯ ಕೊರೊನಾ ಪರೀಕ್ಷೆ ವರದಿ ಪ್ರಕಾರ ಪಾಸಿಟಿವಿಟಿ ದರ 5.62% ಇದೆ. ಒಂದು ವಾರದ ಪಾಸಿಟಿವಿಟಿ ದರ 2.05% ಇದೆ. ಮೈಸೂರು ಜಿಲ್ಲೆಯಲ್ಲಿ ವರದಿಯಾಗುತ್ತಿರುವ ಪಾಸಿಟಿವಿಟಿ ಪ್ರಕರಣಗಳಲ್ಲಿ ಶೇಕಡಾ 80% ರಷ್ಟು ಮೈಸೂರು ನಗರ ಹಾಗೂ ಮೈಸೂರು ತಾಲೂಕಿನಲ್ಲಿ ವರದಿಯಾಗಿವೆ. ಮೊದಲ ಕೊರೊನಾ ಡೋಸ್ ಪಡೆದಿರುವವರ ಪ್ರಮಾಣ ಶೇಕಡಾ 96.5% ರಷ್ಟಿದೆ. ಎರಡನೇ ಡೋಸ್ ಪಡೆದವರ ಪ್ರಮಾಣ ಶೇಕಡಾ 82% ರಷ್ಟಿದೆ ಎಂದು ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ಒಂದೂ ಡೋಸ್ ಪಡೆಯದ 90 ಸಾವಿರ ಮಂದಿ ಬಾಕಿ ಇದ್ದಾರೆ. ಇವರು ಕೊರೋನಾಗೆ ತುತ್ತಾಗೋದು ಶೇಕಡಾ 10 ಪಟ್ಟು ಹೆಚ್ಚಿದೆ. ದಯವಿಟ್ಟು ಹಠ ಮಾಡದೆ ಲಸಿಕೆ ಹಾಕಿಸಿಕೊಳ್ಳಿ ಎಂದು ಮೈಸೂರು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಮನವಿ ಮಾಡಿದರು.

ಮಂಡಕಳ್ಳಿಯಲ್ಲಿರುವ ಕೋವಿಡ್ ಕೇರ್ ಸೆಂಟರ್ ಇಂದಿನಿಂದ ಕಾರ್ಯಾರಂಭ.

ಮೈಸೂರು ಜಿಲ್ಲೆಯಾದ್ಯಂತ ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಲು ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ. ಮಂಡಕಳ್ಳಿಯಲ್ಲಿರುವ ಕೋವಿಡ್ ಕೇರ್ ಸೆಂಟರ್ ಇಂದಿನಿಂದ ಕಾರ್ಯಾರಂಭ ಮಾಡಲಿದೆ. 700 ಬೆಡ್ ಗಳ ವ್ಯವಸ್ಥೆ ಮಾಡಲಾಗಿದೆ. ಕೋವಿಡ್ ವಾರ್ ರೂಮ್ ಕೂಡ ಸಿದ್ಧವಾಗಿದೆ. ಈಗಾಗಲೇ 20 ಜನ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಎಲ್ಲಾ ತಾಲ್ಲೂಕು ಆರೋಗ್ಯಾಧಿಕಾರಿಗಳಿಗೆ ಸಲಹೆ ಸೂಚನೆ ನೀಡಲಾಗಿದೆ. ಕೊರೊನಾ ಲಸಿಕೆ ಪಡೆಯದವರಿಗೆ ಕೂಡಲೇ ಲಸಿಕೆ ನೀಡಲು ಕ್ರಮ ಕೈಗೊಳ್ಳಲಾಗಿದೆ.

ಮಾಸ್ಕ್ ಧರಿಸದೇ ಸಂಚರಿಸುವವರ ವಿರುದ್ದ ಕ್ರಮ ಕೈಗೊಳ್ಳಲಾಗುತ್ತಿದೆ. ಜಿಲ್ಲಾಡಳಿತದ ಜೊತೆ ಜನರು ಸಹಕರಿಸಬೇಕು. ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಆದಷ್ಟು ಎನ್ 95 ಮಾಸ್ಕ್ ಧರಿಸಬೇಕು. ಮಾಸ್ಕ್ ಧರಿಸದಿದ್ದರೇ 99% ಸೋಂಕು ತಗುಲುವ ಸಾಧ್ಯತೆ ಇದೆ. ಒಂದು ವೇಳೆ ಕೊರೊನಾ ಸೋಂಕು ತಗುಲಿದರೂ ಗಾಬರಿಯಾಗಬಾರದು. ಅವಶ್ಯಕತೆ ಇರುವವರು ಮಾತ್ರ ಆಸ್ಪತ್ರೆಗೆ ದಾಖಲಾಗಿ. ಅನಗತ್ಯವಾಗಿ ಆಸ್ಪತ್ರೆಗೆ ದಾಖಲಾಗಬೇಡಿ. ಆಗ ಮಾತ್ರ ಕೊರೊನಾದ ಮೂರನೇ ಅಲೆಯನ್ನು ಸಮರ್ಥವಾಗಿ ಎದುರಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ವಸ್ತು ಪ್ರದರ್ಶನವನ್ನು ಬಂದ್ ಮಾಡುವಂತೆ ಸೂಚನೆ

ತಾಲ್ಲೂಕು ಕೇಂದ್ರಗಳಲ್ಲಿ ಕೋವಿಡ್ ಕೇರ್ ಸೆಂಟರ್ ಗಳನ್ನು ಹೆಚ್ಚಳ ಮಾಡಲಾಗುತ್ತದೆ. ಮೈಸೂರಿನ ಪ್ರಮುಖ ಪ್ರವಾಸಿ ತಾಣಗಳಲ್ಲಿ ಅಗತ್ಯ ಮುನ್ನೆಚ್ಚರಿಕೆ ತೆಗೆದುಕೊಳ್ಳಲಾಗಿದೆ. ಅರಮನೆಗೆ ಒಂದು ಬಾರಿ 200ಜನರಿಗೆ ಮಾತ್ರ ಪ್ರವೇಶಕ್ಕೆ ಅವಕಾಶವಿದೆ. ಹಾಗೆಯೇ ವಸ್ತು ಪ್ರದರ್ಶನವನ್ನು ಬಂದ್ ಮಾಡುವಂತೆ ಸೂಚಿಸಲಾಗಿದೆ. ಶಾಲಾ ಕಾಲೇಜುಗಳಲ್ಲಿ ಕೋವಿಡ್ ಮಾರ್ಗ ಸೂಚಿಗಳ ಕಟ್ಟುನಿಟ್ಟಿನ ಪಾಲನೆ ಮಾಡುವಂತೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದು ಡಾ ಬಗಾದಿಗೌತಮ್ ತಿಳಿಸಿದರು.

Key words: mysore-DC- Bagadi Gautam-Covid

ENGLISH SUMMARY…

Mysuru DC provides details about COVID situation and preparations in Mysuru Dist.
Mysuru, January 10, 2022 (www.justkannada.in): Constant increase number of COVID cases in the country has led to the fear of the third wave of the pandemic. The State Government has imposed night curfew as a precautionary measure. Mysuru District Deputy Commissioner Bagadi Gowtham today provided information about the COVID situation Mysuru District.
Addressing a press meet today, he informed that out of the total number of cases reported in the district only 125 of the patients have been hospitalized, whereas others are under home isolation. The positivity rate as per yesterday’s Corona tests is 5.62% in the district. This week’s positivity rate is 2.05%. Out of the total positive cases reported in the district, 80% are from Mysuru city and Mysuru Taluks. The total percentage of people who have taken first dose of the COVID vaccine is 96.5% and the percentage of people who have taken second dose is 82%, he informed.
“There are still 90,000 people in the district who have still not received even one dose. The possibility of getting infected is 10% more. Hence, I request all of them to get the vaccination immediately,” he requested.
On the occasion, he informed that a makeshift COVID care centre with 700 beds has been started in Mandakalli. It is manned by 20 people. Instructions have been given to the Taluk Health Officers to be alert.
Precautionary measures have been taken at the major tourist destinations in the city. Accordingly only 200 people will be allowed into the palace at a time. Instructions have been given to close the stalls at the popular Dasara exhibition, he said.
Keywords: Mysuru/ Deputy Commissioner/ COVID-19 Pandemic/ situation/ information

website developers in mysore