ಶ್ರೀರಂಗಪಟ್ಟಣ, ಚಾಮರಾಜ ನಗರದಲ್ಲೂ ದಸರಾ ಆಚರಣೆ-ಮೈಸೂರು ದಸರಾ ಪೋಸ್ಟರ್,  ವೆಬ್ ಸೈಟ್  ಬಿಡುಗಡೆ ಬಳಿಕ ಸಚಿವ  ವಿ.ಸೋಮಣ್ಣ ಹೇಳಿಕೆ

Promotion

ಮೈಸೂರು,ಆ,31,2019(www.justkannada.in): ಮೈಸೂರು ಸೇರಿದಂತೆ  ಶ್ರೀರಂಗಪಟ್ಟಣ,  ಚಾಮರಾಜ ನಗರದಲ್ಲೂ  ದಸರಾ ಆಚರಣೆ ಮಾಡಲಾಗುತ್ತದೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ. ವಿ. ಸೋಮಣ್ಣ ಹೇಳಿದರು.

ನಗರದ  ಜಲದರ್ಶಿನಿಯಲ್ಲಿ  ದಸರಾ  ಪೋಸ್ಟರ್,  ವೆಬ್ಸೈಟ್  ಬಿಡುಗಡೆ ಗೊಳಿಸಿದ ನಂತರ  ಪತ್ರಿಕಾಘೋಷ್ಠಿ  ನಡೆಸಿ ಮಾತನಾಡಿದ   ಸಚಿವ ವಿ. ಸೋಮಣ್ಣ, ಶ್ರೀರಂಗಪಟ್ಟಣ,  ಚಾಮರಾಜ ನಗರದಲ್ಲೂ ದಸರಾ ಆಚರಣೆ ಮಾಡಲು  ಹಣ ಬಿಡುಗಡೆ ಮಾಡಲಾಗುತ್ತೆ. ಚಾಮರಾಜನಗರ ಜಿಲ್ಲೆಯ ದಸರಾ ಆಚರಣೆ ಉಸ್ತುವಾರಿಯನ್ನ ಶಾಸಕ ನಿರಂಜನ್ ಕುಮಾರ್ ಗೆ  ನೀಡಲಾಗಿದೆ.  ನಿರಂಜನ್ ಗೆ  ಜವಾಬ್ದಾರಿ ಕೊಟ್ಟಿದ್ದೇನೆ. ಅವರು ನೋಡ್ಕೊಳ್ತಾರೆ ಎಂದರು.

ಮಂಡ್ಯ ಜಿಲ್ಲೆಯ  ಶ್ರೀರಂಗಪಟ್ಟಣದಲ್ಲಿ  ದಸರಾ ಆಚರಣೆ ಕುರಿತು ಶಾಸಕ  ರವೀಂದ್ರ ಶ್ರೀಕಂಠಯ್ಯ ಅವರಿಗೆ ನೀಡಲಾಗಿದೆ ಎಂದ  ಸಚಿವ ವಿ. ಸೋಮಣ್ಣ ತಿಳಿಸಿದರು.

Key words: mysore-dasara2019-Minister V. Somanna – launch – website