ಮೈಸೂರು ದಸರಾ: ಯದುವೀರ್ ರಿಂದ ಬನ್ನಿಮರಕ್ಕೆ ವಿಶೇಷ ಪೂಜೆ ಸಲ್ಲಿಕೆ….

Promotion

ಮೈಸೂರು,ಅಕ್ಟೋಬರ್ ,26,2020(www.justkannada.in):  ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ ಹಿನ್ನೆಲೆ ಅರಮನೆಯಲ್ಲಿ ಸಾಂಪ್ರದಾಯಿಕ ಪೂಜೆ ಪುನಸ್ಕಾರ ಕಳೆಗಟ್ಟಿದ್ದು ಈ ನಡುವೆ ರಾಜವಂಶಸ್ಥ ಕೃಷ್ಣದತ್ತ  ಚಾಮರಾಜ ಒಡೆಯರ್ ಬನ್ನಿ ಮರಕ್ಕೆ ವಿಶೇಷ ಪೂಜೆ ಸಲ್ಲಿಸಿದರು.jk-logo-justkannada-logo

ಯದುವಂಶದ ಸಂಪ್ರದಾಯದಂತೆ ಅರಮನೆಯಲ್ಲಿ  ರಾಜವಂಶಸ್ಥ ಯದುವೀರ್ ಅವರು ವಿಜಯಯಾತ್ರೆ ನಡೆಸಿದರು. ಮಂಗಳವಾದ್ಯ ನಾದಸ್ವರದೊಂದಿಗೆ ಅರಮನೆ ಭುವನೇಶ್ವರಿ ದೇಗುಲದ ಬಳಿ ಆಗಮಿಸಿ ಯದುವೀರ್  ಶಮಿ ಪೂಜೆ ನೆರವೇರಿಸಿದರು.mysore-dasara-special-worship-yadaveer-bunny-tree

ಅರಮನೆಯ ಭುವನೇಶ್ವರಿ ದೇಗುಲದಲ್ಲಿರುವ ಬನ್ನಿ ಮರಕ್ಕೆ ಯದುವೀರ್  ಪೂಜೆ ನೆರವೇರಿಸಿದ್ದು, ನಾದಸ್ವರ ಮೇಳದೊಂದಿಗೆ ಬನ್ನಿ ಪೂಜೆ ಕಳೆಗಟ್ಟಿತು. ಇನ್ನು ಭುವನೇಶ್ವರಿ ದೇಗುಲಕ್ಕೆ ಆಪ್ತರಿಗೆ ಮಾತ್ರ ಅವಕಾಶ ನೀಡಲಾಗಿತ್ತು.

Key words: Mysore Dasara-Special worship – Yadaveer – Bunny tree.