ಮೈಸೂರು ದಸರಾ ಮಹೋತ್ಸವ: ಗಜ ಪಯಣ ರದ್ಧು, ಜಂಬೂಸವಾರಿಗೆ ಕೇವಲ 5 ಆನೆಗಳು ಮಾತ್ರ….

Promotion

ಮೈಸೂರು,ಸೆಪ್ಟಂಬರ್,8,2020(www.justkannada.in): ಕೊರೋನಾ ಹಿನ್ನೆಲೆ ಈ ಬಾರಿ ಸರಳ ಮತ್ತು ಸಂಪ್ರದಾಯಕ ದಸರಾ ಆಚರಣೆಗೆ ರಾಜ್ಯ ಸರ್ಕಾರ ತೀರ್ಮಾನಿಸಿದ್ದು ಈ ನಡುವೆ ಜಂಬೂಸವಾರಿ, ಯುವ ದಸರಾ ಸೇರಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಬ್ರೇಕಿ ಹಾಕಲಾಗಿದೆ.jk-logo-justkannada-logo

ಅಂತೆಯೇ ಈ ಬಾರಿ ಗಜಪಯಣಕ್ಕೂ ಬ್ರೇಕ್ ಹಾಕಲಾಗಿದೆ. ಮೈಸೂರು ದಸರಾ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳಲು ಕರೆತರಲಾಗುವ ಆನೆಗಳಿಗೆ  ಹುಣಸೂರು ತಾಲ್ಲೂಕಿನ ವೀರನಹೊಸಹಳ್ಳಿ ಬಳಿ ಗಜಪಯಣ ಎಂಬ ಕಾರ್ಯಕ್ರಮ  ಮಾಡಿ  ಬೀಳ್ಕೊಡಲಾಗುತ್ತಿತ್ತು.

ನಂತರ ಮೈಸೂರಿಗೆ ಆಗಮಿಸುವ ಆನೆಗಳು ಮೊದಲು  ಮೈಸೂರು ಅರಣ್ಯಭನದಲ್ಲಿ ತಂಗಿರುತ್ತಿದ್ದವು, ಎರಡು ದಿನಗಳ ಬಳಿಕ ಆನೆಗಳನ್ನ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡುವ ಮೂಲಕ ಅರಮನೆಗೆ ಕರೆತರಲಾಗುತ್ತಿತ್ತು. ಆದರೆ ಈ ಬಾರಿ ಗಜಪಯಣ ಇರಲ್ಲ. ಹೀಗಾಗಿ ಆನೆಗಳು ಆನೆಕ್ಯಾಂಪ್ ನಿಂದ ನೇರವಾಗಿ ಮೈಸೂರು ಅರಮನೆಗೆ ಪ್ರವೇಶಿಸಲಿವೆ.

ಬೆಂಗಳೂರಿನಲ್ಲಿ ಇಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ದಸರಾ ಉನ್ನತಮಟ್ಟದ ಸಮಿತಿ ಸಭೆಯಲ್ಲಿ ಭಾಗವಹಿಸಿದ್ದ ಮೈಸೂರಿನ ಕೆ.ಆರ್ ಕ್ಷೇತ್ರ ಬಿಜೆಪಿ ಶಾಸಕ ಎಸ್.ಎ ರಾಮದಾಸ್, ದೂರವಾಣಿ ಮೂಲಕ ಜಸ್ಟ್ ಕನ್ನಡ ಜತೆ ಮಾತನಾಡಿ ಸಭೆಯ ಮಾಹಿತಿ ನೀಡಿದರು.

ಎಲ್ಲಾ ಆಚರಣೆಗಳನ್ನ ಕೈಬಿಡಲಾಗಿದೆ. ಆನೆಗಳು ನೇರವಾಗಿ ಆನೆಕ್ಯಾಂಪ್ ನಿಂದ ಅರಮನೆಗೆ ಪ್ರವೇಶ ಮಾಡುತ್ತದೆ. ಈ ಕಾರ್ಯಕ್ರಮ ಸಹ ತುಂಬಾ ಸರಳವಾಗಿರುತ್ತದೆ. ಸಾರ್ವಜನಿಕರಿಗೆ ಈ ಸಂದರ್ಭದಲ್ಲಿ ಪ್ರವೇಶ ನಿಷಿದ್ಧವಾಗಿರುತ್ತದೆ. ಈ ಬಾರಿ ದಸರಾ ಮಹೋತ್ಸವದಲ್ಲಿ ಕೇವಲ 5 ಆನೆಗಳು  ಮಾತ್ರ ಜಂಬೂ ಸವಾರಿಯಲ್ಲಿ ಭಾಗವಹಿಸುತ್ತವೆ.  ಇನ್ನು ಈ ವೇಳೆ ಅತಿಹೆಚ್ಚು ಜನ ಸಹ ಗುಂಪುಗೂಡುವುದನ್ನು ನಿಯಂಯತ್ರಿಸಲು ಸೂಚಸಲಾಗುವುದು. mysore-dasara-simple-gajapayana-mla-sa-ramadas

ಅಂಬಾರಿ ಯಾರ ಹೆಗಲಿಗೆ…

ಈಗಾಗಲೇ ಅಂಬಾರಿ ಆನೆ ಅರ್ಜುನನಿಗೆ 60 ವರ್ಷಗಳು ತುಂಬಿರುವ ಕಾರಣ ಸುಪ್ರೀಂಕೋರ್ಟ್ ನ ನಿಯಮಾವಳಿಯಂತೆ ಅರ್ಜುನನಿಗೆ ಅಂಬಾರಿ ಜವಾಬ್ದಾರಿ ನೀಡಲಾಗದು. ಈ ಹಿನ್ನೆಲೆಯಲ್ಲಿ  ಅಭಿಮನ್ಯುಗೆ ಅಂಬಾರಿ ಹೊರುವ ಜವಾಬ್ದಾರಿ ಬಹುತೇಕ ಪಕ್ಕ ಎನ್ನಲಾಗಿದೆ.  ಕೇವಲ ಅರಮನೆ ಆವರಣದಲ್ಲಿ ಮಾತ್ರ ಸಂಪ್ರದಾಯಕವಾಗಿ ಜಂಬೂ ಸವಾರಿ ನಡೆಯುವ ಕಾರಣ ಅಭಿಮನ್ಯುವಿನ ಅನುಭವದ ಕೊರತೆ ಹೆಚ್ಚಾಗಿ ಕಾಡದು.

ಬಾಕಿ ಹಣ ಬಿಡುಗಡೆ…

ಈ ಬಾರಿ ದಸರಾ ಮಹೋತ್ಸವಕ್ಕೆ 10 ಕೋಟಿ ರೂ ಬಿಡುಗಡೆ ಮಾಡಲು ರಾಜ್ಯ ಸರ್ಕಾರ ಹಸಿರು ನಿಶಾನೆ ತೋರಿದೆ. ಸದ್ಯದಲ್ಲೇ ಈ ಮೊತ್ತ ಅಧಿಕೃತವಾಗಿ ಬಿಡುಗಡೆಯಾಗಲಿದೆ. ಅದೇ ರೀತಿ ಈ ಹಿಂದಿನ 2016ನೇ ಸಾಲಿನಿಂದ ಬಾಕಿ ಇರುವ ಅಂದಾಜು 9 ಕೋಟಿ ರೂ ಮೊತ್ತವನ್ನ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ.  ಮುಖ್ಯಮಂತ್ರಿಗಳು ಈ ಮನವಿಗೂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ರಾಮದಾಸ್ ತಿಳಿಸಿದ್ದಾರೆ.

Key words: mysore –dasara- simple-gajapayana-MLA- SA ramadas