ಇಂದು ಅಭಿಮನ್ಯು ಅಂಡ್ ಟೀಂಗೆ ರಿಲ್ಯಾಕ್ಸ್ : ನಾಳೆಯಿಂದ ಭಾರ ಹೊರುವ ತಾಲೀಮು ಸಾಧ್ಯತೆ…

Promotion

ಮೈಸೂರು,ಅಕ್ಟೋಬರ್,3,2020(www.justkannada.in):  ಈ ಬಾರಿ ಸರಳ ಮತ್ತು ಸಂಪ್ರದಾಯಿಕವಾಗಿ ಆಚರಿಸಲಾಗುವ ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಆಗಮಿಸಿ ಅರಮನೆಯಲ್ಲಿ ಬೀಡಿಬಿಟ್ಟಿರುವ ಕ್ಯಾಪ್ಟನ್ ಅಭಿಮನ್ಯು ಟೀಮ್  ಇಂದು ರಿಲ್ಯಾಕ್ಸ್ ಮೂಡ್ ನಲ್ಲಿವೆ .jk-logo-justkannada-logo

ನಾಳೆಯಿಂದ ದಸರಾ ಗಜಪಡೆಯ ಕ್ಯಾಪ್ಟನ್ ಅಭಿಮನ್ಯುಗೆ ಭಾರ ಹೊರುವ ತಾಲೀಮು ನಡೆಯುವ ಸಾಧ್ಯತೆ ಇದೆ. ನಾಳೆ ಪಶುವೈದ್ಯಾಧಿಕಾರಿ ಡಾ. ನಾಗರಾಜ್ ನೇತೃತ್ವದಲ್ಲಿ ಅಭಿಮನ್ಯುವಿಗೆ ಭಾರ ಹೊರುವ ತಾಲೀಮು ನಡೆಯಲಿದ್ದು ಅರಮನೆ ಆವರಣದೊಳಗೆ ಅಭಿಮನ್ಯುವಿಗೆ ಅಧಿಕಾರಿಗಳು ತಾಲೀಮು ನಡೆಸಲಿದ್ದಾರೆ

ಮೊನ್ನೆ ಹುಣಸೂರಿನ ವೀರನಹೊಸಹಳ್ಳಿಯಿಂದ  ಸಾಂಸ್ಕೃತಿಕ ನಗರಿ ಮೈಸೂರಿನ ಅರಣ್ಯ ಭವನಕ್ಕೆ ಆಗಮಿಸಿ ಬೀಡುಬಿಟ್ಟಿದ್ದ ದಸರಾ ಗಜಪಡೆ ನಿನ್ನೆ ಅರಮನೆ ಪ್ರವೇಶಿಸಿದ್ದವು. ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಆನೆಗಳಿಗೆ ಪೂಜೆ ಸಲ್ಲಿಸುವ ಮೂಲಕ ಸ್ವಾಗತ ಕೋರಲಾಗಿತ್ತು.

ಇದೀಗ ನಾಳೆಯಿಂದಲೇ ಅಭಿಮನ್ಯುಗೆ ತಾಲೀಮು ನಡೆಸುವ ಸಾಧ್ಯತೆ ಇದೆ. ಇನ್ನು ಮೈಸೂರಿನಲ್ಲಿ ಕೊರೋನಾ ಸೋಂಕು ಹರಡಿರುವ ಹಿನ್ನೆಲೆ ದಸರಾ ಆನೆಗಳ ಮಾವುತರು ಮತ್ತು ಕಾವಾಡಿಗಳ ಆರೋಗ್ಯ ಸುರಕ್ಷತೆ ಬಗ್ಗೆ ನಿಗಾ ವಹಿಸಬೇಕಾಗಿದೆ. ಹೀಗಾಗಿ ಇಂದು ಮಾವುತರು ಹಾಗೂ ಕಾವಾಡಿಗಳಿಗೆ ಕೋವಿಡ್ ಟೆಸ್ಟ್ ನಡೆಯಲಿದೆ.

Key words: mysore- dasara- Relax- today- Abhimanyu – Team-workout- tomorrow.