ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ: ಪ್ರತ್ಯೇಕ ಮಾರ್ಗಸೂಚಿಗೆ ಸರ್ಕಾರ ನಿರ್ಧಾರ.

Promotion

ಮೈಸೂರು, ಸೆಪ್ಟಂಬರ್, 25,2021(www.justkannada.in): ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ  ಅಕ್ಟೋಬರ್ 7 ರಂದು ಚಾಲನೆ ಸಿಗಲಿದ್ದು ಈ ಮಧ್ಯೆ ದಸರಾ ಮಹೋತ್ಸವಕ್ಕೆ ಪ್ರತ್ಯೇಕ ಮಾರ್ಗಸೂಚಿ ತಯಾರಿಸಲು ಸರ್ಕಾರ ನಿರ್ಧಾರ ಮಾಡಿದೆ.

ಕೊರೊನಾ 3ನೇ ಅಲೆ ಆತಂಕ ಗಮನದಲ್ಲಿಟ್ಟುಕೊಂಡು ಮಾರ್ಗಸೂಚಿ ತಯಾರಲಿಸಲು ಸರ್ಕಾರ ಮುಂದಾಗಿದ್ದು ದಸರಾ ಕಾರ್ಯಕ್ರಮಗಳ ನಿರ್ಬಂಧಗಳಲ್ಲಿ ಕೆಲ ಸಡಿಲಿಕೆ ಮಾಡುವ ಸಾಧ್ಯತೆ ಇದೆ.

ಕಳೆದ ಬಾರಿಗಿಂತ ಈ ಬಾರಿ ಹೆಚ್ಚು ಜನರಿಗೆ ಅವಕಾಶ ನೀಡಲು ಮನವಿ ಮಾಡಲಾಗಿದೆ. ಕಳೆದ ಬಾರಿ ದಸರಾ ಉದ್ಘಾಟನೆಗೆ 150 ಜನ, ನವರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ 50 ಜನ ಹಾಗೂ ಜಂಬೂಸವಾರಿಗೆ 300 ಜನರಿಗೆ ಅವಕಾಶ ನೀಡಲಾಗಿತ್ತು. ಈ‌ ಬಾರಿ ಅದರ ಎರಡು ಪಟ್ಟು ಜನರಿಗೆ ಅವಕಾಶ ನೀಡುವಂತೆ ಮನವಿ ಮಾಡಲಾಗಿದೆ.

ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರೂ ಸಹ ಸರ್ಕಾರಕ್ಕೆ ಮನವಿ ಮಾಡಿದ್ದು, ತಜ್ಞರ ಜೊತೆ ಚರ್ಚಿಸಿ ಪ್ರತ್ಯೇಕ ಮಾರ್ಗಸೂಚಿ ಚಿಂತನೆಗೆ ರಾಜ್ಯ ಸರ್ಕಾರ ತೀರ್ಮಾನಿಸಿದೆ.

Key words: Mysore -Dasara- Mahotsav-Government’-decision – separate – Guide line

.