ಜಂಬೂ ಸವಾರಿ ತಾಲೀಮು ವೇಳೆ ಬೆದರಿದ ಕುದುರೆ: ಕೆಳಗೆ ಬಿದ್ದ ಪೊಲೀಸ್ ಪೇದೆ….

kannada t-shirts

ಮೈಸೂರು,ಅಕ್ಟೋಬರ್,22,2020(www.justkannada.in):  ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಪ್ರಮುಖ ಆಕರ್ಷಣೆ ಜಂಬೂ ಸವಾರಿಗೆ ದಿನಗಣನೆ ಆರಂಭವಾಗಿದ್ದು, ಕೊರೋನಾ ಹಿನ್ನೆಲೆ ಈ ಬಾರಿ ಜಂಬೂ ಸವಾರಿ ಅರಮನೆ ಅವರಣಕ್ಕೆ ಸೀಮಿತವಾಗಿ ನಡೆಯಲಿದೆ.jk-logo-justkannada-logo

ಜಂಬೂ ಸವಾರಿಗೆ ಇನ್ನು ನಾಲ್ಕು ದಿನವಷ್ಟೇ ಬಾಕಿ ಇದ್ದು, ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುವ ಗಜಪಡೆ, ಅಶ್ವರೋಹಿ ಪಡೆಗೆ ಇಂದು ತಾಲೀಮು ನಡೆಸಲಾಗುತ್ತಿದೆ. ಈ ಮಧ್ಯೆ ಇಂದು ಅರಮನೆ ಆವರಣದಲ್ಲಿ ಜಂಬೂ ಸವಾರಿ ತಾಲೀಮು ವೇಳೆ  ಕುದುರೆ ಬೆದರಿ ಅಶ್ವವನ್ನ‌ ಮುನ್ನಡೆಸುತ್ತಿದ್ದ ಪೊಲೀಸ್ ಪೇದೆ ಕೆಳಕ್ಕೆ ಬಿದ್ದ ಘಟನೆ ನಡೆದಿದೆ.mysore dasara-jumbo riding- workout -Frightened -horse –police-fell down.

ಜಂಬೂ ಸವಾರಿಯಲ್ಲಿ ಅಶ್ವರೋಹಿ ಪಡೆ ಭಾಗಿಯಾಗಲಿದ್ದು, ಅಂಬಾರಿಗೆ ರಕ್ಷಣಾ ಪಡೆಯಾಗಿ ಅಶ್ವದಳ ಕಾರ್ಯ ನಿರ್ವಹಿಸುತ್ತದೆ. ಹೀಗಾಗಿ ಇಂದು ಸಂಪ್ರದಾಯದಂತೆ  ಅಶ್ವದಳ ತಾಲೀಮಿನಲ್ಲಿ ಭಾಗಿಯಾಗಿತ್ತು. ಈ ಸಮಯದಲ್ಲಿ ಕುದುರೆ ಬೆದರಿ ಪೊಲೀಸ್ ಪೇದೆ ಕೆಳಕ್ಕೆ ಬಿದ್ಧ ಘಟನೆ ನಡೆಯಿತು.

ಇನ್ನು ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳಲಿರುವ ಗಜಪಡೆ, ಅಶ್ವರೋಹಿ ಪಡೆ, ಪೊಲೀಸ್ ಬ್ಯಾಂಡ್ ವೃಂದ ಅಂತಿಮ‌ ಹಂತದ ಸಿದ್ದತೆಯಲ್ಲಿ ತೊಡಗಿವೆ.

Key words: mysore dasara-jumbo riding- workout -Frightened -horse –police-fell down.

website developers in mysore