ಮೈಸೂರು ದಸರಾ: ಸೆ.27 ರಿಂದ ಚಲನಚಿತ್ರೋತ್ಸವ: ನಟ ಅಪ್ಪು ಸಿನಿಮಾಗಳಿಗಾಗಿ ಒಂದು ದಿನ ಮೀಸಲು.

Promotion

ಮೈಸೂರು,ಸೆಪ್ಟಂಬರ್,22,2022(www.justkannada.in): ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದ ಹಿನ್ನಲೆ, ಸೆಪ್ಟಂಬರ್ 27 ರಿಂದ ಚಲನಚಿತ್ರ ಚಿತ್ರೋತ್ಸವ ನಡೆಯಲಿದ್ದು, ಉಪ ಸಮಿತಿ ಚಲನಚಿತ್ರ ಪ್ರದರ್ಶನದ ಪಟ್ಟಿ ಬಿಡುಗಡೆ ಮಾಡಿದೆ.

ಸೆ.27 ರಿಂದ ಅಕ್ಟೋಬರ್ 3 ರವರೆಗೆ ಚಲನಚಿತ್ರ ಚಿತ್ರೋತ್ಸವ ನಡೆಯಲಿದ್ದು ಕನ್ನಡ, ಹಿಂದಿ, ಇಂಗ್ಲೀಷ್ ಸೇರಿದಂತೆ ಭಾರತೀಯ ವಿವಿಧ ಭಾಷೆಗಳ ಚಿತ್ರಗಳು ನಗರದ ಪ್ರಮುಖ ಚಿತ್ರ ಮಂದಿರಗಳಲ್ಲಿ ಪ್ರದರ್ಶನಗೊಳ್ಳಲಿವೆ.

ಇನ್ನು ಕಳೆದ ವರ್ಷನಿಧನರಾದ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸಿನಿಮಾಗಳಿಗಾಗಿ ಒಂದು ದಿನ ಮೀಸಲಿಡಲಾಗಿದೆ. ಚಲನಚಿತ್ರೋತ್ಸವದ ಮೊದಲ ದಿನ ನಟ ಪುನೀತ್ ರಾಜ್‍ಕುಮಾರ್  ಅವರ ಚಿತ್ರಗಳು ಪ್ರದರ್ಶನಗೊಳ್ಳಲಿವೆ. ಬೆಟ್ಟದ ಹೂವು, ಯುವರತ್ನ, ಆಂಜನೀಪುತ್ರ, ರಾಜಕುಮಾರ ಸಿನಿಮಾಗಳು ಪ್ರದರ್ಶನವಾಗಲಿವೆ.

Key words: Mysore dasara- Film festival – September 27.