ಅಂಬಾರಿ ಆನೆ ಮಾವುತನಿಗೆ ಟ್ಯಾಬ್ ಉಡುಗೊರೆ ನೀಡಿದ ಮೈಸೂರಿನ ಪತ್ರಕರ್ತ..!

Promotion

 

ಮೈಸೂರು, ಅ.17, 2021 : (www.justkannada.in news) ದಸರಾ ಗಜಪಡೆಯ ಕ್ಯಾಪ್ಟನ್ ಅಭಿಮನ್ಯುವಿನ ಮಾವುತ ವಸಂತನಿಗೆ ಮೈಸೂರಿನ ಟಿವಿ9 ಪ್ರತಿನಿಧಿ ರಾಮ್, ಟ್ಯಾಬ್ ಒಂದನ್ನು ಉಡುಗೊರೆ ನೀಡಿ ವಿಶೇಷತೆ ಮೆರೆದಿದ್ದಾರೆ.

ದಸರೆಯ ಆಚೆಗೂ ಅಭಿಮನ್ಯು ಹಾಗೂ ವಸಂತ ನನ್ನ ನೆಚ್ಚಿನ ಹೀರೋಗಳು. ಕಾಡಾನೆಗಳನ್ನು ಪಳಗಿಸುವುದರಲ್ಲಿ ನಿಷ್ಣಾತ ಅಭಿಮನ್ಯು. ಸಮಯಪ್ರಜ್ಞೆಯ ಸಾರಥಿ ವಸಂತ. ಇವರಿಬ್ಬರದ್ದು ಸಾಹಸಮಯ ಬದುಕು. ದಿನದ 24 ಗಂಟೆಯೂ ಕಾಡಿನಲ್ಲಿ ಕಳೆಯುವ ಇವರದ್ದು ಭಲೇ ಜೋಡಿ. ಇವರಿಬ್ಬರ ಸಾಹಸಮಯ ಕಥೆಗಳನ್ನು ಕೇಳಿದರೆ ಮೈ ಜುಮ್ಮೆನ್ನುತ್ತದೆ, ಎದೆ ಝಲ್ಲೆನ್ನುತ್ತದೆ.

ಕಾಡಾನೆ, ಹುಲಿ ಸೇರಿ ಕಾಡು ಪ್ರಾಣಿ ಮಾನವ ಸಂಘರ್ಷಗಳನ್ನು ತಡೆಯುವಲ್ಲಿ ಇವರಿಬ್ಬರ ಪಾತ್ರ ಅಮೂಲ್ಯವಾದದ್ದು. ಇಂತಹ ಸಾಹಸಿ ಅಭಿಮನ್ಯುವಿನ ಸಾರಥಿ ವಸಂತನ ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಈ ಟ್ಯಾಬ್ ನೀಡುತ್ತಿರುವೆ ಎಂದು ರಾಮ್ ತಿಳಿಸಿದ್ದಾರೆ.

key words : Mysore-dasara-elephant-tab-vasantha-ram