ಈ ಬಾರಿ ಮೈಸೂರು ದಸರಾದಲ್ಲೂ ‘ಮೋದಿ’ ಮಯ…

kannada t-shirts

ಮೈಸೂರು,ಸೆ,10.2019(www.justkannada.in): ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಸಿದ್ಧತಾ ಕಾರ್ಯಗಳು ಚುರುಕುಗೊಂಡಿದ್ದು, ಸರಳ ಹಾಗೂ ಸಂಪ್ರದಾಯಕ ದಸರಾ ಆಚರಿಸಲು ಮೈಸೂರು ಜಿಲ್ಲಾಡಳಿತ ಸಜ್ಜಾಗಿದೆ.

ಈ ನಡುವೆ ಈ ಬಾರಿ ಮೈಸೂರು ದಸರಾದಲ್ಲೂ ಪ್ರಧಾನಿ ಮೋದಿಮಯವಾಗಲಿದೆ. ಹೌದು  ಮೈಸೂರು ದಸರಾ ಪ್ರಮುಖ ಆಕರ್ಷಣೆ ಜಂಬೂಸವಾರಿ ದಿನದಂದು ಪ್ರದರ್ಶಸಲಾಗುವ ಸ್ತಬ್ಧಚಿತ್ರದಲ್ಲಿ ಪ್ರಧಾನಿ ಮೋದಿ ಜನಪ್ರೀಯ ಯೋಜನೆ ಬಿತ್ತರವಾಗಲಿವೆ.

ಈ ಬಗ್ಗೆ ಸ್ವತಃ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ,  ಈ ಬಾರಿಯ ದಸರಾ ಸ್ತಬ್ಧಚಿತ್ರದಲ್ಲಿ ಮೋದಿ ಜನಪ್ರೀಯ ಯೋಜನೆ ಬಿತ್ತರವಾಗಲಿವೆ. ಕೇಂದ್ರ ಸರ್ಕಾರದ ಯೋಜನೆಗಳ ಟ್ಯಾಬ್ಲೋ ಮಾಡಲು ನಿರ್ಧಾರ ಮಾಡಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.

ಹಾಗೆಯೇ ದಸರಾದಲ್ಲಿ ಮೈಸೂರು ಸಂಸ್ಥಾನದ ಸಾಧನೆ, ಸಿದ್ದಗಂಗಾ ಶ್ರೀ, ಆದಿಚುಂಚನಗಿರಿ ಹಾಗೂ ಸುತ್ತೂರು ಶ್ರೀಗಳ ಸಾಧನೆ ಬಿತ್ತರವಾಗಲಿವೆ. ವಿಶಿಷ್ಠ ಮಾದರಿಯಲ್ಲಿ ಈ ಬಾರಿಯ ಸ್ತಬ್ದಚಿತ್ರ ನಡೆಯಲಿವೆ ಎಂದು ಸ್ತಬ್ದಚಿತ್ರಗಳ ಬಗ್ಗೆ ಸಚಿವ ವಿ.ಸೋಮಣ್ಣ ಮಾಹಿತಿ ನೀಡಿದರು.

Key words: mysore dasara-Decision -tablo – central government –projects-minister- V.Somanna

website developers in mysore