ಸರಳವಾಗಿ ಮೈಸೂರು ದಸರಾ ಆಚರಣೆ ಕುರಿತು ರಾಜವಂಶಸ್ಥೆ ಪ್ರಮೋದಾದೇವಿ ಒಡಯರ್ ಪ್ರತಿಕ್ರಿಯಿಸಿದ್ದು ಹೀಗೆ…

Promotion

ಮೈಸೂರು,ಆ,23,2019(www.justkannada.in):  ರಾಜ್ಯದಲ್ಲಿ ಅತಿವೃಷ್ಠಿ ಪ್ರವಾಹ ಹಿನ್ನೆಲೆ ರಾಜ್ಯ ಸರ್ಕಾರ ಸರಳ ದಸರಾ ಆಚರಣೆಗೆ ನಿರ್ಧರಿಸಿರುವ ಕುರಿತು ಪ್ರತಿಕ್ರಿಯಸಿದ ಮೈಸೂರು ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್, ಯಾವಾಗಲೂ ಅರಮನೆಯಲ್ಲಿ ಸರಳ ದಸರಾನೇ ನಡೆಯುವುದು. ಆನೆಗಳು ಬಂದ ಮೇಲೆ ಸರಳ ದಸರಾದ ಮಾತೆಲ್ಲಿ ಎಂದು ಹೇಳಿದ್ದಾರೆ.

ಮೈಸೂರಿನಲ್ಲಿ ಇಂದು ಮಾತನಾಡಿದ ಪ್ರಮೋದಾದೇವಿ ಒಡೆಯರ್, ಸರಳ ದಸರಾ ಅನ್ನೋದನ್ನ ನಿಮ್ಮಿಂದಲೆ ಕೇಳುತ್ತಿದ್ದೇನೆ. ಯಾವಾಗಲೂ ಅರಮನೆಯಲ್ಲಿ ಸರಳ ದಸರಾನೇ ನಡೆಯುವುದು. ಆನೆಗಳು ಬಂದ ಮೇಲೆ ಸರಳ ದಸರಾದ ಮಾತೆಲ್ಲಿ ಎಂದು ಪ್ರಶ್ನಿಸಿದರು. ಹಾಗೆಯೇ ಮೈಸೂರು ದಸರ ವಿಚಾರ ಸರ್ಕಾರ ಸಲಹೆ ಕೇಳಿದರೆ ಸಲಹೆ ನೀಡಲು ನಾನು ಸಿದ್ದ ಎಂದರು.

ದೇವರಾಜ‌ ಮಾರುಕಟ್ಟೆ ನವೀಕರಣ ವಿಚಾರ ಕುರಿತು ಪ್ರತಿಕ್ರಿಯಿಸಿದ ಪ್ರಮೋದಾದೇವಿ ಒಡೆಯರ್,  ಈ ಬಗ್ಗೆ ಕಳೆದ ಬಾರಿನೇ ಹೇಳಿದ್ದೇನೆ.  ಹಳೆ ಕಟ್ಟಡವನ್ನೆ ಉಳಿಸಿಕೊಂಡು ಮುಂದುವರೆಯಬೇಕು. ದೇವರಾಜ ಮಾರುಕಟ್ಟೆ ವಿನ್ಯಾಸ ಈಗಿನ ಮಾಲ್ ಗಳು ಅನುಸರಿಸುತ್ತಿವೆ.ತಜ್ಞರ ಅಭಿಪ್ರಾಯದಂತೆ ಕಟ್ಟಡ ಪುನರ್ ಜೀವನಗೊಳಿಸಬೇಕು ಎಂದು ಹೇಳದರು.

Key words: mysore Dasara- celebration – simply-Pramodadevi wadiyar – reaction