ಮೈಸೂರು ದಸರಾ: ಇಂದು ಕ್ಯಾಪ್ಟನ್ ಅಭಿಮನ್ಯು ಅಂಡ್ ಟೀಂ ಸ್ವಾಗತಕ್ಕೆ ಅರಮನೆ ನಗರಿ ರೆಡಿ….

Promotion

ಮೈಸೂರು,ಅಕ್ಟೋಬರ್,1,2020(www.justkannada.in):  ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ ಈ ಬಾರಿ ಸರಳ ಮತ್ತು ಸಾಂಪ್ರದಾಯಕವಾಗಿ ನಡೆಯಲಿದ್ದು ಈ ನಡುವೆ ಜಂಬಸವಾರಿಯಲ್ಲಿ ಪಾಲ್ಗೊಳ್ಳಲು ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಆನೆಗಳ ತಂಡ ಇಂದು ಮೈಸೂರಿಗೆ ಬಂದಿಳಿಯಲಿದೆ.jk-logo-justkannada-logo

ಇಂದು ವೀರನ ಹೊಸಹಳ್ಳಿಯಿಂದ ಮೈಸೂರಿನ ಅರಣ್ಯ ಭವನದ ಆವರಣಕ್ಕೆ ಗಜಪಡೆ ಬಂದಿಳಿಯಲಿದ್ದು, ಹೀಗಾಗಿ ಕ್ಯಾಪ್ಟನ್ ಅಭಿಮನ್ಯು ಟೀಂ ಅನ್ನ ಸ್ವಾಗತಿಸಲು  ಅರಮನೆ ನಗರಿ ರೆಡಿಯಾಗಿದೆ. ಗಜಪಡೆ ಸ್ವಾಗತಕ್ಕೆ ಅರಣ್ಯ ಭವನದಲ್ಲಿ ಸಕಲ ಸಿದ್ಧತೆ ಮಾಡಲಾಗುತ್ತಿದ್ದು, ಆನೆಗಳು ಅರಣ್ಯ ಭವನದಲ್ಲಿ ತಂಗಲು ವ್ಯವಸ್ಥೆ ಮಾಡಲಾಗಿದೆ.

ವೀರನ ಹೊಸಹಳ್ಳಿಯಲ್ಲಿ ಗಜಪಡೆಗೆ ಬೆಳಗ್ಗೆ 10 ರಿಂದ 11 ರ ಒಳಗೆ ಪೂಜೆ ಸಲ್ಲಿಕೆಯಾಗಲಿದ್ದು ನಂತರ ಸಾಂಸ್ಕೃತಿಕ ನಗರಿ ಮೈಸೂರಿನತ್ತ ಪ್ರಯಾಣ ಬೆಳೆಸಲಿವೆ. ಪೂಜೆ ಕಾರ್ಯಕ್ರಮದಲ್ಲಿ ಕೇವಲ ಅಧಿಕಾರಿಗಳಷ್ಟೆ ಭಾಗಿಯಾಗಲಿದ್ದಾರೆ. ಪ್ರತಿಭಾರಿ ಗಜಪಯಣ ಪೂಜಾಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದ ಜನಪ್ರತಿನಿಧಿಗಳು ಈ ಬಾರಿ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿಲ್ಲ.mysore-dasara-captain-abhimanyu-team-today-gajapayana

ಕ್ಯಾಪ್ಟನ್ ಅಭಿಮನ್ಯು ಜೊತೆ ವಿಕ್ರಮ, ಗೋಪಿ, ವಿಜಯಾ, ಕಾವೇರಿ ಆನೆಗಳು ಆಗಮಿಸಲಿದ್ದು,  ಮೈಸೂರಿಗೆ ಗಜಪಡೆ ಆಗಮಿಸುತ್ತಿದ್ದಂತೆ ದಸರಾ ಕಳೆ ಹೆಚ್ಚಾಗಲಿದೆ.

Key words: Mysore Dasara-Captain- Abhimanyu – Team- today-gajapayana