ಕೆ.ಎಸ್ ಈಶ್ವರಪ್ಪ ಬಹಿರಂಗ ಕ್ಷಮೆ ಕೇಳದಿದ್ರೆ ಮೈಸೂರು ದಸರಾ ಬಹಿಷ್ಕಾರ- ಬೋವಿ ನಿಗಮದ ಮಾಜಿ ಅಧ್ಯಕ್ಷ ಸೀತಾರಮ್ ಎಚ್ಚರಿಕೆ…..

Promotion

ಮೈಸೂರು,ಸೆ,18,2019(www.justkannada.in): ಸಿದ್ದರಾಮಯ್ಯ ಅವರನ್ನು ದಡ್ಡ ವಡ್ಡ ಎಂದಿರುವುದು ನಮ್ಮ ಸಮುದಾಯಕ್ಕೆ ಮಾಡಿದ ಅಪಮಾನ. ಹೀಗಾಗಿ ಸಚಿವ ಕೆ.ಎಸ್ ಈಶ್ವರಪ್ಪ ಬಹಿರಂಗ ಕ್ಷಮೆ ಕೇಳದಿದ್ರೆ ದಸರಾ ಬಹಿಷ್ಕಾರ ಮಾಡಲಾಗುತ್ತೆ ಎಂದು  ಬೋವಿ ನಿಗಮದ ಮಾಜಿ ಮಾಜಿ ಅಧ್ಯಕ್ಷ ಸೀತಾರಮ್ ಎಚ್ಚರಿಕೆ ನೀಡಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಸೀತಾರಾಮ್, ಸಿದ್ದರಾಮಯ್ಯ ಅವರನ್ನು ದಡ್ಡ ವಡ್ಡ ಎಂದಿರುವುದು ನಮ್ಮ ಸಮುದಾಯಕ್ಕೆ ಅಪಮಾನ ಮಾಡಿದಂತಾಗಿದೆ. ಹಿಂದೆಯೂ ಅವರು‌ ಈ ರೀತಿ ನಡೆದುಕೊಂಡಿದ್ದಾಗ ಹೋರಾಟ ಮಾಡಿದ್ದೆವು. ಈಗಲೂ ಅದು ಮುಂದುವರೆಯುತ್ತದೆ. ಕೂಡಲೇ‌ ಈಶ್ವರಪ್ಪ ಬಹಿರಂಗ ಕ್ಷಮೆ ಕೇಳಬೇಕು. ಇಲ್ಲವಾದ್ರೆ ದಸರಾ ಬಹಿಷ್ಕಾರದ ಜೊತೆ ಅವರಿಗೆ ಘೇರಾವ್ ಹಾಕಲಾಗುತ್ತೆ ಎಂದು ತಿಳಿಸಿದರು.

Key words: Mysore Dasara –boycott- KS Eshwarappa-Sitharam -warned.