ದಸರಾ ಸಮೀಪಿಸುತ್ತಿರುವ ಹಿನ್ನೆಲೆ: ಯಾವುದೇ ಅಹಿತಕರ ಘಟನೆ ನಡೆಯದಂತೆ ಸೂಕ್ತ ಕ್ರಮಕ್ಕೆ ಸೂಚನೆ- ಗೃಹ ಅರಗ ಜ್ಞಾನೇಂದ್ರ.

ಮೈಸೂರು,ಸೆಪ್ಟಂಬರ್,28,2021(www.justkannada.in): ದಸರಾ ಸಮೀಪಿಸುತ್ತಿರುವ ಹಿನ್ನೆಲೆ: ಯಾವುದೇ ಅಹಿತಕರ ಘಟನೆ ನಡೆಯದಂತೆ ಸೂಕ್ತ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಗೃಹ ಅರಗ ಜ್ಞಾನೇಂದ್ರ ತಿಳಿಸಿದರು.

ಮೈಸೂರಿನ ಜಲದರ್ಶಿನಿ ಅತಿಥಿ ಗೃಹದಲ್ಲಿ  ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಗೃಹ ಸಚಿವ ಅರಗ ಜ್ಣಾನೇಂದ್ರ, ಇಂದು ಮೈಸೂರು‌ ಕಮಿಷನರೇಟ್ ವ್ಯಾಪ್ತಿಯ ಅಧಿಕಾರಿಗಳ ಪರಿಶೀಲಾನಾ ಸಭೆ ನಡೆಸಿದ್ದೇನೆ. ವಿದೇಶಿಯರು ಮೈಸೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದರೇ ಅಂತಹವರ ಬಗ್ಗೆ ಮಾಹಿತಿ ಸಂಗ್ರಹಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಮೈಸೂರು ಪ್ರಮುಖ ಪ್ರವಾಸಿ ತಾಣವಾಗಿದೆ. ಹಾಗಾಗಿ ಹೆಚ್ಚಿನ ನಿಗಾವಹಿಸುವಂತೆ ಸೂಚಿಸಿದ್ದೇನೆ. ದಸರಾ ಮಹೋತ್ಸವ ಸಮೀಪಿಸುತ್ತಿರುವುದರಿಂದ ಯಾವುದೇ ಅಹಿತಕರ ಘಟನೆ ನಡೆಯದಂತೆ ಸೂಕ್ತ ಕ್ರಮ‌ಕೈಗೊಳ್ಳುವಂತೆ ಹೇಳಿದ್ದೇನೆ‌ ಎಂದರು.

ಗ್ಯಾಂಬ್ಲಿಂಗ್ ನ್ನು ಸಂಪೂರ್ಣವಾಗಿ ತಡೆಗಟ್ಟಬೇಕಿದೆ. ಗ್ಯಾಂಬ್ಲಿಂಗ್ ನಿಂದಾಗಿ ಬಹುತೇಕ ಮಂದಿ ಹಣ ಕಳೆದುಕೊಂಡು ತೊಂದರೆಗೆ ಸಿಲುಕುತ್ತಿದ್ದಾರೆ‌. ಹಾಗಾಗಿ ಗ್ಯಾಂಬ್ಲಿಂಗ್ ತಡೆಗಟ್ಟಲು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ್ದೇನೆ.   ಆನ್ ಲೈನ್ ಜೂಜಿಗೂ ಕಡಿವಾಣ ಹಾಕಲಾಗುತ್ತದೆ ಎಂದರು.

ಸರ್ಕಾರ ಆನ್ ಲೈನ್ ಜೂಜು ಬಂದ್ ಮಾಡಿ  ಬಿಲ್ ತಂದಿದ್ದೇವೆ. ಸ್ಕಿಲ್ ಗೇಮ್ ಬಿಟ್ಟು ಹಣ ಕಟ್ಟಿ, ಬಾಜಿ ಕಟ್ಟಿ ಆಡುವುದನ್ನ ನಿಷೇಧ ಮಾಡಿದ್ದೇವೆ. ಆನ್ ಲೈನ್ ಜೂಜಾಟದಲ್ಲಿ ತೊಡಗಿದವರನ್ನು ಪೊಲೀಸರು ಅರೆಸ್ಟ್ ಮಾಡಿದರೂ ಬೇಲೆಬಲ್ ಅಫೆನ್ಸ್ ಆಗಿತ್ತು. ಅದನ್ನು ತಪ್ಪಿಸುವ ನಿಟ್ಟಿನಲ್ಲಿ ಬಿಲ್ ತಂದಿದ್ದೇವೆ. ಆನ್ ಲೈನ್ ಗೇಮ್ ಗಳ ಹಾವಳಿ ಹೆಚ್ಚಾಗಿದೆ. ಕಾಲೇಜ್ ವಿದ್ಯಾರ್ಥಿಗಳು, ಯುವಜನರಲ್ಲಿ ಇದು ಹೆಚ್ಚಾಗಿದೆ. ಇದರಿಂದ‌ ಕುಟುಂಬಗಳಿಗೆ ನಷ್ಟ ಆಗುತ್ತಿತ್ತು. ಈ ನಿಟ್ಟಿನಲ್ಲಿ ಬಿಲ್ ಮಾಡಿದ್ದೇವೆ. ಸಮನ್ಸ್ ಜಾರಿ ವಿಧಾನವನ್ನು ಖಾಸಗೀಕರಣ ಮಾಡಬೇಕು, ಇಲ್ಲ ಪೋಸ್ಟ್ ಆಫೀಸ್ ಗೆ ವಹಿಸುವಂತೆ ಮಾಡುವ ಚಿಂತನೆಯಲ್ಲಿದ್ದೇವೆ ಎಂದು ಸಚಿವ ಅರಗ ಜ್ಞಾನೇಂದ್ರ ತಿಳಿಸಿದರು.

Key words: mysore Dasara- appropriate action -prevent –any- unpleasant incident-  home minister-araga Gnanendra.

ENGLISH SUMMARY…

Mysuru Dasara fast approaching: Home Minister asks police to be careful and prevent any kind of unpleasant activity
Mysuru, September 28, 2021 (www.justkannada.in): Home Minister Araga Jnanendra today informed the Mysuru City police and other officials concerned to be prepared to avert any kind of unpleasant happenings in the city as the historic Mysuru Dasara is fast approaching.
He addressed a press meet held at the Jaladarshini Guest House in Mysuru today. He informed that he had already conducted the Mysuru Commissionerate level officers meeting, and have requested the officials concerned to collect information about all the foreign visitors who are staying in Mysuru city. “Mysuru is a tourist place, and hence I have been instructed to be extra careful. The Dasara Mahotsav is nearing, and I don’t want any unpleasant activities to occur in the city,” he said.
Keywords: Home Minister/ Araga Jnanedra/ Mysuru Dasara/ Mahotsav/ unpleasant activities