ಮೈಸೂರು ದಸರಾ-2021: ಅರಮನೆಯಲ್ಲಿ ಸಾಂಪ್ರದಾಯಿಕ ನವರಾತ್ರಿ  ಉತ್ಸವಕ್ಕೆ ಸಿದ್ದತೆ.

Promotion

ಮೈಸೂರು,ಸೆಪ್ಟಂಬರ್,15,2021(www.justkannada.in): ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ  ಕೆಲವೇ ದಿನಗಳು ಬಾಕಿ ಇದ್ದು ಈ ನಡುವೆ  ಅರಮನೆಯಲ್ಲಿ ಸಾಂಪ್ರದಾಯಿಕ ನವರಾತ್ರಿ (ಅಷ್ಟರಾತ್ರಿ) ಉತ್ಸವಕ್ಕೆ ಸಿದ್ದತೆ ನಡೆಸಲಾಗುತ್ತಿದೆ.

ದಸರಾ ಸಂದರ್ಭದಲ್ಲಿ ಮೈಸೂರು ರಾವಂಶಸ್ಥರು ನವ ದುರ್ಗೆಯರ ಆರಾಧನೆ ಮಾಡುತ್ತಾರೆ. ಹಾಗೆಯೇ ಈ ಬಾರಿಯೂ ಅರಮನೆಯಲ್ಲಿ ಸರಳ ಸಂಪ್ರಾದಾಯಕ ನವ ದುರ್ಗೆಯರ ಪೂಜೆ‌ ನೆರವೇರಲಿದೆ. ಸಾಂಪ್ರದಾಯಿಕ ದಸರಾದ ಪ್ರಮುಖ ಆಕರ್ಷಣೆ ಖಾಸಗಿ ದರ್ಬಾರ್. ರಾಜವಂಸಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಸಿಂಹಾಸನರೋಹಣ ಮಾಡಿ ಖಾಸಗಿ ದರ್ಬಾರ್ ನಡೆಸಲಿದ್ದಾರೆ.

ಕಳೆದ ಬಾರಿಯಂತೆ ಈ ಬಾರಿಯೂ ಅರಮನೆಯಲ್ಲಿ ದಸರಾ ರಾಜವಶಸ್ಥರು, ರಾಜಪುರೋಹಿತರಿಗೆ, ಕುಟುಂಬಸ್ಥರಿಗೆ ಮಾತ್ರ  ಸೀಮಿತವಾಗಲಿದೆ, ಹೊರಗಿನ ರಾಜಮನೆತನದ ಅತಿಥಿಗಳಿಗೂ ಆಹ್ವಾನ ನೀಡವುದಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ .ಇನ್ನು ಈ ಬಾರಿಯೂ ಅರಮನೆ ಪಟ್ಟದ ಅನೆಯಾಗಿ ವಿಕ್ರಮ ಜವಾಬ್ದಾರಿ ನಿರ್ವಹಣೆ ಮಾಡಲಿದ್ದಾನೆ.

ಕೋವಿಡ್ ಹಿನ್ನೆಲೆಯಲ್ಲಿ ಸರ್ಕಾರ ಮಾರ್ಗಸೂಚಿ ಪಾಲನೆ ಮಾಡಬೇಕಾಗಿದ್ದು, ಅರಮನೆ ಕಾರ್ಯಕ್ರಮಗಳಲ್ಲಿ ಭಾಗಿಯಾಗಿರುವ ಎಲ್ಲರಿಗೂ ವ್ಯಾಕ್ಸಿನೇಷನ್‌ ಮಾಡಲಾಗುತ್ತದೆ. ಇನ್ನು ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್ ಸಣ್ಣಪುಟ್ಟ ಬದಲಾವಣೆಗಳ ಬಗ್ಗೆ ಚರ್ಚಿಸಲಿದ್ದು, ಅರಮನೆ ಅಧಿಕಾರಿಗಳು,ಪುರೋಹಿತರ ಸಭೆಯ ನಂತರ ಅರಮನೆ ಕಾರ್ಯಕ್ರಮದ ಅಂತಿಮ ಪಟ್ಟಿ ಬಿಡುಗಡೆಯಾಗಲಿದೆ.

ENGLISH SUMMARY….

Mysuru Dasara -2021: Preparations begin for traditional Navaratri celebration inside the Palace
Mysuru, September 15, 2021 (www.justkannada.in): The historic Mysuru Dasara Mahotsav is at the doorstep. Preparations have begun for traditional celebrations inside the palace for the Navaratri festival Utsav.
The traditional Durga Puja by the royal family will be held at the Ambavilasa Palace this year in a simple manner. One of the major attractions of the entire Utsav the ‘Khasagi Durbar,’ will be held by Yaduveer Krishnadatta Chamaraja Wadiyar.
Like last year this year also only members from the royal family, royal priests, and other close members will be allowed to participate in the programs. It is learnt that there will be no invitation for even far relatives this year due to the fear of COVID-19 Pandemic third wave. Palace elephant Vikrama will be the lead elephant for the programs that will be held inside the palace.
The District Administration has assured that all those who participate in the Dasara programs will be vaccinated and following the guidelines will be made compulsory. It is also learnt that Rajamatha Pramoda Devi Wadiyar will discuss a few changes in the programs, with the officials concerned, priests, after which the final list of programs will be announced.
Keywords: Mysore Dasara/ Palace programs/ preparations begin

Key words: Mysore Dasara -2021- Preparing – traditional- Navratri festival – Palace.