ನಾಡಹಬ್ಬ ದಸರಾಗೆ ಸಾಂಸ್ಕೃತಿಕ ನಗರಿ ಮೈಸೂರು ಸಜ್ಜು: ಅರಮನೆಯಂಗಳದಲ್ಲಿ ಫಿರಂಗಿಗಾಡಿಗಳ ಸ್ವಚ್ಚತೆ…

ಮೈಸೂರು,ಸೆಪ್ಟಂಬರ್,30,2020(www.justkannada.in): ಕೊರೋನಾ ಹಿನ್ನೆಲೆ ಈ ಬಾರಿ ಸರಳ ಮತ್ತು ಸಾಂಪ್ರದಾಯಕ ಮೈಸೂರು ದಸರಾ ಆಚರಣೆಗೆ ನಿರ್ಧರಿಸಲಾಗಿದ್ದು ಈ ಮಧ್ಯೆ ನಾಡಹಬ್ಬಕ್ಕೆ ಸಾಂಸ್ಕೃತಿಕ ನಗರಿ ಮೈಸೂರು ಸಜ್ಜಾಗುತ್ತಿದೆ.mysore-dasara-2020-pirangi-workout-clean- mysore palace

ಸರಳ ಮತ್ತು ಸಾಂಪ್ರದಾಯಕ ದಸರಾಗೆ ಮೈಸೂರಿನಲ್ಲಿ ಸಿದ್ಧತೆ ನಡೆಸಲಾಗುತ್ತಿದ್ದು ಈ ನಡುವೆ ಸರಳ ದಸರಾವಾದರೂ ಸಂಪ್ರದಾಯಕ ಕಾರ್ಯಕ್ರಮಗಳಿಗೆ ಯಾವುದೇ ಕೊರತೆ ಇಲ್ಲ. ಅರಮನೆಯಲ್ಲಿ ನಡೆಯಬೇಕಾದ ಸಾಂಪ್ರದಾಯಕ ಕಾರ್ಯಕ್ರಮಗಳು ನಡೆಯಲಿವೆ.

ಪ್ರತಿ ವರ್ಷ ಜಂಬೂ ಸವಾರಿಯಂದು 21 ಕುಶಾಲತೋಪು ಸಿಡಿಸುವ ಕಾರ್ಯಕ್ರಮವಿರುತ್ತದೆ. ಈ ಬಾರಿಯೂ ಈ ಕಾರ್ಯಕ್ರಮವಿರಲಿದ್ದು ಈ ಹಿನ್ನೆಲೆ ಅರಮನೆಯಂಗಳದಲ್ಲಿ ಫಿರಂಗಿಗಾಡಿಗಳನ್ನ ಸ್ವಚ್ಚತೆ ಮಾಡಲಾಗುತ್ತಿದೆ. 7 ಫಿರಂಗಿ ಗಾಡಿಗಳನ್ನ ಕುಶಾಲತೋಪು ಸಿಬ್ಬಂದಿ ಸ್ವಚ್ಚಗೊಳಿಸಿದ್ದು, ಶುಕ್ರವಾರದಂದು ಫಿರಂಗಿ ಗಾಡಿಗಳಿಗೆ ಪೂಜೆ ಸಲ್ಲಿಕೆ ಮಾಡಲಾಗುತ್ತದೆ.

ಗಜಪಡೆ, ಅಶ್ವಾರೋಹಿ ಪಡೆಗೆ ಫಿರಂಗಿ ಶಬ್ದ ಪರಿಚಯಿಸಲು ಎಂದಿನಂತೆ ಫಿರಂಗಿ ತಾಲೀಮು ನಡೆಯಲಿದೆ. ನಗರ ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ, ನಗರ ಸಶಸ್ತ್ರ ವಿಭಾಗದ ಡಿಸಿಪಿ ಶಿವರಾಜ್, ಅಸಿಸ್ಟೆಂಟ್ ಕಮಿಷನರ್ ಸುದರ್ಶನ್ ನೇತೃತ್ವದಲ್ಲಿ ಜಂಬೂ ಸವಾರಿ ದಿನದಂದು ಫಿರಂಗಿ ಸಿಡಿಸುವ ಕಾರ್ಯ ನಡೆಯಲಿದೆ.

Key words:  mysore-dasara-2020-pirangi-workout-clean- mysore palace