ಈ ಬಾರಿ 30 ರಿಂದ 40 ನಿಮಿಷದಲ್ಲಿ ಜಂಬೂ ಸವಾರಿ ಮೆರವಣಿಗೆ ಮುಕ್ತಾಯ…

kannada t-shirts

ಮೈಸೂರು,ಅಕ್ಟೋಬರ್,26,2020(www.justkannada.in): ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ  ಪ್ರಮುಖ ಆಕರ್ಷಣೆ ಜಂಬೂ ಸವಾರಿ ಮೆರವಣಿಗೆ ಕೊರೋನಾದಿಂದಾಗಿ ಈ ಬಾರಿ ಅರಮನೆ ಆವರಣಕ್ಕೆ ಸೀಮಿತವಾಗಿದ್ದು 30 ರಿಂದ 40 ನಿಮಿಷದಲ್ಲೇ ಮುಕ್ತಾಯವಾಗಲಿದೆ ಎಂದು ಹೇಳಲಾಗುತ್ತಿದೆ.jk-logo-justkannada-logo

ಕೊರೋನಾ ಸೋಂಕು ಹರಡುವಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ಈ ಬಾರಿ ಸರಳ ಮತ್ತು ಸಾಂಪ್ರದಾಯಿಕವಾಗಿ ದಸರಾ ಆಚರಣೆ ಮಾಡಲಾಗುತ್ತಿದ್ದು,  ಜಂಬೂ ಸವಾರಿ ಮೆರವಣಿಗೆ ಅರಮನೆ ಆವರಣದಲ್ಲಿ  ಕೇವಲ 300 ರಿಂದ 400 ಮೀಟರ್ ಗೆ ಸೀಮಿತಗೊಳಿಸಲಾಗಿದೆ. ಹೀಗಾಗಿ ಈ ಬಾರಿ ಜಂಬೂ ಸವಾರಿ 30 ರಿಂದ 40 ನಿಮಿಷದೊಳಗೆ ಮುಕ್ತಾಯವಾಗಲಿದೆ.

ವಿಶೇಷ ಕ್ರೇನ್ ಮೂಲಕ ಆನೆಗೆ ಅರಣ್ಯ ಇಲಾಖೆ ಸಿಬ್ಬಂದಿ ಕ್ಯಾಪ್ಟನ್ ಅಭಿಮನ್ಯುಗೆ ಅಂಬಾರಿ ಕಟ್ಟಲಿದ್ದು, ಚಿನ್ನದ ಅಂಬಾರಿ ಹೊತ್ತ ಕ್ಯಾಪ್ಟನ್ ಅಭಿಮನ್ಯು ಹಾಗೂ ಗಜಪಡೆ ಆನೆಗಳು ಅರಮನೆ ಕಟ್ಟಡದ ಎಡಭಾಗದಲ್ಲಿ ವರಹಾಸ್ವಾಮಿ ದೇವಾಲಯದ ಕಡೆಗೆ ತೆರಳಲಿವೆ. ಬಳಿಕ ಅಂಬಾರಿಯಲ್ಲಿ ವಿರಾಜಮಾನಳಾದ ತಾಯಿ ಚಾಮುಂಡೇಶ್ವರಿಗೆ  ಸಿಎಂ ಬಿಎಸ್ ಯಡಿಯೂರಪ್ಪ ಪುಷ್ಪಾರ್ಚನೆ ಮಾಡುವ ಮೂಲಕ ಜಂಬೂ ಸವಾರಿಗೆ ಚಾಲನೆ ನೀಡಲಿದ್ದಾರೆ.

ಇದಾದ ಬಳಿಕ ಜಂಬೂ ಸವಾರಿ ಮೆರವಣಿಗೆ ಭುವನೇಶ್ವರಿ ದೇವಾಲಯ ಮಾರ್ಗವಾಗಿ ಬಲರಾಮ, ಜಯರಾಮ ದ್ವಾರದ ಕಡೆಗೆ ಸಾಗಿ ನಂತರ ಎಡಕ್ಕೆ ತಿರುಗಿ ಪಾರ್ಕ್ ಮೂಲಕ ಕ್ರೇನ್‌ನತ್ತ ನಿರ್ಗಮಿಸಲಿವೆ. mysore-dasara-2020-jamboo ride- 30 minutes

ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲೂ ಅರಮನೆಯೊಳಗೆ ಮೆರವಣಿಗೆ ನಡೆದಿತ್ತು. ಈ ಬಾರಿ ಕೊರೋನಾದಿಂದಾಗಿ ಅರಮನೆಯೊಳಗೆ ಜಂಬೂ ಸವಾರಿ ನಡೆಯುತ್ತಿದ್ದು  ರಾಜಬೀದಿಯಲ್ಲಿ ಗಜಪಡೆಗಳು ಹೆಜ್ಜೆ ಹಾಕುವುದಿಲ್ಲ. ಇನ್ನು ಜಂಬೂ ಸವಾರಿ ಮೆರವಣಿಗೆ ವೀಕ್ಷಿಸಲು 300 ಮಂದಿಗೆ ಅವಕಾಶ ಮಾಡಿಕೊಡಲಾಗಿದೆ.

Key words: mysore-dasara-2020-jamboo ride- 30 minutes

website developers in mysore