ಮೈಸೂರು ದಸರಾ: ನಾಳೆ ಸಾಂಸ್ಕೃತಿಕ ನಗರಿಯತ್ತ ಹೆಜ್ಜೆ ಹಾಕಲಿವೆ ಅಭಿಮನ್ಯು ಅಂಡ್ ಟೀಮ್…

ಮೈಸೂರು,ಸೆಪ್ಟಂಬರ್,30,2020(www.justkannada.in): ಕೊರೋನಾ ಹಿನ್ನೆಲೆ ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವವನ್ನು ಸರಳ ಮತ್ತು ಸಾಂಪ್ರದಾಯಕವಾಗಿ ಆಚರಿಸಲು ಸರ್ಕಾರ ಮುಂದಾಗಿದ್ದು ಈ ನಡುವೆ  ದಸರಾದಲ್ಲಿ ಪಾಲ್ಗೊಳ್ಳಲು ನಾಳೆ ಅಭಿಮನ್ಯು ಅಂಡ್ ಟೀಮ್ ಸಾಂಸ್ಕೃತಿಕ ನಗರಿಯತ್ತ ಹೆಜ್ಜೆ ಹಾಕಲಿವೆ.jk-logo-justkannada-logo

ನಾಳೆ ವೀರನಹೊಸಹಳ್ಳಿಯಲ್ಲಿ ಬೆಳಗ್ಗೆ 10 ರಿಂದ 11 ರ ಒಳಗೆ ಗಜಪಯಣಕ್ಕೆ ಪೂಜೆ ಸಲ್ಲಿಸಲಿದ್ದು ಬಳಿಕ ಅಭಿಮನ್ಯು ಅಂಡ್ ಟೀಮ್ ಸಾಂಸ್ಕೃತಿಕ ನಗರಿಯತ್ತ ಪಯಣ ಬೆಳೆಸಲಿವೆ.ಸಾಂಪ್ರದಾಯಿಕ ಪೂಜೆ ಬಳಿಕ ದಸರಾ ಆನೆಗಳು ನಾಡಿನತ್ತ ಹೆಜ್ಜೆ ಹಾಕಲಿದ್ದು, ಮೈಸೂರಿನ ಅರಣ್ಯ ಭವನದ ಅಂಗಳಕ್ಕೆ ಬಂದಿಳಿಯಲಿವೆ.mysore-dasara-2020-gajapayana-captain-abhimanyu-team

ಕ್ಯಾಪ್ಟನ್  ಅಭಿಮನ್ಯು  ಜೊತೆ ವಿಕ್ರಮ , ಗೋಪಿ ವಿಜಯಾ ಕಾವೇರಿ ಆನೆಗಳು ಸಹ ಆಗಮಿಸಲಿವೆ. ಇನ್ನು ಗಜಪಯಣದ ಬಳಿಕ ದಸರಾ ಸಂಭ್ರಮ ಕಳೆಗಟ್ಟಲಿದೆ. ಈ ಬಾರಿ ಸರಳ ಮತ್ತು ಸಾಂಪ್ರದಾಯಕ ದಸರಾ ಆಚರಣೆ ಹಿನ್ನೆಲೆ ಜಂಬೂ ಸವಾರಿ ಅರಮನೆ ಅವರಣಕ್ಕೆ ಸೀಮಿತವಾಗಲಿದೆ.

Key words: mysore- dasara-2020-gajapayana-captain- abhimanyu-team