ಫುಲ್ ರಿಲ್ಯಾಕ್ಸ್ ಮೂಡ್ ನಲ್ಲಿ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ದಸರಾ ಗಜಪಡೆ..

Promotion

ಮೈಸೂರು,ಅಕ್ಟೋಬರ್,27,2020(www.justkannada.in):  ವಿಶ್ವ ವಿಖ್ಯಾತ ಮೈಸೂರು ದಸರಾ ಐತಿಹಾಸಿಕ ಜಂಬೂ ಸವಾರಿ ಮೆರವಣಿಗೆಯಲ್ಲಿ ಯಶಸ್ವಿ ಯಾಗಿ ಹೆಜ್ಜೆ ಹಾಕಿದ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಗಜಪಡೆ ಫುಲ್ ರಿಲ್ಯಾಕ್ಸ್ ಮೂಡ್ ನಲ್ಲಿ ದ್ದು ನಾಳೆ ಸ್ವಸ್ಥಾನಗಳಿಗೆ ಮರಳಲಿವೆ.jk-logo-justkannada-logo

ನಿನ್ನೆ ನಡೆದ ಐತಿಹಾಸಿಕ  ಜಂಬೂಸವಾರಿ ಮೆರವಣಿಗೆಯಲ್ಲಿ ಯಶಸ್ವಿಯಾಗಿ ಹೆಜ್ಜೆ ಹಾಕಿದ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಗಜಪಡೆ ನಾಳೆ ಸ್ವಸ್ಥಾನಗಳಿಗೆ ಮರಳಲಿವೆ. ಅಭಿಮನ್ಯು ಅಂಡ್ ಟೀಮ್  ದಸರಾ ಮಹೋತ್ಸವದಲ್ಲಿ ಪಾಲ್ಗೊ ಳ್ಳಲು ಅಕ್ಟೋಬರ್ 2 ರಂದು ಅರಮನೆ ನಗರಿಗೆ ಬಂದು ಬೀಡುಬಿಟ್ಟಿದ್ದವು.

ಹುಣಸೂರು ತಾಲೂಕಿನ ವೀರನಹೊಸಳ್ಳಿಯಿಂದ ಮೈಸೂರಿಗೆ ಆಗಮಿಸಿದ್ದ ಗಜಪಡೆಯ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಕಾವೇರಿ, ವಿಜಯ, ವಿಕ್ರಮ ಮತ್ತು ಗೋಪಿಯನ್ನೊಳಗೊಂಡ ಐದು ಆನೆಗಳು ಯಶಸ್ವಿಯಾಗಿ ಜಂಬೂ ಸವಾರಿ ಮೆರವಣಿಗೆ ನಡೆಸಿದ್ದು, ಗಜಪಡೆಗೆ ನಾಳೆ ಸಂಪ್ರದಾಯದಂತೆ ಪೂಜೆ ಸಲ್ಲಿಸಿ ಬಿಳ್ಗೊಡಲಾಗುವುದು.Mysore Dasara 2020- Captain Abhimanyu – elephant- full- relax- mood.

ಈ ಬಾರಿ ಕೊರೋನಾ ಹಿನ್ನೆಲೆ ಸರಳ ಸಾಂಪ್ರದಾಯಿಕವಾಗಿ ದಸರಾ ಆಚರಣೆ ಮಾಡಲಾಗಿದ್ದು ಐತಿಹಾಸಿಕ ಜಂಬೂ ಸವಾರಿ ಕೇವಲ ಅರಮನೆ ಆವರಣದಲ್ಲಿ 400 ಮೀಟರ್ ಗಳಿಗೆ ಸೀಮಿತವಾಗಿತ್ತು. ಜಂಬೂ ಸವಾರಿ ಮೆರವಣಿಗೆಯಲ್ಲಿ ಇದೇ ಮೊದಲ ಬಾರಿಗೆ ಕ್ಯಾಪ್ಟನ್ ಅಭಿಮನ್ಯು 750 ಕೆಜಿ ಚಿನ್ನದ ಅಂಬಾರಿ ಹೊತ್ತು ಹೆಜ್ಜೆ ಹಾಕಿದನು. ಜಂಬೂ ಸವಾರಿ ಮೆರವಣಿಗೆಯಲ್ಲಿ ಕೇವಲ ಎರಡು ಸ್ತಬ್ದಚಿತ್ರಗಳು ಪ್ರದರ್ಶನಗೊಂಡಿದ್ದವು.

Key words: Mysore Dasara 2020- Captain Abhimanyu – elephant- full- relax- mood.