ಮೈಸೂರು ದಸರಾ ಮಹೋತ್ಸವ: ರಾಜವಂಶಸ್ಥ ಯದುವೀರ್ ರಿಂದ ಸರಸ್ವತಿ ಪೂಜೆ ನೆರವೇರಿಕೆ…

Promotion

ಮೈಸೂರು,ಅ,5,2019(www.justkannada.in): ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಸಂಭ್ರಮದ  ಏಳನೇ ದಿನವಾದ ಇಂದು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ್ ಒಡೆಯರ್ ಅವರು ಸರಸ್ವತಿ ಪೂಜೆ ನೆರವೇರಿಸಿದರು.

ಮೈಸೂರು ಅರಮನೆಯ ಕನ್ನಡಿ ತೊಟ್ಟಿಯಲ್ಲಿ ಸರಸ್ವತಿಪೂಜೆ ಪೂಜೆ ನೆರವೇರಿತು. ವಿದ್ಯಾದೇವತೆ ಸರಸ್ವತಿ ಮಾತೆಯ ಭಾವಚಿತ್ರದ ಮುಂಭಾಗದಲ್ಲಿ ಗ್ರಂಥಭಂಡಾರಗಳು, ವೀಣೆಗಳನ್ನಿರಿಸಿ ವಿಶೇಷ ಪೂಜೆ  ಸಲ್ಲಿಸಲಾಯಿತು.

ಖಾವಿಧಾರಿಯಾಗಿ ರಾಜವಂಶಸ್ಥ ಯದುವೀರ್ ಅವರು  ರಾಜಪುರೋಹಿತರ ಸಮಕ್ಷಮದಲ್ಲಿ ಸಾಂಪ್ರದಾಯಿಕ ವಿಧಿವಿಧಾನಗಳೊಂದಿಗೆ ಸರಸ್ವತಿ ಪೂಜೆ ನೆರವೇರಿಸಿದರು. ಬಳಿಕ ಮೈಸೂರು ರಾಜಮನೆತನದ ಕುಲದೇವತೆ ಚಾಮುಂಡೇಶ್ವರಿ ಅಮ್ಮನವರಿಗೂ ವಿವಿಧ ಬಗೆಯ ಆರತಿಗಳನ್ನು ಬೆಳಗಿ, ವಿಶೇಷ ಪೂಜೆ ಸಲ್ಲಿಸಲಾಯಿತು.

Key words: Mysore dasara-2019- Yaduveer krishnadatta chamara wodeyar- Saraswathi-spacial worship