ಮೈಸೂರು ದಸರಾ ಮಹೋತ್ಸವ-2019: ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣಗೆ ಸ್ವಾಗತ ಕೋರಿದ ದಸರಾ ಸ್ವಾಗತ ಮತ್ತು ಆಮಂತ್ರಣ ಉಪ ಸಮಿತಿ ….

Promotion

ಮೈಸೂರು ಸೆ.28,2019(www.justkannada.in): ಮೈಸೂರು ದಸರಾ ಮಹೋತ್ಸವಕ್ಕೆ  ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರನ್ನ ಆತ್ಮೀಯವಾಗಿ ಸ್ವಾಗತಿಸಲಾಯಿತು.

ದಸರಾ ಸ್ವಾಗತ ಮತ್ತು ಆಮಂತ್ರಣ ಉಪ ಸಮಿತಿ ವತಿಯಿಂದ ನಗರದ ಜಲದರ್ಶಿನಿ ಅತಿಥಿ ಗೃಹದಲ್ಲಿ ವಸತಿ ಸಚಿವರು ‌ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ‌ಸಚಿವರಾದ ವಿ.ಸೋಮಣ್ಣ ಅವರನ್ನು‌ ನಾಡಹಬ್ಬ ಮೈಸೂರು ‌ದಸರಾ ಮಹೋತ್ಸವಕ್ಕೆ ಆತ್ಮೀಯವಾಗಿ ಸ್ವಾಗತಿಸಲಾಯಿತು.

ಈ ಸಂದರ್ಭದಲ್ಲಿ  ಸ್ವಾಗತ ಮತ್ತು ಆಮಂತ್ರಣ ಉಪ ಸಮಿತಿ ಅಧ್ಯಕ್ಷರಾದ ಪುಷ್ಪಲತಾ ಜಗನ್ನಾಥ್ , ಉಪಾಧ್ಯಕ್ಷರಾದ ಶಿವಕುಮಾರ್, ರಮೇಶ್, ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್,ಉಪವಿಶೇಷಾಧಿಕಾರಿ ಬಿ.ಆರ್ ಪೂರ್ಣಿಮಾ, ಕಾರ್ಯಾಧ್ಯಕ್ಷ ಶಶಿಕುಮಾರ್, ಕಾರ್ಯದರ್ಶಿ ಕುಬೇರಪ್ಪ ಹಾಗೂ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

Key words: Mysore Dasara -2019-  Welcome – in charge Minister –V.Somanna