ದಸರಾ ವೇಳೆ ಮೈಸೂರು ಮೃಗಾಲಯಕ್ಕೆ 1.65 ಲಕ್ಷ ಮಂದಿ ಭೇಟಿ: ಕಳೆದ ಬಾರಿಗಿಂತ ಈ ಬಾರಿ ಹೆಚ್ಚಿನ ಹಣ ಸಂಗ್ರಹ…

Promotion

ಮೈಸೂರು,ಅ,15,2019(www.justkannada.in): ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದ ವೇಳೆ ರಾಜ್ಯ, ದೇಶ ವಿದೇಶಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಪ್ರವಾಸಿಗರು ಸಾಂಸ್ಕೃತಿಕ ನಗರಿಗೆ  ಭೇಟಿ ನೀಡಿ ಮೈಸೂರಿನ ಅಂದವನ್ನ ಕಣ್ತುಂಬಿಕೊಳ್ಳುತ್ತಾರೆ. ದಸರಾ ನೋಡಲು ಬರುವ ಪ್ರವಾಸಿಗರು ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡದೆ ಹೋಗಲ್ಲ. ಹೀಗಾಗಿ ದಸರಾ ವೇಳೆ ಪ್ರವಾಸೋದ್ಯಮಕ್ಕೆ ಹೆಚ್ಚಿನ ಲಾಭ ಆಗುತ್ತದೆ.

ಅಂತೆಯೇ ಮೈಸೂರು ದಸರಾ ಮಹೋತ್ಸವದ ವೇಳೆ 10 ದಿನಗಳಲ್ಲಿ ಚಾಮರಾಜೇಂದ್ರ ಮೃಗಾಲಯಕ್ಕೆ ಒಟ್ಟು 1.65 ಲಕ್ಷ ಮಂದಿ ಭೇಟಿ ನೀಡಿದ್ದು ಸುಮಾರು , 1.59 ಕೋಟಿ ರೂಪಾಯಿ ಸಂಗ್ರಹವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ 12 ಸಾವಿರದಷ್ಟು ಹೆಚ್ಚಿನ ಪ್ರವಾಸಿಗರು ಮೃಗಾಲಯಕ್ಕೆ ಭೇಟಿ ನೀಡಿದ್ದು, ಕಳೆದ ಬಾರಿಗಿಂತ ಈ ಬಾರಿ ಸುಮಾರು 54 ಲಕ್ಷ ಅಧಿಕ ಮೊತ್ತದ ಹಣ ಸಂಗ್ರಹವಾಗಿದೆ.

ಆಯುಧ ಪೂಜೆಯ ದಿನ ಮೃಗಾಲಯಕ್ಕೆ 30,273 ಮಂದಿ ಭೇಟಿ ನೀಡಿದ್ದು, ಟಿಕೆಟ್ ಶುಲ್ಕದಲ್ಲಿ 29.77 ಲಕ್ಷ ಮೊತ್ತ ಸಂಗ್ರಹವಾಗಿದೆ. ವಿಜಯದಶಮಿ ದಿನ 28,386 ಮಂದಿ ಭೇಟಿ. ನೀಡಿದ್ದು ಅಂದು ಟಿಕೆಟ್ ಶುಲ್ಕದ ರೂಪದಲ್ಲಿ 28.28 ಲಕ್ಷ ಮೊತ್ತದ ಹಣ ಸಂಗ್ರಹವಾಗಿದೆ.

ಕಳೆದೆರಡು ವರ್ಷಗಳಿಗೆ ಹೋಲಿಸಿದರೆ ಈ ಬಾರಿಯ ವಿಜಯದಶಮಿ ದಿನ ಮೃಗಾಲಯಕ್ಕೆ ಭೇಟಿ ನೀಡಿದವರ ಸಂಖ್ಯೆಯಲ್ಲಿ ಇಳಿಕೆ.ಯಾಗಿದೆ. 2017 ರಲ್ಲಿ ವಿಜಯದಶಮಿ ದಿನ 31,722 ಮಂದಿ, 2018 ರಲ್ಲಿ 32,301 ಮಂದಿ  ಭೇಟಿ ನೀಡಿದ್ದರು. ಆದರೆ ಈ ಬಾರಿಯ ಆಯುಧ ಪೂಜೆಯ ದಿನ ಕಳೆದ ವರ್ಷಕ್ಕಿಂತ 8 ಸಾವಿರದಷ್ಟು ಹೆಚ್ಚಿನ ಮಂದಿ ಮೃಗಾಲಯಕ್ಕೆ  ವಿಸಿಟ್ ಮಾಡಿದ್ದಾರೆ.. ಚಾಮರಾಜೇಂದ್ರ ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕರು ಈ ಬಗ್ಗೆ ಪ್ರಕಟಣೆ ಮೂಲಕ ಮಾಹಿತಿ ನೀಡಿದ್ದಾರೆ.

ಕಳೆದ ಮೂರು ವರ್ಷಗಳಲ್ಲಿನ ಪ್ರವಾಸಿಗರ ಭೇಟಿ ಮತ್ತು ಹಣ ಸಂಗ್ರಹದ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ…

2016ರಲ್ಲಿ 1.24 ಲಕ್ಷ ಮಂದಿ ಭೇಟಿ, 70.53 ಲಕ್ಷ ರೂಪಾಯಿ ಸಂಗ್ರಹ..

2017ರಲ್ಲಿ 1.23 ಲಕ್ಷ ಮಂದಿ ಭೇಟಿ, 69.17 ಲಕ್ಷ ರೂಪಾಯಿ ಸಂಗ್ರಹ..

2018ರಲ್ಲಿ 1.53 ಲಕ್ಷ ಮಂದಿ ಭೇಟಿ, 1.05 ಕೋಟಿ ರೂಪಾಯಿ ಸಂಗ್ರಹ..

2019ರಲ್ಲಿ 1.65 ಲಕ್ಷ ಮಂದಿ ಭೇಟಿ, 1.59 ಕೋಟಿ ರೂಪಾಯಿ ಸಂಗ್ರಹ..

Key words: mysore dasara-2019- 1.65 lakh -visitors – Mysore Zoo