ನಟ ದರ್ಶನ್ ಅವರ ಕ್ಷಮೆ ಕೇಳದಿದ್ದರೆ ನಿರ್ದೇಶಕ ಇಂದ್ರಜಿತ್ ಲಂಕೇಶ್ ಗೆ ಮಸಿ ಬಳಿಯುವೆ..!

Promotion

ಮೈಸೂರು, ಡಿ.17, 2021 : (www.justkannada.in news) : ಕಳೆದ ಕೆಲ ದಿನಗಳ ಹಿಂದೆ, ಸ್ಯಾಂಡಲ್ ವುಡ್ ನ ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ತೂಗುದೀಪ ಅವರ ವಿರುದ್ಧ ಅವಹೇಳನಕಾರಿ ಅಪಪ್ರಚಾರ ನಡೆಸಿದ ಸಿನಿಮಾ ನಿರ್ದೇಶಕ , ಪತ್ರಕರ್ತ ಇಂದ್ರಜಿತ್ ಲಂಕೇಶ್ ಈ ಕೂಡಲೇ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಲಾಗಿದೆ.
ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಮೈಸೂರು ನಗರ ಪಾಲಿಕೆ ಸದಸ್ಯ ಲೊಕೇಶ್ ವಿ.ಪಿಯಾ,
ಮೈಸೂರು ಜಿಲ್ಲಾ ಸಾಹಿತ್ಯ ಪರಿಷತ್ ಹಾಗೂ ಕನ್ನಡ ಚಳವಳಿ ಕೇಂದ್ರ ಸಮಿತಿ ವತಿಯಿಂದ ಡಿ.19 ರಂದು ಆಯೋಜಿಸಿರುವ ಕನ್ನಡ ರಾಜ್ಯೋತ್ಸವ ಸಮಾರಂಭ ಉದ್ಘಾಟನೆಗೆ ಇಂದ್ರಜಿತ್ ಲಂಕೇಶ್ ಅವರನ್ನು ಆಹ್ವಾನಿಸಿರುವುದು ಸರಿಯಷ್ಟೆ. ಆದರೆ, ನಟ ದರ್ಶನ್ ರ ಕ್ಷಮೆ ಕೇಳದ ಹೊರತು ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಇಂದ್ರಜಿತ್ ಲಂಕೇಶ್ ಅವರಿಗೆ ಅವಕಾಶ ನೀಡುವುದಿಲ್ಲ ಎಂದಿದ್ದಾರೆ.
ಒಬ್ಬ ಪ್ರತಿಭಾನ್ವಿತ ನಟ, ಸ್ವ ಪರಿಶ್ರಮದಿಂದ ಮೇಲೆ ಬೆಳೆದ ಕಲಾವಿದನ ಬಗ್ಗೆ ಅಪಪ್ರಚಾರ ನಡೆಸಿ ತೇಜೋವಧೆಗೆ ಯತ್ನಿಸಿದ್ದು ಅಕ್ಷಮ್ಯ. ಆದ್ದರಿಂದ ಈ ಕೂಡಲೇ ಇಂದ್ರಜಿತ್ ಲಂಕೇಶ್ ಬಹಿರಂಗ ಕ್ಷಮೆ ಕೇಳಬೇಕು. ತಪ್ಪಿದಲ್ಲಿ ಮೈಸೂರಿನ ಸಮಾರಂಭಕ್ಕೆ ಆಗಮಿಸಿದ ವೇಳೆ ಕಪ್ಪುಮಸಿ ಬಳಿದು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಲೊಕೇಶ್ ಪಿಯಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

key words : mysore-darshan-challenig-star-indrajeeth-lankesh