ಗ್ರಾಹಕರ ಸೋಗಿನಲ್ಲಿ ಬಂದು ಬಾಡಿಗೆ ಕಾರು ಕದ್ದೋಯ್ದ ಖದೀಮರು.

Promotion

ಮೈಸೂರು,ಜೂನ್,22,2023(www.justkannada.in): ಖದೀಮರು ಗ್ರಾಹಕರ ಸೋಗಿನಲ್ಲಿ ಬಂದು ಚಾಲಕನಿಗೆ ಚಾಕು ತೋರಿಸಿ ಬಾಡಿಗೆ ಕಾರು ಕದ್ದೋಯ್ದಿರುವ ಘಟನೆ ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಅಹಲ್ಯ ಗ್ರಾಮದ ಬಳಿ ನಡೆದಿದೆ.

ಅಪ್ಸರ್ ಪಾಷಾ ಎಂಬುವವರಿಗೆ ಸೇರಿದ ಟಾಟಾ ಇಂಡಿಕಾ ಕಾರನ್ನ ಕಳ್ಳತನ ಮಾಡಿದ್ದಾರೆ. ನಂಜನಗೂಡಿನಿಂದ ಹುಲ್ಲಹಳ್ಳಿಗೆ ಹೋಗಬೇಕೆಂದು ಬಾಡಿಗೆ ಕಾರಿನಲ್ಲಿ ಇಬ್ಬರು ಯುವಕರು ಹೊರಟಿದ್ದರು.

ಹುಲ್ಲಹಳ್ಳಿಗೆ ಹೋಗುವ ಮಾರ್ಗ ಮಧ್ಯೆ ಚಾಲಕನಿಗೆ ಚಾಕು ತೋರಿಸಿ ಆತನ ಬಳಿ ಇದ್ದ ಮೊಬೈಲ್, ವಾಚ್, ನಗದು ಜೊತೆಗೆ ಕಾರನ್ನ ಕಿತ್ತುಕೊಂಡು ಇಬ್ಬರು ಖದೀಮರು ಪರಾರಿಯಾಗಿದ್ದಾರೆ. ಈ ಕುರಿತು ಹುಲ್ಲಹಳ್ಳಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಖದೀಮರ ಸೆರೆಗಾಗಿ ಪೋಲಿಸರು ಬಲೆ ಬೀಸಿದ್ದಾರೆ.

Key words: mysore- customer -stole -rental -car.