ದೇಶದ ಸೈನಿಕರ ಜೀವ ಕಾಪಾಡಲು ಯೋಗ್ಯತೆ ಇಲ್ಲ: ಬಿಜೆಪಿಯವರಿಗೆ ನಾಚಿಕೆ ಆಗಬೇಕು- ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಕಿಡಿ…

Promotion

ಮೈಸೂರು,ಜೂ,17,2020(www.justkannada.in):  7 ವಾರಗಳಿಂದ ನಿರಂತರವಾಗಿ ಗಾಲ್ವಾನ್ ವ್ಯಾಲಿಯಲ್ಲಿ ನಿರಂತರವಾಗಿ ಚೀನಾ ಕಿರುಕುಳ ನೀಡುತ್ತಿದ್ದರೂ ಪ್ರಧಾನಿ ಮೌನವಾಗಿದ್ದಾರೆ. ದೇಶದ ಸೈನಿಕರ ಜೀವ ಕಾಪಾಡಲು ಯೋಗ್ಯತೆ ಇಲ್ಲ: ಬಿಜೆಪಿಯವರಿಗೆ ನಾಚಿಕೆ ಆಗಬೇಕು ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಕಿಡಿ ಕಾರಿದರು.

ಗಡಿ ಸಂಘರ್ಷದಲ್ಲಿ ಯೋಧರು ಹುತಾತ್ಮ ಹಿನ್ನೆಲೆ ಮೈಸೂರು ಜಿಲ್ಲಾ ಕಾಂಗ್ರೆಸ್ ವತಿಯಿಂದ ಸುದ್ದಿಗೋಷ್ಠಿ ನಡೆಸಲಾಯಿತು. ಇದೇ ಸಂದರ್ಭದಲ್ಲಿ ಹುತಾತ್ಮ ಯೋಧರಿಗೆ ಜಿಲ್ಲಾ ಕಾಂಗ್ರೆಸ್ ವತಿಯಿಂದ ಮೌನಾಚರಣೆ ಮೂಲಕ ಗೌರವ ಸಲ್ಲಿಕೆ ಮಾಡಲಾಯಿತು.

ನಂತರ ಮಾತನಾಡಿದ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್, 7 ವಾರಗಳಿಂದ ನಿರಂತರವಾಗಿ ಗಾಲ್ವಾನ್ ವ್ಯಾಲಿಯಲ್ಲಿ ನಿರಂತರವಾಗಿ ಚೀನಾ ಕಿರುಕುಳ ನೀಡುತ್ತಿದ್ದರೂ ಪ್ರಧಾನಿ ಮೌನವಾಗಿದ್ದಾರೆ. ಕಳೆದ 60 ವರ್ಷಗಳಿಂದ ಕಾಂಗ್ರೆಸ್ ಪಕ್ಷ ಏನು ಮಾಡುತ್ತಿದೆ ಎಂದು ಕೇಳುತ್ತಿರುವವರಿಗೆ ಉತ್ತರ ಕೊಡುತ್ತಿದ್ದೇವೆ. ದೇಶದ ಸೈನಿಕರ ಜೀವ ಕಾಪಾಡಲು ಯೋಗ್ಯತೆ ಇಲ್ಲ. ಬಿಜೆಪಿಯವರಿಗೆ ನಾಚಿಕೆ ಆಗಬೇಕು. ಮೊದಲು  ಭಾರತ –ಚೀನಾ ಸಂಘರ್ಷದಲ್ಲಿ ಕೇವಲ ಮೂರು ಮಂದಿ ಹುತಾತ್ಮರಾಗಿದ್ದಾರೆ ಎಂದು ಸುಳ್ಳು ಹೇಳಿದ್ದರು. ಘಟನೆ ಕುರಿತು ಇಡೀ ದೇಶದ ನಾಗರೀಕರಿಗೆ ಸತ್ಯವನ್ನು ತಿಳಿಸಿ ಎಂದು ಆಗ್ರಹಿಸಿದರು.mysore-country-soldiers-kpcc-spokesperson-m-laxman-bjp

ರಾಹುಲ್ ಗಾಂಧಿಯವರು ಪ್ರಧಾನಿ ಮೋದಿಗೆ ಘಟನೆ ಕುರಿತು ಏಕೆ ಸುಮ್ಮನಿದ್ದೀರಿ ಎಂದು ಟ್ವೀಟ್ ಮೂಲಕ ಪ್ರಶ್ನಿಸಿದ್ದರು. ಇದಕ್ಕೆ ಪ್ರತಾಪ್ ಸಿಂಹ ರಾಹುಲ್ ಗಾಂಧಿಗೆ ದೇಶದ ಸೇನೆಯ ಮೇಲಿನ ಗೌರವಕ್ಕಿಂತ ಚೀನಾ ಮೇಲಿನ ಪ್ರೀತಿಯೇ ಜಾಸ್ತಿ ಇದೆ ಕಿಡಿಕಾರಿದ್ದರು. ಈ ಕುರಿತು ಸಂಸದ ಪ್ರತಾಪ್ ಸಿಂಹ ವಿರುದ್ದ ಕಿಡಿಕಾರಿದ ಎಂ.ಲಕ್ಷ್ಮಣ್, ಮೊದಲು ರಾಹುಲ್ ಗಾಂಧಿ ಪ್ರಶ್ನೆಗೆ ಉತ್ತರ ಕೊಡಯ್ಯಾ ಎಂದು ಏರು ದನಿಯಲ್ಲಿ ಪ್ರಶ್ನಿಸಿದರು.

ಇನ್ನು ಇಂಧನ ಬೆಲೆ ಏರಿಕೆ ವಿರುದ್ಧ ಕಿಡಿಕಾರಿದ ಕಾಂಗ್ರೆಸ್ ಮುಖಂಡರ, ಕಳೆದ 10 ದಿನಗಳಿಂದ ಇಂಧನ ಬೆಲೆ ಏರಿಕೆಯಾಗುತ್ತಿದೆ. ಯುಪಿಎ ಅಧಿಕಾರದಲ್ಲಿದ್ದಾಗ ಇಂಧನ ಬೆಲೆ ನಿಯಂತ್ರಣದಲ್ಲಿತ್ತು. ಎಸ್ಎಸ್ಎಲ್ಸಿ ಪರೀಕ್ಷೆ ಫೇಲ್ ಆದವನಿಗೆ ಡಿಸ್ಟ್ರಿಕ್ಟ್ ಕಮಿಷನರ್ ಪೋಸ್ಟ್ ಕೊಟ್ಟ ಹಾಗೆ ಎಂದು ಪ್ರಧಾನಿ ಮೋದಿ ಹುದ್ದೆ ಕುರಿತು ವ್ಯಂಗ್ಯವಾಡಿದರು.

ಹುತಾತ್ಮ ಯೋಧರಿಗೆ ಸಂತಾಪ ಸೂಚಿಸದ ನಿಮಗೆ ನಾಚಿಕೆ, ಮಾನ ಮರ್ಯಾದೆ ಇದೆಯಾ ಎಂದು ಬಿಜೆಪಿ ನಾಯಕರಿಗೆ  ಕಾಂಗ್ರೆಸ್ ಮುಖಂಡರು ಖಾರವಾಗಿ ಪ್ರಶ್ನಿಸಿದರು.

Key words: mysore- country-soldiers-  KPCC -spokesperson- M Laxman -BJP