ಅನುಮತಿ ಪಡೆಯದೆ ಒಳಚರಂಡಿ, ನೀರು ಮತ್ತು ವಿದ್ಯುತ್ ಸಂಪರ್ಕಕ್ಕೆ ಯತ್ನ : 3.25 ಲಕ್ಷ ರೂ. ದಂಡ ವಿಧಿಸಿದ ನಗರಪಾಲಿಕೆ.

kannada t-shirts

ಮೈಸೂರು, ಸೆ.09, 2021 : (www.justkannada.in news) : ನಗರ ಪಾಲಿಕೆ ಅನುಮತಿ ಪಡೆಯದೆ ಒಳಚರಂಡಿ, ನೀರು ಮತ್ತು ವಿದ್ಯುತ್ ಸಂಪರ್ಕ ಕಲ್ಪಿಸಲು ಯತ್ನಿಸಿದ ಸಂಸ್ಥೆಗೆ ದಂಡ ವಿಧಿಸಲಾಗಿದೆ.

ನಗರದ ಮೇಟಗಳ್ಳಿ ಕೆ.ಆರ್.ಎಸ್.ರಸ್ತೆಯಲ್ಲಿನ ಎಲೈಟ್ ಪ್ರಾಡೆಕ್ಟ್ ಸಂಸ್ಥೆಗೆ ಮೈಸೂರು ನಗರ ಪಾಲಿಕೆ ವಲಯ ಕಚೇರಿ 5 ರ ವಲಯ ಆಯುಕ್ತರು 3,25,632 ರೂ. ದಂಡ ವಿಧಿಸಿದ್ದಾರೆ.

ಒಳಚರಂಡಿ ಮತ್ತು ನೀರಿನ ಸಂಪರ್ಕ ಕಲ್ಪಿಸಲು ಮಣ್ಣು ಅಗೆತ ಮಾಡಲು ಅನುಮತಿ ನೀಡಬೇಕೆಂದು ಕೋರಿದ್ದು ಸರಿಯಷ್ಟೇ, ಆದರೆ ತಾವು ಈ ಕಛೇರಿಯ ಅನುಮತಿ ಪಡೆಯದೆ ಒಳಚರಂಡಿ ಸಂಪರ್ಕ ಕಲ್ಪಿಸಲು ಒಟ್ಟು ಉದ್ದ 48 ಮೀ. ಮತ್ತು ನೀರು ಮತ್ತು ವಿದ್ಯುತ್ ಸಂಪರ್ಕ ಕಲ್ಪಿಸಲು ಒಟ್ಟು ಉದ್ದ 58 ಮೀಟರ್‌ಗಳು ಪ್ರತ್ಯೇಕವಾಗಿ ಎರಡು ಮಣ್ಣು ಅಗೆತವನ್ನು ಮಾಡಿರುತ್ತೀರಿ, ಈ ಸಂಬಂಧ ಸಹಾಯಕ ಅಭಿಯಂತರರು ಅಳತೆ ಮಾಡಿ ಈ ಕೆಳಗಿನಂತೆ ಮೂರು ಪಟ್ಟು ದಂಡವನನ್ನು ವಿಧಿಸಿ ಒಟ್ಟು ರೂ. 3,25,632/- ಪಾವತಿಸಲು ತಿಳಿಸಿರುತ್ತಾರೆ, ಆದ್ದರಿಂದ ಈ ಪತ್ರ ತಲುಪಿದ ಮೂರು ದಿನದಲ್ಲಿ ಹಣ ಪಾವತಿಸಿ, ಚಲನ್ ಹಾಜರು ಪಡಿಸಲು ಸೂಚಿಸಿದೆ. ತಪ್ಪದಲ್ಲಿ ಕೆ.ಎಂ.ಸಿ ಕಾಯ್ದೆಯ ಪ್ರಕಾರ ಕ್ರಮಕೈಗೊಳ್ಳಲಾಗುವುದು ಎಂದು ವಲಯ ಆಯುಕ್ತರು ತಿಳಿಸಿದ್ದಾರೆ.

key words : mysore-corporation-mcc-fine

website developers in mysore