ಕಲಾವಿದನ ಅಣುಕು ಚಿತ್ರಕ್ಕೆ ಎಚ್ಚೆತ್ತ ಮೈಸೂರು ಪಾಲಿಕೆ: ಚಿತ್ರ ಬಿಡಿಸಿದ ಕೆಲವೇ ಗಂಟೆಗಳಲ್ಲಿ ಮ್ಯಾನ್ ಹೋಲ್ ದುರಸ್ಥಿ ಕಾರ್ಯ….

Promotion

ಮೈಸೂರು,ಮೇ,6,2019(www.justkannada.in): ಕಲಾವಿದ ಅಣುಕು ಚಿತ್ರದಿಂದ ತಕ್ಷಣವೇ ಎಚ್ಚೆತ್ತ  ಮೈಸೂರು ಮಹಾನಗರ ಪಾಲಿಕೆ ಶಿಥಲಗೊಂಡಿದ್ದ ಮ್ಯಾನ್ ಹೋಲ್  ದುರಸ್ಥಿ ಮಾಡಿಸಿದ್ದಾರೆ.

ನಗರದ ನಜರ್ ಬಾದ್ ಬಳಿಯ ಚಾಮುಂಡಿ ವಿಹಾರ ಕ್ರೀಡಾಂಗಣದ ಮುಂಭಾಗ  ಮ್ಯಾನ್ ಹೊಲ್ ಶೀಥಲಗೊಂಡಿದ್ದು ತಿಂಗಳಾದರು ಪಾಲಿಕೆ ಅಧಿಕಾರಿಗಳು ದುರಸ್ಥಿಪಡಿಸಿರಲಿಲ್ಲ. ಶಿಥಲಗೊಂಡ ಮ್ಯಾನ್ ಹೋಲ್ ಸುತ್ತ ಚಿತ್ರ ರಚಿಸಿ ಆರ್ಟಿಸ್ಟ್ ಶಿವರಂಜನ್ ಗಮನ ಸೆಳೆದಿದ್ದರು. ಇಂದು ಬೆಳಗ್ಗೆ 7ಗಂಟೆಲ್ಲಿ ಮ್ಯಾನ್ ಹೋಲ್ ಸುತ್ತ ಅಣುಕು‌ ಚಿತ್ರ ರಚಿಸಿದ್ದರು.

ಚಿತ್ರ ಬಿಡಿಸಿದ ಕೆಲವೇ ಗಂಟೆಗಳಲ್ಲಿ ಎಚ್ಚೆತ್ತುಕೊಂಡ ಮಹಾನಗರ ಪಾಲಿಕೆ ಮ್ಯಾನ್ ಹೋಲ್ ದುರಸ್ಥಿ ಕಾರ್ಯ ಮಾಡಿಸಿದೆ.

Keyw words: mysore-corporation-manhole-repair- Stirring up – artist-drawing.