ಮೈಸೂರು ಜಿಲ್ಲೆಯಲ್ಲಿ ಮುಂದುವರೆದ ಕೊರೋನಾ ಆರ್ಭಟ : ಇಂದು ಸಹ 250ಕ್ಕೂ ಹೆಚ್ಚು ಪಾಸಿಟಿವ್ ಸಾಧ್ಯತೆ…

Promotion

ಮೈಸೂರು,ಆ,6,2020(www.justkannada.in): ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದಿನೇ ದಿನೇ ಕೊರೋನಾ ಪ್ರಕರಣ ಹೆಚ್ಚಾಗುತ್ತಿದ್ದು ಈ ನಡುವೆ ಇಂದು ಸಹ ಜಿಲ್ಲೆಯಲ್ಲಿ 250ಕ್ಕೂ ಹೆಚ್ಚು ಮಂದಿಗೆ ಕೊರೋನಾ ಸೋಂಕು ಕಾಣಿಸಿಕೊಳ್ಳುವ ಸಾಧ್ಯತೆ ಇದೆ.jk-logo-justkannada-logo

ಮೈಸೂರು ನಗರ ಗ್ರಾಮೀಣ ಭಾಗದಲ್ಲೂ ಕೊರೋನಾ ಹೆಚ್ಚಾಗಿ ಹರಡುತ್ತಿದ್ದು, ಜಿಲ್ಲೆಯಲ್ಲಿ ಏರಿಕೆಯಾಗುತ್ತಿರುವ ಸೋಂಕಿತರ ಸಂಖ್ಯೆಯನ್ನ ಹತೋಟಿಗೆ ತರಲು ಮೈಸೂರು ಜಿಲ್ಲಾಡಳಿತ ಹರಸಾಹಸ ಪಡುತ್ತಿದೆ. ಕೆ. ಆರ್ ನಗರ,ಹುಣಸೂರು, ನಂಜನಗೂಡು ಭಾಗದಲ್ಲಿ ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ.

ಜಿಲ್ಲೆಯಲ್ಲಿ ಪಾಲಿಕೆ ಸಿಬಂದಿ, ಖಾಸಗಿ ಅಸ್ಪತ್ರೆಯ ಸಿಬಂದ್ದಿ, ಅರಣ್ಯ ಇಲಾಖೆ‌ ಹಾಗೂ ಅರೋಗ್ಯ ‌ಇಲಾಖೆಯ ಸಿಬಂದ್ದಿ‌ಗೂ ಮಹಾಮಾರಿ ಕೊರೋನಾ ವೈರಸ್ ವಕ್ಕರಿಸಿದೆ. ಜೆ ಕೆ ಟೈರ್ಸ್ ,ಅಟೋಮೆಟಿವ್ ಅಕ್ಸಿಲ್ ಹಾಗೂ ಟಿವಿಎಸ್ ಕಾರ್ಖಾನೆಯ ನೌಕರರಿಗೆ ಸೊಂಕು ತಗುಲಿದೆ.mysore-corona-positive-increase-today-250-case

ನಿನ್ನೆ ಮೈಸೂರಿನಲ್ಲಿ 261  ಕೊರೊನಾ ಸೋಂಕಿನ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿತ್ತು. ನಿನ್ನೆ ಒಂದೇ ದಿನ ಕೊರೋನಾ ಸೋಂಕಿನಿಂದಾಗಿ 11 ಮಂದಿ ಸಾವನ್ನಪ್ಪಿದ್ದರು.

Key words: mysore- corona- positive-increase-today- 250 case