ಮೈಸೂರಿನಲ್ಲಿ  ಹಕ್ಕಿಜ್ವರದ ಭೀತಿ: ತರಕಾರಿ ವ್ಯಾಪಾರಕ್ಕೂ ತಟ್ಟಿದ ಕೊರೋನಾ ಎಫೆಕ್ಟ್….

Promotion

ಮೈಸೂರು,ಮಾ,9,2020(www.justkannada.in): ವಿಶ್ವದಾದ್ಯಂತೆ ಮರಣ ಮೃದಂಗ ಬಾರಿಸುತ್ತಿರುವ ಕೊರೋನಾ ಎಫೆಕ್ಟ್ ಸಾಂಸ್ಕೃತಿಕ ನಗರ ಮೈಸೂರಿನಲ್ಲಿ ತರಕಾರಿ ವ್ಯಾಪರಕ್ಕೂ ತಟ್ಟಿದೆ.

ಕೋರೋನ್ ಎಫೆಕ್ಟ್ ನಿಂದಾಗಿ ಮೈಸೂರು ಎಪಿಎಂಸಿಯಲ್ಲಿ ತರಕಾರಿಗಳ ಬೆಲೆ ಕುಸಿದಿದೆ. ಮಾರ್ಚ್ 5  ರಿಂದ ತರಕಾರಿ ಬೆಲೆ ದಿಢೀರ್ ಕುಸಿತ ಕಂಡಿದ್ದು, ಕಳೆದ ನಾಲ್ಕು ದಿನದಿಂದ ತರಕಾರಿ ಬೆಲೆ ಕಡಿಮೆಯಾಗಿರುವುದಕ್ಕೆ ರೈತರು ಆತಂಕಗೊಂಡಿದ್ದಾರೆ. ವಾರದ ಹಿಂದೆ ಬೆಲೆಗೂ ಈಗೀನ ಬೆಲೆಗೂ ಶೇಕಡಾ 70% ರಷ್ಟು ಇಳಿಕೆಯಾಗಿದೆ.Mysore-Corona- Effect - Vegetable –rate- Decrease- Bird flu

ಟಮೋಟೊ  ಕೆಜಿಗೆ 5ರೂ, ಕೋಸು ಕೆಜಿಗೆ 3ರೂ, ಈರುಳ್ಳಿ10ರೂ ಬೆಂಡಿಕಾಯಿ14ರೂ, ಬದನೆಕಾಯಿ 3ರೂಗೆ ಸೇರಿದಂತೆ ಎಲ್ಲಾ ತರಕಾರಿಗಳಲ್ಲಿ ಬೆಲೆ ಇಳಿಮುಖವಾಗಿದೆ. ಕೊರೊನಾ ಎಫೆಕ್ಟ್ ನಿಂದ ಮೈಸೂರು ಎಪಿಎಂಸಿ ಅಲರ್ಟ್ ಆಗಿದ್ದು ರೈತರ ಜೊತೆ ಸಭೆ ನಡೆಸಲು  ನಿರ್ಧಾರ ಮಾಡಿದೆ. ರೈತರು, ದಲ್ಲಾಳಿಗಳು, ವರ್ತಕರ ಜೊತೆ ನಾಳೆ ಸಭೆ ನಡೆಸಿ ಚರ್ಚಿಸಲು ತೀರ್ಮಾನಿಸಿದೆ.

ಕೊರೋನಾ ವೈರಸ್ ಹಾವಳಿಯ ನಡುವೆಯೇ ಎದುರಾಯ್ತು ಹಕ್ಕಿ ಜ್ವರದ ಭೀತಿ.

ಮೈಸೂರಿನಲ್ಲಿ ಕೊರೋನಾ ವೈರಸ್ ಹಾವಳಿಯ ನಡುವೆಯೇ ಹಕ್ಕಿ ಜ್ವರದ ಭೀತಿ ಎದುರಾಗಿದೆ.ಮೈಸೂರಿನಲ್ಲಿ ಕಳೆದೊಂದು ವಾರದಿಂದ ಸುಮಾರು ಹನ್ನೆರಡು ಕೊಕ್ಕರೆಗಳು ಸಾವನ್ನಪ್ಪಿದ್ದು ಆತಂಕಕ್ಕೆ ಕಾರಣವಾಗಿದೆ.  ನೆರೆಯ ಕೇರಳದಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿರುವುದರಿಂದ ಮೈಸೂರಿಗರಲ್ಲಿ ಕೊಕ್ಕರೆಗಳ ಸಾವು ತಲ್ಲಣವನ್ನುಂಟು ಮಾಡಿದೆ.

ವಾರ್ಡ್ ನಂಬರ್ 55 ರ ವ್ಯಾಪ್ತಿಯಲ್ಲೇ 12 ಕೊಕ್ಕರೆಗಳು ಮೃತಪಟ್ಟಿದ್ದು, ಸ್ಥಳೀಯ ನಗರಪಾಲಿಕೆ ಸದಸ್ಯ ಮಾ. ವಿ. ರಾಮಪ್ರಸಾದ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.  ಕೊಕ್ಕರೆಗಳ ಸಾವಿನ ಬಗ್ಗೆ ಮಹಾನಗರ ಪಾಲಿಕೆಯ ಪಶು ವೈದ್ಯಕೀಯ ಇಲಾಖೆಯ ಸಹಾಯಕ ನಿರ್ದೇಶಕ ಡಾ. ನಾಗರಾಜ್ ಅವರಿಗೆ ರಾಮಪ್ರಸಾದ್ ಮಾಹಿತಿ ನೀಡಿದರು.

ಬಳಿಕ ಸ್ಥಳಕ್ಕಾಗಮಿಸಿದ ಡಾ. ನಾಗರಾಜ್  ಮೃತ ಕೊಕ್ಕರೆಗಳ ದೇಹದ ತುಣುಕುಗಳು ಬೆಂಗಳೂರಿನ ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಯ  ಪ್ರಯೋಗಾಲಯಕ್ಕೆ ರವಾನೆ ಮಾಡಿದ್ದಾರೆ. ಇನ್ನು ಕೊಕ್ಕರೆಗಳ ಸಾವಿಗೆ ಹಕ್ಕಿಜ್ವರವೇ ಕಾರಣವಿರಬಹುದು ಎಂದು ಪಾಲಿಕೆ ಸದಸ್ಯ ಮಾ. ವಿ. ರಾಮಪ್ರಸಾದ್ ಶಂಕೆ ವ್ಯಕ್ತಪಡಿಸಿದ್ದಾರೆ.

 

Key words:   Mysore-Corona- Effect – Vegetable –rate- Decrease- Bird flu