ಮೈಸೂರಿನಲ್ಲಿ ಅನಗತ್ಯವಾಗಿ ಹೊರಗೆ ಬಂದವರಿಗೆ ಶಾಕ್: ವಾಹನಗಳನ್ನ ಸೀಜ್ ಮಾಡಿದ ಪೊಲೀಸರು.

Promotion

ಮೈಸೂರು,ಜೂನ್,22,2021(www.justkannada.in): ಕೊರೋನಾ ಸೋಂಕು ಕಡಿಮೆಯಾಗದ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲೆಯಲ್ಲಿ ಲಾಕ್ ಡೌನ್ ಮುಂದುವರೆಸಲಾಗಿದ್ದು ಈ ಮಧ್ಯೆ ಲಾಕ್ ಡೌನ್ ನಿಯಮ ಉಲ್ಲಂಘಿಸಿ ಹೊರ ಬಂದವರಿಗೆ ಪೊಲೀಸರು ಶಾಕ್ ನೀಡಿದ್ದಾರೆ.jk

ಮೈಸೂರಿನಲ್ಲಿ ಲಾಕ್‌ಡೌನ್ ನಿಯಮ ಮೀರಿ ಹೊರಗೆ ಓಡಾಡುತ್ತಿದ್ದವರ ವಾಹನಗಳನ್ನ ಪೊಲೀಸರು ಸೀಜ್ ಮಾಡಿದ್ದಾರೆ. 75ಕ್ಕೂ ಹೆಚ್ಚು ವಾಹನಗಳು ಸೀಜ್ ಆಗಿವೆ  ಮೈಸೂರಿನಲ್ಲಿ ಈಗಾಗಲೇ ಕರೋನಾ ಮಿತಿಮೀರಿದ ಹಿನ್ನಲೆ, ಕರೋನಾ ಕಂಟ್ರೋಲ್ ಮಾಡಲು ಪೊಲೀಸ್ ಇಲಾಖೆ ಪಣ ತೊಟ್ಟಿದ್ದು, ಹೊರಗೆ ಬಾರದಂತೆ ಸೂಚನೆ ಕೊಟ್ಟರೂ ಸಹ ಜನರ ಅನಗತ್ಯ ಓಡಾಟ ನಡೆಯುತ್ತಿದೆ.

ಹೀಗಾಗಿ ಪೊಲೀಸರು ತಪಾಸಣೆ ನಡೆಸಿ ಅನಗತ್ಯವಾಗಿ ಓಡಾಡುವವರ ವಾಹನ  ಸೀಜ್ ಮಾಡುತ್ತಿದ್ದಾರೆ. ಇನ್ನು ಈಗಾಗಲೇ ನಗರದಲ್ಲಿ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ನಿಷೇದಾಜ್ಞೆ ಜಾರಿ ಮಾಡಿದ್ದಾರೆ. ಮೈಸೂರಿನಾದ್ಯಂತ ಪೊಲೀಸರು ತಪಾಸಣೆ ನಡೆಸುತ್ತಿದ್ದು  ನಗರ ಬಸ್ ನಿಲ್ದಾಣದ ಬಳಿ ವಾಹನಗಳನ್ನ ಸೀಜ್‌ ಮಾಡಲಾಗಿದೆ. ನಗರ ಪೊಲೀಸರು ನಿನ್ನೆಯಷ್ಟೇ 172 ವಾಹನ ಸೀಜ್ ಮಾಡಿದ್ದರು.

Key words: Mysore-corona-control-More than -75 vehicles – seized – police.